|
(‘ಎಫ್.ಎಸ್.ಎಸ್.ಎ.ಐ.’ ಎಂದರೆ ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ, ಅಂದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ)
ಜೈಪುರ (ರಾಜಸ್ಥಾನ) – ಇಲ್ಲಿ ‘ಎಕ್ಸ್‌ಪೈರಿ ಡೇಟ್’ ಮುಗಿದಿರುವ ಅಮೂಲ್ ಸಂಸ್ಥೆಯ ಸುಮಾರು ಒಂದೂವರೆ ಲಕ್ಷ ಕಿಲೋ ಆಹಾರ ಉತ್ಪನ್ನಗಳನ್ನು ಜಪ್ತಿ ಮಾಡಿ ನಾಶಪಡಿಸಲಾಯಿತು. ಈ ಬೃಹತ್ ದಾಸ್ತಾನನ್ನು ಎಫ್.ಎಸ್.ಎಸ್.ಎ.ಐ. ವಿಭಾಗವು ಕಾರ್ಯಾಚರಣೆ ನಡೆಸಿ ನಾಶಪಡಿಸಿತು. ಇಷ್ಟೊಂದು ಪ್ರಮಾಣದ ಸರಕನ್ನು ನಾಶಪಡಿಸಲು 4 ದಿನಗಳು ಬೇಕಾದವು. ಒಟ್ಟು 27 ಟ್ರಕ್‌ಗಳಷ್ಟು ಈ ಸರಕು ಇತ್ತು. ಜೈಪುರದ ಖೋ ನಾಗೋರಿಯನ್ ಪ್ರದೇಶದ ಗೋದಾಮಿನ ಮೇಲೆ ದಾಳಿ ನಡೆಸಿ ಈ ಕಾರ್ಯಾಚರಣೆ ನಡೆಸಲಾಯಿತು. ತನಿಖೆಯ ವೇಳೆ, ಬೃಹತ್ ಪ್ರಮಾಣದಲ್ಲಿ ಕಾಲಾವಧಿ ಮುಗಿದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟು, ಅವುಗಳ ಮೇಲಿನ ‘ಎಕ್ಸ್‌ಪೈರಿ ಡೇಟ್’ ಅಳಿಸಿ ಹೊಸ ದಿನಾಂಕವನ್ನು ಮುದ್ರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ವಿಭಾಗಕ್ಕೆ ಲಭಿಸಿತ್ತು.
🚨 Jaipur (Rajasthan): 1.5 Lakh kg Expired Amul Products Destroyed
⚖️ The FSSAI carried out a 4-day disposal operation after uncovering a massive stock of expired Amul products.
❗ Shockingly, attempts were reportedly being made to sell these products by altering the expiry… pic.twitter.com/SGBw7bE1li
— Sanatan Prabhat (@SanatanPrabhat) March 12, 2026
ತನಿಖೆಯ ಸಮಯದಲ್ಲಿ ಅಧಿಕಾರಿಗಳಿಗೆ ಅಂದಾಜು 12 ಸಾವಿರ ಕಾರ್ಟನ್ (ಪೆಟ್ಟಿಗೆ) ಕಾಲಾವಧಿ ಮುಗಿದ ಉತ್ಪನ್ನಗಳು ಪತ್ತೆಯಾದವು. ಇವುಗಳಲ್ಲಿ ಸುಮಾರು 3 ಸಾವಿರ ‘ಕಾರ್ಟನ್’ಗಳ ಮೇಲಿದ್ದ ಪ್ಯಾಕೆಟ್‌ಗಳ ‘ಎಕ್ಸ್‌ಪೈರಿ ಡೇಟ್’ ಅಳಿಸಿರುವುದು ಕಂಡುಬಂದಿದೆ. ಗೋದಾಮಿನಿಂದ ಥಿನ್ನರ್, ಅಸಿಟೋನ್ ಮತ್ತು ಇತರ ರಾಸಾಯನಿಕಗಳನ್ನೂ ಜಪ್ತಿ ಮಾಡಲಾಗಿದೆ. ಪ್ಯಾಕೆಟ್‌ಗಳ ಮೇಲಿರುವ ಹಳೆಯ ದಿನಾಂಕವನ್ನು ತೆಗೆದುಹಾಕಲು ಈ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂಬ ಸಂಶಯವಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!