ಸನಾತನ ಸಂಸ್ಥೆಯ ಕಾರ್ಯಪದ್ಧತಿಯ ವಿಷಯದಲ್ಲಿ ಅರಿವಾದ ಸೂತ್ರಗಳು

೨೩ ಮಾರ್ಚ್ : ಸನಾತನ ಸಂಸ್ಥೆಯ ೨೭ ನೆಯ ವರ್ಧಂತ್ಯುತ್ಸವ

೧. ಸನಾತನ ಸಂಸ್ಥೆಯ ಕಾರ್ಯಪದ್ದತಿ ಮತ್ತು ಉದ್ದೇಶ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಮತ್ತು ರಾಷ್ಟ್ರ-ಧರ್ಮದ ಕುರಿತು ಸಮರ್ಪಣಭಾವವನ್ನು ಕಲಿಸುವುದಾಗಿದೆ ಹಾಗೂ ‘ಅದಕ್ಕೆ ದೇವರ ಅಧಿಷ್ಠಾನವಿದೆ’, ಎಂಬುದು ನನಗೆ ಅರಿವಾಯಿತು.

೨. ಅನೇಕ ಧಾರ್ಮಿಕ ಸಂಸ್ಥೆಗಳು (ಪ್ರತಿಷ್ಠಾನ) ವ್ಯಕ್ತಿಯ ಪ್ರಾಪಂಚಿಕ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸಲು ತಾತ್ಕಾಲಿಕ ಮಾರ್ಗದರ್ಶನ ಮಾಡುವುದು ಕಾಣಿಸುತ್ತದೆ, ‘ಸನಾತನ ಸಂಸ್ಥೆ ಈಶ್ವರಪ್ರಾಪ್ತಿ ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸುತ್ತದೆ.

ಶ್ರೀ. ವೈಭವ ಬಾಳಕೃಷ್ಣ ಪಾವಸ್ಕರ್

೩. ‘ಗುರುಕೃಪಾಯೋಗಾನುಸಾರ ಸಾಧನೆ ಎಂದರೇನು ?, ವ್ಯಕ್ತಿಯಲ್ಲಿನ ಸ್ವಭಾವದೋಷ ಹಾಗೂ ಅಹಂ ನಷ್ಟಗೊಳಿಸದೆ, ಗುಣಸಂವರ್ಧನೆ ಮಾಡದಿದ್ದರೆ, ಅವನಿಗೆ ಚಿರಂತನ ಆನಂದ, ಅಂದರೆ ಈಶ್ವರಪ್ರಾಪ್ತಿ ಆಗುವುದಿಲ್ಲ’, ಎಂಬುದನ್ನು ಶಾಸ್ತ್ರೀಯ ಪದ್ಧತಿಯಲ್ಲಿ ಮನವರಿಕೆ ಮಾಡಿಕೊಡುವ ಪರಾತ್ಪರ ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ) ಬೋಧನೆ ಅತ್ಯಂತ ಮಹತ್ವದ್ದಾಗಿದೆ.

೪. ಸಮಷ್ಟಿ ಸೇವೆ ಮಾಡುವಾಗ ನನಗೆ ಅನೇಕ ಬಾರಿ ನಕಾರಾತ್ಮಕ ವಿಚಾರ ಬರುತ್ತಿತ್ತು; ಆದರೆ ಆಗ ಯಾರಾದರೂ ಸಾಧಕರಿಂದ ಸಂಚಾರಿವಾಣಿ ಕರೆ ಬಂದು ಅದರಿಂದ ಮಾರ್ಗ ಸಿಗುತ್ತಿತ್ತು, ಇದೊಂದು ಅನುಭೂತಿಯೆ ಆಗಿದೆ’, ಎಂಬುದು ನನಗೆ ನಂತರ ಅರಿವಾಗುತ್ತಿತ್ತು. ಆಗ ಸಾಧಕರ ಮೂಲಕ ಗುರುದೇವರೆ ನನ್ನನ್ನು ಸಂಪರ್ಕಿಸಿ ನನ್ನ ಅಡಚಣೆಯನ್ನು ದೂರಗೊಳಿಸುತ್ತಿದ್ದಾರೆ’, ಎಂಬುದು ಅರಿವಾಗಿ ನನ್ನ ಭಾವಜಾಗೃತಿಯಾಗುತ್ತಿತ್ತು.’ – ಶ್ರೀ. ವೈಭವ ಬಾಳಕೃಷ್ಣ ಪಾವಸ್ಕರ್, ಚಿಂಚವಡ, ಪುಣೆ. (೨೬.೪.೨೦೨೩)

ಸನಾತನ ಸಂಸ್ಥೆಯ ಜಾಲತಾಣಕ್ಕೆ ಬೇಟಿ ನೀಡಿ – https://www.sanatan.org/kannada/