ಕುಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿಯ ಹಿಂದೂದ್ರೋಹಿ ಹೇಳಿಕೆಗಳು (‘ಯೂಟ್ಯೂಬರ್’ ಎಂದರೆ ಯೂಟ್ಯೂಬ್‌ನಲ್ಲಿ ವಿಡಿಯೋ ಪ್ರಸಾರ ಮಾಡುವವನು.)

ನವದೆಹಲಿ – ರಾಮಾಯಣ ಮತ್ತು ಮಹಾಭಾರತಗಳಲ್ಲಿ ರಾಮ ಮತ್ತು ಶ್ರೀಕೃಷ್ಣರು ಮಾಂಸ ತಿನ್ನುತ್ತಿರುವ ಹಾಗೂ ಮದ್ಯಪಾನ ಮಾಡುತ್ತಿರುವ ಉದಾಹರಣೆಗಳು ಸಿಗುತ್ತವೆ ಎಂದು ತೋರಿಸಲಾಗಿದೆ. ಸೀತೆ ಗಂಗಾ ನದಿಗೆ ಮಾಂಸಾಹಾರದ ನೈವೇದ್ಯವನ್ನು ಅರ್ಪಿಸುತ್ತಿದ್ದಳು. ಹಾಗೆಯೇ ‘ಕೃಷ್ಣ ಮತ್ತು ಅರ್ಜುನ ಇಬ್ಬರೂ ಮದ್ಯಪಾನ ಮಾಡುತ್ತಿದ್ದರು’, ಎಂದು ಸ್ವಾಮಿ ವಿವೇಕಾನಂದರ ‘ಈಸ್ಟ್ ಅಂಡ್ ವೆಸ್ಟ್’ ಪುಸ್ತಕದ ‘ಉದ್ಯೋಗ ಪರ್ವ’ದ ೫೮ ನೇ ಅಧ್ಯಾಯದಲ್ಲಿ ನಮೂದಿಸಲಾಗಿದೆ, ಎಂಬ ದಾವೆಯನ್ನು ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಒಂದು ಯೂಟ್ಯೂಬ್ ಕಾರ್ಯಕ್ರಮದಲ್ಲಿ ಮಾಡಿದ್ದಾನೆ. (ಶ್ರೀರಾಮನವಮಿಯ ಹಿನ್ನೆಲೆಯಲ್ಲಿ ಧ್ರುವ್ ರಾಠಿಗೆ ಈ ಮಾಹಿತಿ ನೀಡುವ ದುರ್ಬುದ್ಧಿ ಹೇಗೆ ಬಂತು ? ಸುಳ್ಳು ಕಥೆಗಳನ್ನು ಸೃಷ್ಟಿಸಿ ಹಿಂದೂಗಳ ಹಬ್ಬಗಳ ಸಮಯದಲ್ಲಿ ಅವರ ಬ್ರೈನ್ ವಾಶ್ ಹೇಗೆ ಮಾಡಲಾಗುತ್ತಿದೆ ಎಂಬುದನ್ನು ತಿಳಿಯಿರಿ ! – ಸಂಪಾದಕರು) ಈ ವಿಡಿಯೋ ಪ್ರಸಾರವಾಗುತ್ತಿದ್ದು, ಈ ಹೇಳಿಕೆಗಾಗಿ ರಾಠಿ ಮೇಲೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಹಾಗೆಯೇ ರಾಠಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ.
‘ಪಾಂಡವರು ವನವಾಸದಲ್ಲಿ ಜಿಂಕೆಗಳನ್ನು ಕೊಂದಿದ್ದರಿಂದ ಅವು ನಾಮಾವಶೇಷವಾದವಂತೆ !’
ಧ್ರುವ್ ರಾಠಿ, ಶ್ರೀರಾಮ ವನವಾಸದಲ್ಲಿದ್ದಾಗ ಮಾಂಸ ಸೇವನೆ ಮಾಡುತ್ತಿದ್ದನು. ವನವಾಸದ ೧೪ ವರ್ಷಗಳ ದೀರ್ಘಾವಧಿಯಲ್ಲಿ ಅವರು ‘ಪನೀರ್ ಬಟರ್ ಮಸಾಲಾ’ ಅಥವಾ ಹಣ್ಣುಗಳನ್ನು ತಿಂದು ಬದುಕುವುದು ಸಾಧ್ಯವೇ ? ಮಹಾಭಾರತದ ‘ವನ ಪರ್ವ’ದ ೨೫೬ ನೇ ಅಧ್ಯಾಯದಲ್ಲಿ ಬರೆಯಲಾಗಿದೆ, ಯುಧಿಷ್ಠಿರನಿಗೆ ಒಂದು ಕನಸು ಬಿದ್ದಿತ್ತು. ಆ ಕನಸಿನಲ್ಲಿ ಅನೇಕ ಜಿಂಕೆಗಳು ಅವನ ಕಡೆಗೆ ಬರುತ್ತಿರುವುದು ಕಾಣಿಸುತ್ತವೆ; ಆದರೆ ಅವನ ಸಹೋದರರು ಈ ಜಿಂಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಂದರು. ಈ ಹತ್ಯೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾಡಲಾಯಿತೆಂದರೆ, ಆ ಸಮಯದಲ್ಲಿ ಜಿಂಕೆಗಳು ನಾಮಾವಶೇಷವಾದವು. (ಮೂಲತಃ ಮಹಾಭಾರತವನ್ನು ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದೆ. ಸಂಸ್ಕೃತ ಭಾಷೆಯನ್ನು ಕಲಿತು ಅದನ್ನು ಅರ್ಥಮಾಡಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಹಾಗಾದರೆ ಜರ್ಮನಿಯಲ್ಲಿ ಕುಳಿತು ಧ್ರುವ್ ರಾಠಿಗೆ ಮಹಾಭಾರತದಲ್ಲಿ ಏನು ಬರೆಯಲಾಗಿದೆ ಎಂದು ಹೇಗೆ ತಿಳಿಯಿತು ? – ಸಂಪಾದಕರು) ಈ ಬಗ್ಗೆ ಯುಧಿಷ್ಠಿರ ಶೋಕ ವ್ಯಕ್ತಪಡಿಸುತ್ತಿರುವುದಾಗಿ ಮಹಾಭಾರತದಲ್ಲಿ ಹೇಳಲಾಗಿದೆ. ಹಾಗೆಯೇ ಪಾಂಡವರು ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಜಿಂಕೆಯ ಮಾಂಸವನ್ನು ತಿಂದು ಕಳೆದಿದ್ದರು ಎಂಬ ಉಲ್ಲೇಖವೂ ಮಹಾಭಾರತದಲ್ಲಿದೆ ಎಂದು ಅವನು ಹೇಳಿದ್ದಾನೆ.
ಸಂಪಾದಕೀಯ ನಿಲುವುಧ್ರುವ್ ರಾಠಿ ವಿದೇಶದಲ್ಲಿ ಕುಳಿತು ಇಂತಹ ಹಿಂದೂದ್ರೋಹಿ ಮತ್ತು ಭಾರತದ್ರೋಹಿ ಹೇಳಿಕೆಗಳಿರುವ ವಿಡಿಯೋಗಳನ್ನು ತಯಾರಿಸಿ ಪ್ರಸಾರ ಮಾಡುತ್ತಿದ್ದಾನೆ. ಈ ಪ್ರಕರಣದಲ್ಲಿ ಭಾರತ ಸರಕಾರವು ಕಠಿಣ ಕ್ರಮ ಕೈಗೊಂಡು ಆತನನ್ನು ವಿದೇಶದಿಂದ ಬಂಧಿಸಿ ಭಾರತಕ್ಕೆ ತರುವುದು ಅವಶ್ಯಕವಾಗಿದೆ! ಇಸ್ರೇಲ್‌ನಂತಹ ದೇಶವಾಗಿದ್ದರೆ, ಅದು ಇಂಥವರನ್ನು ಹಿಡಿದು ತರುತ್ತಿತ್ತು! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein