ಮತದಾರರ ಪಟ್ಟಿ ವಿವಾದ: ಹೆಸರು ಕೈಬಿಟ್ಟ ಆರೋಪ ಮಾಡಿದ್ದ ಸಾಧು ಈಗ ‘ಬೋಗಸ್’!

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರತಿಭಟನೆಯ ವೇದಿಕೆಯಿಂದ ದಾವೆ ಮಾಡಲಾಗಿತ್ತು

ಕೋಲಕಾತಾ (ಬಂಗಾಳ) – ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನಾ ಅಭಿಯಾನದ ಮೂಲಕ ಚುನಾವಣಾ ಆಯೋಗವು ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡುತ್ತಿದೆ ಎಂದು ಆರೋಪಿಸಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲಕಾತಾದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಾವಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬನನ್ನು ಮಿನಾಖಾನ್‌ನ ‘ರಾಮಕೃಷ್ಣ ಶಾರದಾ ಮಿಷನ್’ನ ಸಾಧು ಎಂದು ವೇದಿಕೆಯ ಮೇಲೆ ಪರಿಚಯಿಸಲಾಯಿತು. ಈ ಸಾಧುವು, “ನಾನು ಮಿನಾಖಾನ್ ಶಾಖೆಯ ರಾಮಕೃಷ್ಣ ಶಾರದಾ ಮಿಷನ್‌ನ ಅಧ್ಯಕ್ಷನಾಗಿದ್ದು, ಕಳೆದ 14 ವರ್ಷಗಳಿಂದ ಸಂಘಟನೆಯ ಸೇವೆ ಮಾಡುತ್ತಿದ್ದೇನೆ” ಎಂದು ಹೇಳಿಕೊಂಡಿದ್ದನು. ಅಲ್ಲದೆ, ತನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆತ ಹೇಳಿಕೊಂಡಿದ್ದನು. “ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬ ಆಶಯದೊಂದಿಗೆ ನಾನು ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಬಂದಿದ್ದೇನೆ” ಎಂದು ಆತ ತಿಳಿಸಿದ್ದನು.

ಈ ಘಟನೆ ನಡೆದ ಒಂದು ವಾರದ ನಂತರ, ರಾಮಕೃಷ್ಣ ಶಾರದಾ ಮಿಷನ್ ಸಂಸ್ಥೆಯು ಮಿನಾಖಾನ್‌ನಲ್ಲಿ ತಮಗೆ ಯಾವುದೇ ಶಾಖೆ ಇಲ್ಲ ಮತ್ತು ಸಂಘಟನೆಯಲ್ಲಿ ಅಂತಹ ಯಾವುದೇ ಸಾಧು ಇಲ್ಲ ಎಂದು ಸ್ಪಷ್ಟಪಡಿಸಿದೆ. ಮಾರ್ಚ್ 15 ರಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರವ್ರಾಜಿಕಾ ಅತಾಂದ್ರಪ್ರಾಣ ಅವರು ಪತ್ರಿಕೆಗಳಲ್ಲಿ ಪ್ರಕಟಿಸಿದ ಸಾರ್ವಜನಿಕ ಪ್ರಕಟಣೆಯಲ್ಲಿ, “ಯಾವುದೇ ಸಾಧು ಆ ಶಾಖೆಯ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವುದು ಸಂಪೂರ್ಣ ಆಧಾರರಹಿತ ಮತ್ತು ದಾರಿ ತಪ್ಪಿಸುವಂತಿದೆ. ಇಂತಹ ಬಹಿರಂಗ ಹಕ್ಕುಗಳು ಮತ್ತು ಹೇಳಿಕೆಗಳಿಂದ ನಾವು ಸಂಪೂರ್ಣವಾಗಿ ದೂರವಿದ್ದೇವೆ” ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ನಕಲಿ ವ್ಯಕ್ತಿಗಳನ್ನು ಜೀವಾವಧಿ ಶಿಕ್ಷೆ ವಿಧಿಸಬೇಕು, ಆಗಲೇ ಇತರರಿಗೆ ಭಯ ಹುಟ್ಟುತ್ತದೆ!