|

ನಾಗಪುರ – ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶಾದ್ಯಂತ ವಾಣಿಜ್ಯ ಎಲ್.ಪಿ.ಜಿ. ಅನಿಲ ಪೂರೈಕೆಯು ವ್ಯತ್ಯಯಗೊಂಡಿದೆ. ಇದರ ಪರಿಣಾಮವಾಗಿ ವಿದರ್ಭದಲ್ಲಿ ‘ಪಾರ್ಲೆ-ಜಿ’ ಬಿಸ್ಕತ್ತು ಉತ್ಪಾದಿಸುವ ಎರಡು ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ‘ಪಾರ್ಲೆ-ಜಿ’ಯ ಇತರ ಘಟಕಗಳ ಮೇಲೆಯೂ ಇದರ ಪ್ರಭಾವ ಬೀರಿದೆ. ನಾಗಪುರದ ‘ಹಲ್ದಿರಾಮ್’ ಮತ್ತು ‘ಅಜಿತ್ ಬೇಕರಿ’ಗಳ ಉತ್ಪಾದನೆ ಮೇಲೆಯೂ ಇದರ ಪರಿಣಾಮ ಬೀರಿದೆ.
ಖಾಮ್‌ಗಾಂವ್ (ಬುಲ್ಢಾಣಾ) ಜಿಲ್ಲೆಯ ‘ಶಿವಾಂಗಿ ಬೇಕರ್ಸ್’ನಲ್ಲಿ ‘ಕ್ರೀಮ್’ ಮತ್ತು ‘ಗ್ಲುಕೋಸ್’ ಬಿಸ್ಕತ್ತುಗಳ ಉತ್ಪಾದನೆಯು ಮಾರ್ಚ್ ೧೧ ರಿಂದ ಸ್ಥಗಿತಗೊಂಡಿದೆ. ಇದರಿಂದಾಗಿ ೫೦೦ ಕಾರ್ಮಿಕರು ಪ್ರತಿದಿನ ಕೆಲಸಕ್ಕೆ ಬಂದು ಹಾಜರಾತಿ ಹಾಕಿ ವಾಪಸ್ ಹೋಗುತ್ತಿದ್ದಾರೆ. ಕೆಲಸವಿಲ್ಲದ ಕಾರಣ ಸಂಸ್ಥೆಯು ಅವರಿಗೆ ಅರ್ಧದಷ್ಟು ಮಾತ್ರ ವೇತನ ನೀಡಿದೆ, ಇದರಿಂದ ಕಾರ್ಮಿಕರು ಆಕ್ರೋಶಗೊಂಡಿದ್ದಾರೆ.
ನಾಗಪುರದ ೧೨೫ ಹೋಟೆಲ್‌ಗಳಲ್ಲಿ ಚೈನೀಸ್ ಖಾದ್ಯ ಪದಾರ್ಥಗಳ ತಯಾರಿಕೆಯನ್ನು ನಿಲ್ಲಿಸಲಾಗಿದೆ. ಕೆಲವು ಕಡೆಗಳಲ್ಲಿ ಕಾರ್ಮಿಕರ ಊಟದಲ್ಲಿ ಒಂದು ಹೊತ್ತಿನ ಚಪಾತಿ ನೀಡುವುದನ್ನು ಬಂದ್ ಮಾಡಲಾಗಿದೆ. ಊಟದ ಬದಲಾಗಿ ಅನ್ನದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಗುತ್ತಿಗೆ ಕಾರ್ಮಿಕರಿಗೆ ಸ್ವಂತ ನಿವಾಸವಿಲ್ಲದ ಕಾರಣ ಅವರ ಬಳಿ ಮನೆಬಳಕೆಯ ಸಿಲಿಂಡರ್‌ಗಳೂ ಇಲ್ಲ. ಹೊರಗಿನ ಹೋಟೆಲ್ ಮತ್ತು ಖಾನಾವಳಿಗಳು ಬಂದ್ ಆಗಿರುವುದರಿಂದ ಕಾರ್ಮಿಕರು ದಿನಕ್ಕೆ ಕೇವಲ ಒಂದೆರಡು ಹಣ್ಣುಗಳನ್ನು ಮಾತ್ರ ತಿಂದು ಶ್ರಮಪಟ್ಟು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಸಂಪಾದಕೀಯ ನಿಲುವುದೇಶದಲ್ಲಿ ಎದುರಾದ ಈ ಆರ್ಥಿಕ ಸಂಕಟವನ್ನು ಎದುರಿಸಲು ಸರಕಾರ, ಆಡಳಿತ ಮತ್ತು ನಾಗರಿಕರು ಸನ್ನದ್ಧರಾಗಿದ್ದಾರೆಯೇ ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!