ಹಿಂದೂ-ಮುಸಲ್ಮಾನ ಹೆಸರುಗಳನ್ನು ಬಳಸಿ ಆರೋಪಿಯಿಂದ ಮಹಿಳೆಯ ಮೇಲೆ ಬಲಾತ್ಕಾರ!

೧೦ ಲಕ್ಷ ರೂಪಾಯಿ ವಸೂಲಿ!

ಡೊಂಬಿವಲಿ – ತನ್ನ ಅಸಲಿ ಗುರುತನ್ನು ಮರೆಮಾಚಿ ಮೂರು ವಿಭಿನ್ನ ಹೆಸರುಗಳಿಂದ ಓಡಾಡುತ್ತಿದ್ದ ಮತ್ತು ರೈಲ್ವೆಯಲ್ಲಿ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ಮಹಿಳೆಯೊಬ್ಬರ ಮೇಲೆ ಪದೇ ಪದೇ ಅತ್ಯಾಚಾರ ಎಸಗುತ್ತಿದ್ದ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರಹೀಮ್ ಪದ್ಮಸಿ ಉರ್ಫ್ ಕರೀಮ್ ಮಹಮ್ಮದ್ ಜೈನ್ ಉರ್ಫ್ ಕರಣ್ ಜೋಶಿ ಎಂಬ ಮೂರು ವಿವಿಧ ಹೆಸರುಗಳನ್ನು ಬಳಸಿ ಈತ ತನ್ನ ನಿಜವಾದ ಗುರುತನ್ನು ಮುಚ್ಚಿಟ್ಟಿದ್ದನು. ಈತ ಮಹಿಳೆಯೊಬ್ಬಳನ್ನು ವಂಚಿಸಿ, ಆಕೆಗೆ ಮಾದಕ ದ್ರವ್ಯ ನೀಡಿ ಬಲಾತ್ಕಾರ ಮಾಡಿದ್ದಾನೆ. ಮಹಿಳೆಯ ಆಕ್ಷೇಪಾರ್ಹ ವಿಡಿಯೋ ಮತ್ತು ಛಾಯಾಚಿತ್ರಗಳನ್ನೂ ತೆಗೆದಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ ಅನೇಕ ವರ್ಷಗಳ ಕಾಲ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಹಾಗೂ ಆಕೆಗೆ ೧೦ ಲಕ್ಷ ರೂಪಾಯಿಗಳ ಆರ್ಥಿಕ ವಂಚನೆಯನ್ನೂ ಮಾಡಿದ್ದಾನೆ.

ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದು; ಸದ್ಯ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯು ಬಂಧನದಿಂದ ಪಾರಾಗಲು ಕಲ್ಯಾಣ್ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಿಬಂಧಿತ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದನು; ಆದರೆ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತು. ಪೊಲೀಸರು ಈ ಮಾರುವೇಷದ ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಮಹಿಳೆಯರೇ, ಇಂತಹ ವಂಚಕರಿಂದ ಜಾಗರೂಕರಾಗಿರಿ!