
ಮುಂಬಯಿ – “ನಾನು ಯಾವಾಗಲೂ ಹೇಳುತ್ತೇನೆ, ನಾನು ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದೇನೆ. ನನ್ನ ತಂಗಿಯೂ ಹಿಂದೂವನ್ನೇ ಮದುವೆಯಾಗಿದ್ದಾಳೆ ಮತ್ತು ನಾವಿಬ್ಬರೂ ತುಂಬಾ ಸಂತೋಷವಾಗಿದ್ದೇವೆ. ಮುಸ್ಲಿಮರಲ್ಲಿ ಅನೇಕ ಪುರುಷರು 3 ಅಥವಾ 4 ಮದುವೆಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಪತ್ನಿಯರನ್ನು ಬಿಟ್ಟುಬಿಡುತ್ತಾರೆ. ಹೀಗಿರುವಾಗ ಮುಸ್ಲಿಮರು ಹಿಂದೂಗಳಿಗಿಂತ ಹೇಗೆ ತಾನೇ ಉತ್ತಮರಾಗಲು ಸಾಧ್ಯ? ಈ ದೃಷ್ಟಿಯಿಂದ ನೋಡಿದರೆ ಹಿಂದೂಗಳೇ ಮೇಲು ಎನಿಸುತ್ತದೆ. ಅವರು ಸಾಮಾನ್ಯವಾಗಿ ಒಂದೇ ಮದುವೆಯಾಗುತ್ತಾರೆ. ಕೆಲವೊಮ್ಮೆ ಎರಡು ಮದುವೆಯಾಗಬಹುದು; ಆದರೆ ಅದರರ್ಥ ಅವರು ಸುಲಭವಾಗಿ ಒಬ್ಬ ಪತ್ನಿಯನ್ನು ಬಿಟ್ಟು ಇನ್ನೊಬ್ಬರ ಬಳಿ ಹೋಗುತ್ತಾರೆ ಎಂದಲ್ಲ. ಅದು ತಪ್ಪು,” ಎಂದು 1970ರ ದಶಕದ ಖ್ಯಾತ ನಟಿ ಮುಮ್ತಾಜ್ ಅವರು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 1974ರಲ್ಲಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅವರು ಉದ್ಯಮಿ ಮಯೂರ್ ಮಾಧ್ವಾನಿ ಅವರನ್ನು ವಿವಾಹವಾಗಿ ಚಿತ್ರರಂಗದಿಂದ ದೂರ ಸರಿದಿದ್ದರು. ತಮ್ಮ ಆಧ್ಯಾತ್ಮಿಕ ನಂಬಿಕೆಗಳ ಬಗ್ಗೆ ಮಾತನಾಡಿದ ಅವರು, ಜನ್ಮತಃ ಮುಸ್ಲಿಂ ಆಗಿದ್ದರೂ ಹಿಂದೂ ದೇವತೆಗಳ ಮೇಲೆ ತಮಗೆ ಅಪಾರ ಶ್ರದ್ಧೆಯಿದೆ ಎಂದು ಹೇಳಿದ್ದಾರೆ.
ಅನೇಕ ವಿವಾಹಗಳನ್ನು ಮಾಡಿಕೊಳ್ಳುವುದು ಪಾಪ!
ಮುಮ್ತಾಜ್ ಮಾತು ಮುಂದುವರೆಸಿ, “ಯಾವುದೇ ಪುರುಷ 3 ಅಥವಾ 4 ಬಾರಿ ಮದುವೆಯಾಗಬಾರದು. ನಾನು ಸ್ವತಃ ಮುಸ್ಲಿಂ ಆಗಿದ್ದರೂ ಇದು ತಪ್ಪು ಎಂದು ಹೇಳುತ್ತೇನೆ. ಒಬ್ಬ ಪತ್ನಿ ಇರುವಾಗಲೇ ಇನ್ನೊಬ್ಬಳನ್ನು, ಆಮೇಲೆ ಮೂರನೇಯವಳನ್ನು ಮದುವೆಯಾಗುವುದು ಹೇಗೆ ಸರಿಯಾಗುತ್ತದೆ? ಸಂಬಂಧಗಳಲ್ಲಿ ಮಹಿಳೆಯರು ಎಷ್ಟು ಅಧಿಕಾರ ಮತ್ತು ಸ್ವಾಭಿಮಾನ ಹೊಂದಿರುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದು ಪ್ರತಿಯೊಬ್ಬ ಮಹಿಳೆಯೂ ತನ್ನ ಹಕ್ಕನ್ನು ಬಯಸುವ ಸಂಬಂಧವಾಗಿದೆ. ಒಬ್ಬ ಪತ್ನಿಯನ್ನು ಬಿಟ್ಟು ಮತ್ತೊಬ್ಬರನ್ನು ಮದುವೆಯಾಗುವುದು ಸರಿಯೇ? ಇದು ಪಾಪವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಹಿಂದೂ ದೇವತೆಗಳ ಮೇಲೆ ವಿಶೇಷ ಶ್ರದ್ಧೆ!
“ನನ್ನ ನೆಚ್ಚಿನ ದೇವರುಗಳೆಂದರೆ ಭಗವಾನ ಶಂಕರ ಮತ್ತು ಭಗವಾನ ಶ್ರೀಕೃಷ್ಣ. ನಾನು ಮುಸ್ಲಿಂ ಆಗಿದ್ದರೂ ಅವರ ಮೇಲೆ ನನಗೆ ಗಾಢವಾದ ನಂಬಿಕೆಯಿದೆ. ಮನೆಯಲ್ಲಿ ದೈನಂದಿನ ಜೀವನದಲ್ಲಿ ಧಾರ್ಮಿಕ ವಿಧಿವಿಧಾನಗಳು ಒಳಗೊಂಡಿರುತ್ತವೆ. ನಾನು ಮನೆಯ ಮೆಟ್ಟಿಲು ಇಳಿದು ಕೆಳಗೆ ಬರುವಾಗ ಅಲ್ಲಿ ಭಗವಾನ ಗಣೇಶನ ಮೂರ್ತಿಯಿದೆ. ಅವರು ನನಗೆ ಬಹಳ ಇಷ್ಟ, ನಾನು ಅವರ ಚರಣಗಳಿಗೆ ನಮಸ್ಕರಿಸುತ್ತೇನೆ. ನಾನು ಭಗವಾನ ಶಂಕರನನ್ನೂ ನಂಬುತ್ತೇನೆ ಮತ್ತು ಪೂಜಿಸುತ್ತೇನೆ. ಈ ಇಬ್ಬರು ದೇವರುಗಳ ಮೇಲೆ ನನಗೆ ವಿಶೇಷ ಭಕ್ತಿಯಿದೆ,” ಎಂದು ಮುಮ್ತಾಜ್ ಹೇಳಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!