ಖಾರ್ಘರ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲೆ ದೌರ್ಜನ್ಯ ಎಸಗಿದ ಮೌಲಾನಾನ ಬಂಧನ! Kharghar Maulana Arrested

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಪಂಡಿತ)

ಖಾರ್ಘರ್ (ನವಿ ಮುಂಬಯಿ) – ಇಲ್ಲಿ 11 ವರ್ಷದ ಬಾಲಕನ ಮೇಲೆ ದೌರ್ಜನ್ಯ ಎಸಗಿದ ಮೌಲಾನಾನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನು ಆಟವಾಡುತ್ತಿದ್ದಾಗ, ಮೌಲಾನಾ ಅವನನ್ನು ದ್ವಿಚಕ್ರ ವಾಹನದಲ್ಲಿ ಸುತ್ತಾಡಿಸಿಕೊಂಡು ಬರುವ ನೆಪದಲ್ಲಿ ಹೊರಗೆ ಕರೆದೊಯ್ದು, ಖಾಲಿ ಮೈದಾನವೊಂದರಲ್ಲಿ ಅವನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದೆ.

ಸಂಪಾದಕೀಯ ನಿಲುವು

ಈ ಘಟನೆಯಲ್ಲಿ ಮೌಲಾನಾ ಬದಲಿಗೆ ಯಾರಾದರೂ ಹಿಂದೂ ಸಾಧು ಇದ್ದಿದ್ದರೆ, ಇಷ್ಟೊತ್ತಿಗಾಗಲೇ ಈ ಸುದ್ದಿ ಗಾಳಿಯಂತೆ ಹರಡುತ್ತಿತ್ತು. ಎಷ್ಟೆಂದರೆ, ‘ನ್ಯೂಯಾರ್ಕ್ ಟೈಮ್ಸ್’, ‘ಬಿಬಿಸಿ’ಯಂತಹ ಮಾಧ್ಯಮಗಳು ಸಹ ಇದಕ್ಕೆ ಹೆಚ್ಚಿನ ಪ್ರಚಾರ ನೀಡಿ ಹಿಂದೂ ಸಂತರನ್ನು ಅಪಕೀರ್ತಿಗೊಳಿಸುತ್ತಿದ್ದವು. ಈಗ ದೌರ್ಜನ್ಯ ಎಸಗಿರುವುದು ಮೌಲಾನಾ ಆಗಿರುವುದರಿಂದ, ಜಿಲ್ಲೆಯ ಹೊರಗೆ ಈ ಸುದ್ದಿಗೆ ಎಲ್ಲಿಯೂ ವಿಶೇಷ ಪ್ರಚಾರ ಸಿಗುವುದಿಲ್ಲ! ಈ ಪರಿಸ್ಥಿತಿಯು ಪ್ರಸಾರಮಾಧ್ಯಮಗಳಿಗಲ್ಲ, ಬದಲಾಗಿ ಹಿಂದೂಗಳಿಗೆ ಲಜ್ಜಾಸ್ಪದ!