• ರಾಜಸ್ಥಾನ ಮತ್ತು ದೆಹಲಿಯಲ್ಲಿ ಮಳೆ, ಒಡಿಶಾದ ಪುರಿಯಲ್ಲಿ ಮಂಜು• ೩ ದಿನಗಳ ನಂತರ ‘ವೆಸ್ಟರ್ನ್ ಡಿಸ್ಟರ್ಬೆನ್ಸ್’ ಮತ್ತೆ ಸಕ್ರಿಯ |
(‘ವೆಸ್ಟರ್ನ್ ಡಿಸ್ಟರ್ಬೆನ್ಸ್’ ಎಂದರೆ ಮೆಡಿಟರೇನಿಯನ್ ಸಮುದ್ರದಲ್ಲಿ ಉಗಮಿಸುವ, ಹೆಚ್ಚುವರಿ-ಉಷ್ಣವಲಯದ ಚಂಡಮಾರುತದ ವ್ಯವಸ್ಥೆಯಾಗಿದ್ದು, ಇದು ಉತ್ತರ ಭಾರತದಲ್ಲಿ ಚಳಿಗಾಲದ ಮಳೆ ಮತ್ತು ಹಿಮಪಾತಕ್ಕೆ ಕಾರಣವಾಗುತ್ತದೆ.)

ನವ ದೆಹಲಿ – ರಾಜಧಾನಿ ದೆಹಲಿ ಮತ್ತು ರಾಜಸ್ಥಾನ ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ ೨೩ ರಂದು ಬೆಳಿಗ್ಗೆ ಮಳೆಯಾಗಿದೆ. ಇನ್ನೊಂದೆಡೆ ಒಡಿಶಾದ ಪುರಿಯಲ್ಲಿ ದಟ್ಟವಾದ ಮಂಜು ಕವಿದಿತ್ತು, ಇದರಿಂದಾಗಿ ಭಗವಾನ್ ಜಗನ್ನಾಥನ ದೇವಾಲಯವು ಮಂಜಿನಿಂದ ಆವರಿಸಿತ್ತು. ಹಾಗೆಯೇ ಉತ್ತರಾಖಂಡದ ಕೇದಾರನಾಥದಲ್ಲಿ ಹಿಮಪಾತದಿಂದಾಗಿ ೪ ಅಡಿಗಳವರೆಗೆ ಹಿಮದ ಪದರ ಸಂಗ್ರಹವಾಗಿದೆ. ಏಪ್ರಿಲ್ ೨೨ ರಿಂದ ಕೇದಾರನಾಥ ಧಾಮ ಯಾತ್ರೆಯು ಆರಂಭವಾಗಲಿದೆ.
೧. ದೇಶದಲ್ಲಿ ಸತತವಾಗಿ ಬರುತ್ತಿರುವ ‘ವೆಸ್ಟರ್ನ್ ಡಿಸ್ಟರ್ಬೆನ್ಸ್’ನಿಂದಾಗಿ ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿದಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಮಾರ್ಚ್ ೨೬ ರಿಂದ ಒಂದು ‘ವೆಸ್ಟರ್ನ್ ಡಿಸ್ಟರ್ಬೆನ್ಸ್’ ಸಕ್ರಿಯವಾಗಲಿದೆ. ಅದರ ಪ್ರಭಾವದಿಂದಾಗಿ ಭಾರಿ ಮಳೆ ಮತ್ತು ಬಿರುಗಾಳಿಯ ಪರಿಸ್ಥಿತಿ ನಿರ್ಮಾಣವಾಗಲಿದೆ; ಆದರೆ ವಾಯವ್ಯ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಮುಂದಿನ ೫ ದಿನಗಳಲ್ಲಿ ತಾಪಮಾನವು ೪ ರಿಂದ ೭ ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಬಹುದು.
೨. ಮಾರ್ಚ್ ೨೪ ರಂದು ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡಗಳಲ್ಲಿ ಹಗುರವಾದ ಮಳೆಯ ಸಾಧ್ಯತೆಯಿದೆ. ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಬಹುದು.
೩. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಮೋಡಕವಿದ ವಾತಾವರಣವಿರಲಿದೆ. ಕೆಲವು ಕಡೆ ತುಂತುರು ಮಳೆಯಾಗಬಹುದು. ಮಹಾರಾಷ್ಟ್ರ, ಗುಜರಾತ್, ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಕೆಲವು ಭಾಗಗಳಲ್ಲಿ ಹಗುರವಾದ ಮಳೆಯಾಗಬಹುದು. ರಾಜ್ಯದಲ್ಲಿ ತೇವಾಂಶಭರಿತ ವಾತಾವರಣ ಮುಂದುವರಿಯಲಿದೆ.
೪. ಮಾರ್ಚ್ ೨೫ ರಂದು ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡಗಳಲ್ಲಿ ಹವಾಮಾನವು ಸ್ವಚ್ಛವಾಗಿರಲಿದೆ; ಆದರೆ ಚಳಿ ಮುಂದುವರಿಯುವ ಸಾಧ್ಯತೆಯಿದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ರಾಜ್ಯಗಳ ಹೆಚ್ಚಿನ ಕಡೆಗಳಲ್ಲಿ ಹವಾಮಾನವು ಸ್ವಚ್ಛವಾಗಿರಲಿದೆ. ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆಯಿದೆ.
೫. ಮಹಾರಾಷ್ಟ್ರ, ಗುಜರಾತ್, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹವಾಮಾನವು ಸಾಮಾನ್ಯವಾಗಿರಲಿದೆ; ಆದರೆ ಕೆಲವು ಕಡೆ ಹಗುರವಾದ ಮಳೆಯಾಗಬಹುದು ಮತ್ತು ಸೆಖೆಯ ಅನುಭವವಾಗಬಹುದು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ