ಅತ್ಯಾಚಾರ ಸಂತ್ರಸ್ತೆಯ ಬಳಿ ಲೈಂಗಿಕ ಸುಖಕ್ಕೆ ಬೇಡಿಕೆ; ಪೊಲೀಸ್ ಕಾನ್ಸ್‌ಟೇಬಲ್ ಇಮ್ರಾನ್ ಖಾನ್ ಬಂಧನ!

ಅಲಿಗಢ (ಉತ್ತರ ಪ್ರದೇಶ) – ಅತ್ಯಾಚಾರ ಸಂತ್ರಸ್ತೆಯಿಂದ ಅಶ್ಲೀಲ ಚಿತ್ರಗಳನ್ನು ಕೇಳಿದ ಮತ್ತು ಅಕ್ರಮ ಸಂಬಂಧಕ್ಕಾಗಿ ಒತ್ತಡ ಹೇರಿದ ಆರೋಪದ ಮೇಲೆ ಇಲ್ಲಿನ ಖುರೇಶಿ ಪೊಲೀಸ್ ಠಾಣೆಯ ನಗಲಾ ಪಟ್ವಾರಿ ಚೌಕಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆ (ಹೆಡ್ ಕಾನ್ಸ್‌ಟೇಬಲ್) ಇಮ್ರಾನ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಜಮಾಲ್‌ಪುರದ ಸಂತ್ರಸ್ತೆಯೊಬ್ಬರು ಮದುವೆಯ ಆಮಿಷವೊಡ್ಡಿ ಅತ್ಯಾಚಾರ ಎಸಗಿದ ಜೀಶನ್ ಎಂಬ ಯುವಕನ ವಿರುದ್ಧ ದೂರು ನೀಡಿದ್ದರು. ತನಿಖೆಯ ನೆಪದಲ್ಲಿ ಇಮ್ರಾನ್ ಸಂತ್ರಸ್ತೆಯನ್ನು ಪೊಲೀಸ್ ಚೌಕಿಗೆ ಕರೆಸಿಕೊಂಡಿದ್ದ ಮತ್ತು ಆನಂತರ ವಾಟ್ಸಾಪ್ ಕರೆ ಮೂಲಕ ಆಕೆಗೆ ಕಿರುಕುಳ ನೀಡಲು ಆರಂಭಿಸಿದ್ದ. ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಮತ್ತು ಈದ್ ಹಬ್ಬಕ್ಕೆ ಬಟ್ಟೆ ಕೊಡಿಸುವುದಾಗಿ ಆಮಿಷವೊಡ್ಡಿ ಆಕೆಯನ್ನು ತನ್ನ ಕೋಣೆಗೆ ಬರುವಂತೆ ಒತ್ತಾಯಿಸಿದ್ದ. ಸಂತ್ರಸ್ತೆ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದರೆ ಮಾತ್ರ ತಾನು ಜೀಶನ್‌ನನ್ನು ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಆತ ಶರತ್ತು ವಿಧಿಸಿದ್ದ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಆಕೆಯನ್ನೇ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ. ಸಂತ್ರಸ್ತೆ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ ನಂತರ ಇಮ್ರಾನ್‌ನನ್ನು ಬಂಧಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರಿಗೆ ಶರಿಯತ್ ಕಾನೂನಿನಂತೆ ಕೈ-ಕಾಲು ಕತ್ತರಿಸುವ ಅಥವಾ ಸಾರ್ವಜನಿಕವಾಗಿ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯಪಡಬೇಕಿಲ್ಲ!