ಯುರೋಪ್‌ನಿಂದ ಡ್ರೋನ್ ತರಿಸಿ ಮ್ಯಾನ್ಮಾರ್‌ನ ಭಯೋತ್ಪಾದಕರಿಗೆ ಪೂರೈಸುತ್ತಿದ್ದರು!

ನವದೆಹಲಿ – ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳ ಸಂಚು ರೂಪಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (NIA) 7 ವಿದೇಶಿ ಪ್ರಜೆಗಳನ್ನು ಬಂಧಿಸಿದೆ. ಬಂಧಿತರಲ್ಲಿ ಉಕ್ರೇನ್‌ನ ಆರು ಮತ್ತು ಅಮೆರಿಕದ ಒಬ್ಬ ಪ್ರಜೆಗಳಿದ್ದಾರೆ. ಇವರನ್ನು ಲಕ್ಷ್ಮಣಪುರಿ, ದೆಹಲಿ ಮತ್ತು ಕೋಲಕಾತಾ ವಿಮಾನ ನಿಲ್ದಾಣಗಳಲ್ಲಿ ಬಂಧಿಸಲಾಗಿದೆ.
ಮಿಜೋರಾಂ ಮುಖ್ಯಮಂತ್ರಿಗಳಿಂದ ವಿಧಾನಸಭೆಯಲ್ಲಿ ಮಾಹಿತಿ
ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಹಲವು ವಿದೇಶಿ ಪ್ರಜೆಗಳು ಮಿಜೋರಾಂ ಮೂಲಕ ಮ್ಯಾನ್ಮಾರ್‌ಗೆ ತೆರಳಿ ಅಲ್ಲಿನ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆ ಎಂದು ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ವಿಧಾನಸಭೆಯಲ್ಲಿ ತಿಳಿಸಿದರು. ಇವರಲ್ಲಿ ಕೆಲವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ.
ಡ್ರೋನ್ ಪೂರೈಕೆ ಮತ್ತು ಬಂಡುಕೋರರೊಂದಿಗೆ ಸಂಪರ್ಕ
ರಾಷ್ಟ್ರೀಯ ತನಿಖಾ ದಳದ ಮಾಹಿತಿ ಪ್ರಕಾರ, ಈ ವ್ಯಕ್ತಿಗಳು ಯುರೋಪ್‌ನಿಂದ ದೊಡ್ಡ ಪ್ರಮಾಣದಲ್ಲಿ ಡ್ರೋನ್‌ಗಳನ್ನು ತರಿಸಿ, ಭಾರತದ ಮೂಲಕ ಮ್ಯಾನ್ಮಾರ್‌ನ ಬಂಡುಕೋರ ಗುಂಪುಗಳಿಗೆ ಪೂರೈಸುತ್ತಿದ್ದರು. ಈ ಗುಂಪುಗಳು ಭಾರತದ ಭಯೋತ್ಪಾದಕರಿಗೆ ಸಹಾಯ ಮಾಡುತ್ತವೆ. ಸಂಶಯಿತರೆಲ್ಲರೂ ಮಾನ್ಯವಾದ ವೀಸಾದಲ್ಲೇ ಭಾರತಕ್ಕೆ ಬಂದಿದ್ದರು; ಆದರೆ ಅಗತ್ಯವಿರುವ ‘ನಿರ್ಬಂಧಿತ ಪ್ರದೇಶ ಪರವಾನಗಿ’ (RAP) ಇಲ್ಲದೆಯೇ ಮಿಜೋರಾಂ ತಲುಪಿದ್ದರು. ಅಲ್ಲಿಂದ ಅವರು ಗಡಿ ದಾಟಿ ಮ್ಯಾನ್ಮಾರ್‌ನ ಭಾರತ ವಿರೋಧಿ ಜನಾಂಗೀಯ ಗುಂಪುಗಳೊಂದಿಗೆ ಸಂಪರ್ಕ ಸಾಧಿಸಿದ್ದರು.
ಪಟಿಯಾಲ ಹೌಸ್ ನ್ಯಾಯಾಲಯವು ಈ ಸಂಚಿನ ವ್ಯಾಪ್ತಿ ಮತ್ತು ಆರ್ಥಿಕ ಮೂಲಗಳನ್ನು ಪತ್ತೆಹಚ್ಚಲು ಸಂಶಯಿತರ ಪೊಲೀಸ್ ಕಸ್ಟಡಿಯನ್ನು ಮಾರ್ಚ್ 27 ರವರೆಗೆ ವಿಸ್ತರಿಸಿದೆ. ತನಿಖಾ ಸಂಸ್ಥೆಗಳು ಈಗ ಬಂಧಿತರ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸುತ್ತಿದ್ದು, ಭಾರತದಲ್ಲಿ ಅಡಗಿರುವ ಇತರ ಸಹಚರರು ಹಾಗೂ ವಿದೇಶಿ ಸಂಚುಕೋರರ ಶೋಧ ನಡೆಸುತ್ತಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!