|

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ಮತ್ತು ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ತಂಗಿರುವ ಸೇನಾ ನೆಲೆಯ ಮೇಲೆ ಅನುಮಾನಾಸ್ಪದ ಡ್ರೋನ್ ಹಾರಾಟ ನಡೆಸುತ್ತಿರುವುದು ಕಂಡುಬಂದಿದೆ. ಈ ಡ್ರೋನ್ ಅನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ಅದು ಎಲ್ಲಿಂದ ಬಂತು ಎಂಬುದು ಕೂಡ ಸ್ಪಷ್ಟವಾಗಿಲ್ಲ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್‌ನಿಂದ ಇರಾನ್ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾತ್ರಿ ವೇಳೆ ‘ಫೋರ್ಟ್ ಲೆಸ್ಲಿ ಮ್ಯಾಕ್‌ನೇರ್’ ನೆಲೆಯ ಮೇಲೆ ಹಲವಾರು ಡ್ರೋನ್‌ಗಳು ಕಾಣಿಸಿಕೊಂಡ ನಂತರ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಯಿತು ಮತ್ತು ವೈಟ್ ಹೌಸ್‌ನಲ್ಲಿ ಈ ವಿಷಯದ ಬಗ್ಗೆ ತುರ್ತು ಸಭೆಯೂ ನಡೆಯಿತು. ‘ರೂಬಿಯೋ ಮತ್ತು ಹೆಗ್ಸೆತ್ ಅವರನ್ನು ಬೇರೆಡೆಗೆ ಸ್ಥಳಾಂತರಿಸಬೇಕೇ?’ ಎಂಬ ಬಗ್ಗೆ ಅಧಿಕಾರಿಗಳು ಆಲೋಚಿಸಿದರಾದರೂ, ಸದ್ಯಕ್ಕೆ ಅವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿಲ್ಲ.
ವಿಶ್ವದಾದ್ಯಂತ ಇರುವ ಅಮೆರಿಕದ ರಾಯಭಾರ ಕಚೇರಿಗಳಿಗೆ ಎಚ್ಚರಿಕೆ
ಈ ಘಟನೆಯ ನಂತರ, ಅಮೆರಿಕವು ಜಗತ್ತಿನಾದ್ಯಂತ ಇರುವ ತನ್ನ ರಾಯಭಾರ ಕಚೇರಿಗಳಿಗೆ ಎಚ್ಚರಿಕೆ ನೀಡಿದೆ ಮತ್ತು ದೇಶದ ಹಲವಾರು ಸೇನಾ ನೆಲೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ರಕ್ಷಣಾ ಮತ್ತು ವಿದೇಶಾಂಗ ಸಚಿವರು ವಾಸಿಸುತ್ತಿರುವ ಬಗ್ಗೆ ಹಲವು ಮಾಧ್ಯಮಗಳಲ್ಲಿ ಮಾಹಿತಿ ಬಹಿರಂಗವಾಗಿತ್ತು. ಸಾಮಾನ್ಯವಾಗಿ ಇಷ್ಟು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಎಲ್ಲಿ ವಾಸಿಸುತ್ತಾರೆ ಎಂಬ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ; ಏಕೆಂದರೆ ಅದು ಅವರ ಸುರಕ್ಷತೆಗೆ ಅಪಾಯವನ್ನು ಉಂಟುಮಾಡಬಹುದು. ಟ್ರಂಪ್ ಸರಕಾರದ ಅನೇಕ ಹಿರಿಯ ಅಧಿಕಾರಿಗಳು ಭದ್ರತಾ ಕಾರಣಗಳಿಂದಾಗಿ ಸಾಮಾನ್ಯ ಸರಕಾರಿ ನಿವಾಸಗಳ ಬದಲಿಗೆ ಸೇನಾ ನೆಲೆಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
Dhirendra Krishna Shastri : ರಾಮ ಮಂದಿರ ದಾನ ಕಳ್ಳತನ: ಪಂಡಿತ ಧೀರೇಂದ್ರ ಶಾಸ್ತ್ರಿಯ ಸ್ಫೋಟಕ ಹೇಳಿಕೆ!
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್