ಸರಕಾರಕ್ಕೆ ಮೊದಲೇ ತಿಳಿದಿದ್ದರೆ, ಎಲ್.ಪಿ.ಜಿ. ವ್ಯವಸ್ಥೆಯನ್ನು ಏಕೆ ಮಾಡಲಿಲ್ಲ! LPG Crisis Congress Questions Government

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆ

ನವದೆಹಲಿ – ಮಾರ್ಚ್ 16 ರಂದು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಎಲ್.ಪಿ.ಜಿ. (LPG) ಸಿಲಿಂಡರ್ ವಿಷಯವಾಗಿ ವಿರೋಧ ಪಕ್ಷದವರು ಪ್ರಶ್ನೆಗಳನ್ನು ಕೇಳುವ ಮೂಲಕ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಮಾತನಾಡಿ, “ಎಲ್.ಪಿ.ಜಿ. ಕೊರತೆಯಿಲ್ಲ ಎಂದು ಪೆಟ್ರೋಲಿಯಂ ಸಚಿವರು ಲೋಕಸಭೆಯಲ್ಲಿ ಹೇಳಿದ್ದಾರೆ ; ಆದರೆ ವಾಸ್ತವ ಸ್ಥಿತಿಯು ಸರಕಾರದ ಈ ಹೇಳಿಕೆಯನ್ನು ಸುಳ್ಳು ಎಂದು ಸಾಬೀತುಪಡಿಸುತ್ತಿದೆ. ಒಂದು ವೇಳೆ ಸರಕಾರವು ಸಮಯಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿದ್ದರೆ, ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ,” ಎಂದು ಹೇಳಿದರು.

ಎಲ್.ಪಿ.ಜಿ. ಕೊರತೆಯ ಬಗ್ಗೆ ವಿರೋಧ ಪಕ್ಷದವರು ಅನಗತ್ಯ ಭೀತಿ ಹರಡುತ್ತಿದ್ದಾರೆ! – ಕಂಗನಾ ರಣಾವತ್

ಎಲ್.ಪಿ.ಜಿ. ಕೊರತೆಯ ವರದಿಗಳ ಹಿನ್ನೆಲೆಯಲ್ಲಿ ವಿರೋಧ ಪಕ್ಷದವರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಉತ್ತರಿಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್, “ವಿರೋಧ ಪಕ್ಷದವರು ದೇಶಾದ್ಯಂತ ಅನಗತ್ಯ ಭೀತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ದೇಶದ ಜನತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಬೇಕು ಎಂದು ನಾನು ಮನವಿ ಮಾಡುತ್ತೇನೆ,” ಎಂದು ಕಂಗನಾ ಹೇಳಿದರು.