‘ಜೈ ಶ್ರೀರಾಮ್’ ಘೋಷಣೆಗಾಗಿ ಪಟ್ಟು ಹಿಡಿದ ಶಿವಸೇನಾ ಶಾಸಕಿ ದೇವಯಾನಿ ಫರಾಂದೆ !

ಮುಂಬಯಿ, ಮಾರ್ಚ್ ೧೮ (ಸುದ್ದಿ) – ವಿಧಾನಸಭೆಯಲ್ಲಿ ಮಾರ್ಚ್ ೧೮ ರಂದು ಪ್ರಶ್ನೋತ್ತರ ವೇಳೆಯಲ್ಲಿ ಮನರೇಗಾ ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದಾಗ, ಹಿಂದುತ್ವದ ಅಂಶಗಳ ಮೇಲೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಠಾಕ್ರೆ ಗುಂಪಿನ ಶಾಸಕ ಭಾಸ್ಕರ ಜಾಧವ ಅವರು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡುವಾಗ, ‘ಜನರನ್ನು ಜೈ ಶ್ರೀರಾಮ್ ಮಾಡಲು ನಿರ್ಧರಿಸಿದ್ದೀರಾ?’ ಎಂದು ವ್ಯಂಗ್ಯವಾಗಿ ಟೀಕಿಸಿದರು. (ಜಾಧವ ಅವರು ಈ ಮೂಲಕ ಸರಕಾರದ ಧೋರಣೆಗಳು ಕಾರ್ಮಿಕರನ್ನು ಮರಣೋನ್ಮುಖರನ್ನಾಗಿ (ರಾಮ್ ನಾಮ್ ಸತ್ಯ ಹೈ) ಮಾಡುತ್ತಿವೆಯೇ? ಎಂದು ಹೇಳಬಯಸಿದ್ದರು.) ಇದಕ್ಕೆ ತಕ್ಷಣವೇ ಆಕ್ರಮಣಕಾರಿ ಪ್ರತಿಕ್ರಿಯೆ ನೀಡಿದ ಭಾಜಪ ಪ್ರಖರ ಹಿಂದುತ್ವನಿಷ್ಠ ಶಾಸಕಿ ದೇವಯಾನಿ ಫರಾಂದೆ ಅವರು, ಜಾಧವ ಅವರಿಗೆ ‘ಜೈ ಶ್ರೀರಾಮ್’ ಹೇಳಬೇಕೆಂದು ಪಟ್ಟು ಹಿಡಿದರು.
ಪ್ರಭು ಶ್ರೀರಾಮನ ನಾಮವನ್ನು ಅಪಮಾನಿಸುವ ಪ್ರಯತ್ನ!
ಶಾಸಕ ಜಾಧವ ಅವರು ಕಾರ್ಮಿಕರ ವೇತನದ ವಿಷಯವಾಗಿ ಸರಕಾರವನ್ನು ಮುತ್ತಿಗೆ ಹಾಕುವ ಪ್ರಯತ್ನದಲ್ಲಿ ಪ್ರಭು ಶ್ರೀರಾಮನ ಪವಿತ್ರ ನಾಮವನ್ನು ನಕಾರಾತ್ಮಕ ಸಂದರ್ಭದಲ್ಲಿ ಬಳಸಿದರು. ಈ ವಿಷಯ ಗಮನಕ್ಕೆ ಬಂದ ತಕ್ಷಣ ಶಾಸಕಿ ಫರಾಂದೆ ಅವರು ತಮ್ಮ ಜಾಗದಿಂದ ಎದ್ದು ಮೊದಲ ಸಾಲಿಗೆ ಬಂದು ಜಾಧವ ಅವರನ್ನು ತಡೆದರು. ‘ನೀವು ಜೈ ಶ್ರೀರಾಮ್ ಎನ್ನಿ’ ಎಂದು ಅವರು ಒತ್ತಾಯಿಸಿದರು. ಪ್ರಭು ಶ್ರೀರಾಮನ ನಾಮಸ್ಮರಣೆಯನ್ನು ವಿರೋಧಿಸುವ ಮತ್ತು ಅದನ್ನು ಉಪಹಾಸ ಮಾಡುವ ವೃತ್ತಿಯನ್ನು ಅವರು ಸದನದಲ್ಲಿ ಕಟುವಾಗಿ ಖಂಡಿಸಿದರು.
ಶಾಸಕಿ ಫರಾಂದೆ ಅವರು ಮಂಡಿಸಿದ ಪ್ರಖರ ಹಿಂದುತ್ವನಿಷ್ಠ ನಿಲುವಿನಿಂದ ಭಾಸ್ಕರ ಜಾಧವ ಸಂಕಷ್ಟಕ್ಕೆ ಸಿಲುಕಿದರು. ಜಾಧವ ಅವರು ಫರಾಂದೆ ಅವರ ಪಾಂಡಿತ್ಯದ ಬಗ್ಗೆ ಟೀಕೆ ಮಾಡುತ್ತಾ ವಿಷಯಾಂತರ ಮಾಡಲು ಪ್ರಯತ್ನಿಸಿದರು. ಈ ಸಮಯದಲ್ಲಿ ವಿಧಾನಸಭೆಯ ಸಭಾಧ್ಯಕ್ಷರು ಫರಾಂದೆ ಅವರಿಗೆ ತಮ್ಮ ಜಾಗದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು; ಆದರೆ ಫರಾಂದೆ ಅವರು ತಮ್ಮ ಹಠವನ್ನು ಬಿಡದೆ ಹಿಂದುತ್ವದ ಅಭಿಮಾನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು. ಕಾರ್ಮಿಕರ ಕಲ್ಯಾಣಕ್ಕಿಂತ ಪ್ರಭು ಶ್ರೀರಾಮನ ನಾಮವನ್ನು ವಿರೋಧಿಸುವುದರಲ್ಲೇ ವಿರೋಧ ಪಕ್ಷದವರು ಧನ್ಯತೆ ಅನುಭವಿಸಿದ್ದು ಈ ವೇಳೆ ಕಂಡುಬಂದಿತು.
ಸಂಪಾಕೀಯ ನಿಲುವುಶಾಸಕಿ ದೇವಯಾನಿ ಫರಾಂದೆ ಅವರಂತಹ ಶಾಸಕರೇ ಹಿಂದೂ ಧರ್ಮದ ನಿಜವಾದ ಶಕ್ತಿ ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”