ಮಹಾರಾಷ್ಟ್ರದಲ್ಲೂ ಮುಟ್ಟಿನ (ಮಾಸಿಕ ರಜೆಯ) ಅವಧಿಯ ರಜೆ ನೀಡುವ ಕುರಿತು ನಿಯಮ ರೂಪಿಸಲು ಚಿಂತನೆ !

ಮುಂಬಯಿ – ಕರ್ನಾಟಕದಲ್ಲಿ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ೨ ದಿನಗಳ ರಜೆ ನೀಡುವ ನಿಯಮವನ್ನು ಜಾರಿಗೆ ತರಲಾಗಿದೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಮುಟ್ಟಿನ ಅವಧಿಯಲ್ಲಿ ರಜೆ ನೀಡಲು ಸಾಧ್ಯವೇ? ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಕುರಿತು ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಅದಿತಿ ತಟ್ಕರೆ ಅವರು ‘ಸನಾತನ ಪ್ರಭಾತ’ಕ್ಕೆ ತಿಳಿಸಿದ್ದಾರೆ.

೧ ಅಥವಾ ೨ ದಿನಗಳ ರಜೆಯ ಅವಧಿಯನ್ನು, ತಿಂಗಳೊಳಗೆ ಅಷ್ಟೇ ಗಂಟೆಗಳ ಕಾಲ ಹೆಚ್ಚುವರಿ ಸೇವೆ ಸಲ್ಲಿಸುವ ಮೂಲಕ ಸರಿದೂಗಿಸಲಾಗುವುದು. ತಟ್ಕರೆ ಅವರು ಮುಂದೆ ಮಾತನಾಡಿ, ಇದರಲ್ಲಿ ಎರಡು ಭಿನ್ನಾಭಿಪ್ರಾಯಗಳಿವೆ. ಈ ಮೂಲಕ ತಮ್ಮ ಪ್ರತ್ಯೇಕ ಗುರುತನ್ನು (ಐಡೆಂಟಿಟಿ) ತೋರಿಸುವ ಅಗತ್ಯವಿದೆಯೇ? ಎಂದು ಕೆಲವು ಮಹಿಳೆಯರು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ, ಈ ಅವಧಿಯಲ್ಲಿ ತೊಂದರೆ ಅನುಭವಿಸುವ ಮಹಿಳೆಯರಿಗೆ ಈ ರಜೆಯ ಅಗತ್ಯವಿದೆ ಎಂಬ ವಿಷಯವನ್ನೂ ಗಮನದಲ್ಲಿಟ್ಟುಕೊಳ್ಳುವುದು ಅವಶ್ಯಕವಾಗಿದೆ, ಎಂದು ಅವರು ಹೇಳಿದರು.