LPG Crisis : ಎಲ್‌ಪಿಜಿ ಅಭಾವ; ಅಕ್ರಮ ಮರ ಕಡಿಯುವುದನ್ನು ತಡೆಯಿರಿ ! – ಕರ್ನಾಟಕದ ಅರಣ್ಯ ಸಚಿವರ ಆದೇಶ

ಬೆಂಗಳೂರು(ಕರ್ನಾಟಕ) – ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ಉಂಟಾಗಿದ್ದು, ಉರುವಲು ಕಟ್ಟಿಗೆಯ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶ, ಅರಣ್ಯದ ಅಂಚಿನ ಭಾಗಗಳು ಮತ್ತು ಸರಕಾರಿ ಭೂಮಿಯಲ್ಲಿ ನಡೆಯುವ ಅಕ್ರಮ ಮರ ಕಡಿಯುವುದನ್ನು ತಡೆಯುವಂತೆ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಎಲ್ಲಾ ವಿಭಾಗಗಳು ಸೂಕ್ತ ರೀತಿಯಲ್ಲಿ ಗಸ್ತು ತಿರುಗಬೇಕು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಖಂಡ್ರೆ ಸೂಚಿಸಿದ್ದಾರೆ. ಅರಣ್ಯ ಅಥವಾ ಸರಕಾರಿ ಭೂಮಿಯಲ್ಲಿ ಅಕ್ರಮ ಮರ ಕಡಿದರೆ ಆಯಾ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಸಚಿವ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.