|

ಮುಂಬಯಿ – ಮಾಲಾಡ್ (ಪೂರ್ವ) ರೈಲು ನಿಲ್ದಾಣದ ಹೊರಗೆ ಮಾರ್ಚ್ 20 ರಂದು ಸಂಜೆ ಇಬ್ಬರು ಹಿಂದೂ ಯುವತಿಯರು ರಿಕ್ಷಾಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಇಬ್ಬರು ಮುಸಲ್ಮಾನ ಮಹಿಳೆಯರು ಸಾಲನ್ನು ಮುರಿದು ರಿಕ್ಷಾದಲ್ಲಿ ಹೋಗಿ ಕುಳಿತರು. ಈ ಬಗ್ಗೆ ಯುವತಿಯರು ಪ್ರಶ್ನಿಸಿದಾಗ ಮುಸಲ್ಮಾನ ಮಹಿಳೆಯರು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ರಾತ್ರಿ 8 ಗಂಟೆಗೆ ಆ ಇಬ್ಬರು ಹಿಂದೂ ಯುವತಿಯರು ಮತ್ತು ಅವರ ಸ್ನೇಹಿತ ಮತ್ತೊಂದು ರಿಕ್ಷಾದಲ್ಲಿ ಬರುತ್ತಿದ್ದಾಗ ಲಕ್ಷ್ಮಣನಗರದಲ್ಲಿ ಅವರನ್ನು ತಡೆದರು, ಅಲ್ಲದೆ ಇಸ್ಲಾಂಪುರಾದಿಂದ 20 ರಿಂದ 25 ಮುಸಲ್ಮಾನ ಯುವಕರನ್ನು ಕರೆಸಿದರು. ಅವರೆಲ್ಲರೂ ಆ ಮೂವರು ಹಿಂದೂಗಳನ್ನು ರಿಕ್ಷಾದಿಂದ ಹೊರಗೆ ಎಳೆದು ಥಳಿಸಿದರು. (ಮುಸಲ್ಮಾನ ಮಹಿಳೆಯರೇ ಈ ಗುಂಪನ್ನು ಒಗ್ಗೂಡಿಸಿದರು. ಇದರಿಂದಲೇ ಅವರು ಎಷ್ಟು ಸಂಘಟಿತರಾಗಿದ್ದಾರೆ ಎಂಬುದು ತಿಳಿಯುತ್ತದೆ! ಹಿಂದೂಗಳು ಇದರಿಂದ ಪಾಠ ಕಲಿಯಬೇಕು! – ಸಂಪಾದಕರು) ಈ ಸಮಯದಲ್ಲಿ ಹಿಂದೂ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ಅಂಜುಮ, ಫಾತಿಮಾ ಅಕ್ಬರ್, ಇದ್ರಿಸ್ ಸುರ್ತಿ, ಸಾಹಿಲ್ ಮತ್ತು ಇಮ್ತಿಯಾಜ್ ಎಂಬ 5 ಮುಸಲ್ಮಾನರನ್ನು ಬಂಧಿಸಿದ್ದಾರೆ, ಹಾಗೆಯೇ 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಿಂದಾಗಿ ಕೆಲವು ಹಿಂದೂಗಳು ಭಯಭೀತರಾಗಿದ್ದರೆ, ಇನ್ನು ಕೆಲವು ಹಿಂದೂಗಳು ಆಕ್ರೋಶಗೊಂಡಿದ್ದಾರೆ. ಘಟನೆಯ ನಂತರ ಶಿವಸೇನೆ ನಾಯಕ ಸಂಜಯ ನಿರುಪಮ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಘಟನೆಯನ್ನು ಖಂಡಿಸಿದರು. ಅವರು ಮಾತನಾಡುತ್ತಾ, “ಈ ಘಟನೆಯನ್ನು ನೋಡಿದರೆ ಇಡೀ ಮುಂಬಯಿಯ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ಇಸ್ಲಾಂಪುರ, ಪಠಾಣವಾಡಿ ಮತ್ತು ಕುರಾರ್ ನಂತಹ ಭಾಗಗಳಲ್ಲಿ ಅಸುರಕ್ಷತೆ ಹೆಚ್ಚುತ್ತಿದೆ. ಪೊಲೀಸರ ಕ್ರಮದಲ್ಲಿ ಸಾಮಾನ್ಯವಾಗಿ ವಿಳಂಬವಾಗುತ್ತದೆ. ಕಳೆದ ವರ್ಷವೂ ಈ ಭಾಗದಲ್ಲಿ ಇಂತಹದೇ ಘಟನೆ ನಡೆದಿತ್ತು,” ಎಂದು ಹೇಳಿದರು. (ಪೊಲೀಸರು ಸಕಾಲದಲ್ಲಿ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ! ಮತಾಂಧರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರನ್ನು ಕೆಲಸದಿಂದ ವಜಾಗೊಳಿಸಬೇಕು! – ಸಂಪಾದಕರು) ಈ ಸಮಯದಲ್ಲಿ ಎಲ್ಲಾ ಹಿಂದೂಗಳು ಒಗ್ಗೂಡಿ ‘ಹನುಮಾನ್ ಚಾಲೀಸಾ’ ಪಠಿಸಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!