ತಂಪು ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ.

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿ ಒಬ್ಬ 14 ವರ್ಷದ ಅಪ್ರಾಪ್ತ ಬಾಲಕಿಗೆ ಮೂವರು ಅಪ್ರಾಪ್ತ ಮುಸ್ಲಿಂ ಹುಡುಗರು ತಂಪು ಪಾನೀಯದಲ್ಲಿ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಅವರು ಸಂತ್ರಸ್ತ ಬಾಲಕಿಯನ್ನು ಕಾಡಿಗೆ ಕರೆದೊಯ್ದು ಈ ಕೃತ್ಯವೆಸಗಿದ್ದಾರೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.
Dehradun (Uttarakhand):
14-year-old Hindu girl sexually assaulted after she was rendered unconscious by spiking her soft drink with a sedative. – 3 Muslim minors arrestedCan those capable of committing such an act really be called "minors"?
Instead of giving them light… pic.twitter.com/e7wrbAPYs4
— Sanatan Prabhat (@SanatanPrabhat) March 15, 2026
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಮಾರ್ಚ್ 12 ರಂದು ಸಂಜೆ 7 ಗಂಟೆಯ ಸುಮಾರಿಗೆ ಅವರ ಮಗಳು ಒಗೆಯಲು ಬಂದಿದ್ದ ಬಟ್ಟೆಗಳನ್ನು ನೀಡಲು ಮನೆಯಿಂದ ಹೊರಗೆ ಹೋಗಿದ್ದಳು. ಇದೇ ಸಮಯದಲ್ಲಿ ಪರಿಚಯದ ಒಬ್ಬ ಮುಸ್ಲಿಂ ಹುಡುಗ ಆಕೆಗೆ ಫೋನ್ ಕರೆ ಮಾಡಿ ಹರಿದ್ವಾರ ಬೈಪಾಸ್ ಹತ್ತಿರದ ಶಾಲೆಯೊಂದರ ಬಳಿ ಕರೆಸಿಕೊಂಡಿದ್ದಾನೆ. ಆಕೆ ಅಲ್ಲಿಗೆ ತಲುಪಿದಾಗ ಅಲ್ಲಿ ಮೊದಲೇ ಇತರ ಇಬ್ಬರು ಮುಸ್ಲಿಂ ಹುಡುಗರು ಇದ್ದರು. ಮೂವರೂ ಸೇರಿ ಆಕೆಯನ್ನು ಪುಸಲಾಯಿಸಿ ಹತ್ತಿರದ ಕಾಡಿಗೆ ಕರೆದೊಯ್ದರು. ಅಲ್ಲಿ ಅವರು ತಂಪು ಪಾನೀಯದಲ್ಲಿ ಅಮಲು ಬರುವ ಔಷಧ ಬೆರೆಸಿ ಆಕೆಗೆ ಕುಡಿಸಿದರು. ಬಾಲಕಿ ಪ್ರಜ್ಞೆ ತಪ್ಪಿದ ನಂತರ ಮೂವರೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಮಾರ್ಚ್ 13 ರಂದು ಬೆಳಿಗ್ಗೆ ಆರೋಪಿಗಳು ಬಾಲಕಿಯನ್ನು ಒಂದು ಈ-ರಿಕ್ಷಾದಲ್ಲಿ ಆಕೆಯ ಮನೆಯ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಜ್ಞೆ ಬಂದ ನಂತರ ಬಾಲಕಿಯು ಕುಟುಂಬದವರಿಗೆ ನಡೆದ ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಜರಂಗ ದಳದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಧಾವಿಸಿ ಆರೋಪಿಗಳ ಬಂಧನಕ್ಕಾಗಿ ಪ್ರತಿಭಟನೆ ನಡೆಸಿದರು.
ಸಂಪಾದಕೀಯ ನಿಲುವುಅತ್ಯಾಚಾರ ಮಾಡುವವರನ್ನು ಅಪ್ರಾಪ್ತರೆನ್ನಲು ಸಾಧ್ಯವೇ? ಇಂತವರನ್ನು ಅಪ್ರಾಪ್ತರೆಂದು ಪರಿಗಣಿಸಿ ಕಡಿಮೆ ಶಿಕ್ಷೆ ನೀಡಿ ಬಿಡಬಾರದು, ಬದಲಾಗಿ ಇವರಿಗೆ ವಯಸ್ಕರಂತೆ ಕಠಿಣ ಶಿಕ್ಷೆಯಾಗುವಂತೆ ರಾಜ್ಯದ ಸರಕಾರವು ಪ್ರಯತ್ನಿಸಬೇಕು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ