ಹಿಂದೂಗಳು ಇನ್ನು ಮುಂದೆ ಪೊಲೀಸರಿಗಾಗಿ ಕಾಯುವುದಿಲ್ಲ, ಬದಲಿಗೆ ತಮ್ಮದೇ ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ! – ಶ್ರೀ. ಸುರೇಂದ್ರ ಜೈನ್, VHP

  • ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ. ಸುರೇಂದ್ರ ಜೈನ್ ಅವರಿಂದ ದೆಹಲಿಯ ತರುಣ್ ಕುಮಾರ್ ಖಾಟಿಕ್ ಹತ್ಯೆ ಕುರಿತು ಎಚ್ಚರಿಕೆ!

  • ಕಳೆದ 10 ವರ್ಷಗಳಲ್ಲಿ ಹಬ್ಬಗಳ ಸಂದರ್ಭದಲ್ಲಿ ನಡೆದ 240 ದಾಳಿಗಳಲ್ಲಿ 100 ಹಿಂದೂಗಳ ಹತ್ಯೆ

ನವದೆಹಲಿ – ಉತ್ತಮ್ ನಗರದಲ್ಲಿ ತರುಣ್ ಕುಮಾರ್ ಖಾಟಿಕ್ ಅವರ ಹತ್ಯೆಯಂತಹ ಪ್ರಕರಣಗಳು ಕೇವಲ ದೆಹಲಿಗೆ ಸೀಮಿತವಾಗಿಲ್ಲ, ಇಡೀ ದೇಶಾದ್ಯಂತ ನಡೆಯುತ್ತಿವೆ. ಕಳೆದ 10 ವರ್ಷಗಳಲ್ಲಿ ಇಂತಹ 240 ಘಟನೆಗಳು ನಡೆದಿವೆ, ಇದರಲ್ಲಿ ಹಿಂದೂ ಹಬ್ಬಗಳ ಸಮಯದಲ್ಲಿ ಹಿಂದೂಗಳ ಮೇಲೆ ದಾಳಿ ಮಾಡಲಾಗಿದೆ. ಅವುಗಳಲ್ಲಿ 100 ಹಿಂದೂಗಳನ್ನು ಕೊಲೆ ಮಾಡಲಾಗಿದೆ. ಉತ್ತಮ್ ನಗರ ಪ್ರಕರಣದಲ್ಲಿ ಜನರು ಪ್ರತಿಭಟನೆ ಆರಂಭಿಸಿದ ನಂತರವಷ್ಟೇ ದೆಹಲಿ ಸರ್ಕಾರ ಕ್ರಮ ಕೈಗೊಳ್ಳಬೇಕಾಯಿತು. ಜಿಹಾದಿಗಳು ಮಾಡುತ್ತಿರುವುದನ್ನೇ ದೇಶದ ಹಿಂದೂಗಳೂ ಮಾಡಲು ಶುರು ಮಾಡಿದರೆ ಏನಾಗಬಹುದು? ಆಗ ಆ ಜನರು ಮೊಹರಂ ಮತ್ತು ಈದ್ ಅನ್ನು ಎಲ್ಲಿ ಮತ್ತು ಹೇಗೆ ಆಚರಿಸುತ್ತಾರೆ? ಈಗ ಹಿಂದೂಗಳು ಕೈಕಟ್ಟಿ ಕುಳಿತು ಪೊಲೀಸರ ಕ್ರಮಕ್ಕಾಗಿ ಕಾಯುವುದಿಲ್ಲ; ಬದಲಿಗೆ ತಮ್ಮದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ಜಂಟಿ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ಜೈನ್ ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಶ್ರೀ ಜೈನ್ ಅವರು ಮಂಡಿಸಿದ ಪ್ರಮುಖ ಅಂಶಗಳು,

ಹಿಂದೂಗಳೂ ಹಾಗೆಯೇ ಮಾಡಲು ಶುರು ಮಾಡಿದರೆ, ನೀವು ಈದ್ ಹೇಗೆ ಆಚರಿಸುತ್ತೀರಿ?

ಜೈನ್ ಅವರು ಮುಂದುವರಿಯುತ್ತಾ, “ರಾಮಸ್ವಾಮಿ ಉದಯಾರ್ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ನೀಡಿದ ಅಭಿಪ್ರಾಯವನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಯಾವುದೋ ಒಂದು ವರ್ಗವು ಹಿಂದೂಗಳ ಹಬ್ಬಗಳು ಮತ್ತು ಶೋಭಾಯಾತ್ರೆಗಳಿಗೆ ಅಡ್ಡಿಪಡಿಸುತ್ತಿದ್ದರೆ, ಆ ವರ್ಗವು ತಾನು ಅಲ್ಪಸಂಖ್ಯಾತರಾಗಿರುವ ಕಡೆಗಳಲ್ಲಿ ತನ್ನ ಧಾರ್ಮಿಕ (ಈದ್, ಮೊಹರಂ) ಕಾರ್ಯಕ್ರಮಗಳನ್ನು ಹೇಗೆ ನಡೆಸಲು ಸಾಧ್ಯ ಎಂದು ಯೋಚಿಸಬೇಕಾಗುತ್ತದೆ” ಎಂದರು.

ತರುಣ್ ಹತ್ಯೆ ಪೂರ್ವಯೋಜಿತ ಸಂಚು!

ಜೈನ್ ಅವರು ಹೇಳುವಂತೆ, “ಹೋಳಿ ಬಣ್ಣಗಳ ಹಬ್ಬ. ಅದೇ ದಿನ ಜಿಹಾದಿಗಳು ರಕ್ತದ ಹೋಳಿ ಆಡಿದ್ದಾರೆ. ತರುಣ್ ಖಾಟಿಕ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 7 ವರ್ಷದ ಬಾಲಕನೊಬ್ಬ ಹೋಳಿ ಆಡುವಾಗ ಆಕಸ್ಮಿಕವಾಗಿ ಒಬ್ಬ ಮುಸ್ಲಿಂ ಮಹಿಳೆಯ ಬಟ್ಟೆಯ ಮೇಲೆ ಬಣ್ಣ ಬಿದ್ದಿತ್ತು. ಅದರ ಬೆನ್ನಲ್ಲೇ 25 ರಿಂದ 30 ಮುಸಲ್ಮಾನರು ಕೈಯಲ್ಲಿ ತಲವಾರ್ ಹಿಡಿದು ಬಂದು ದಾಳಿ ಮಾಡಿದರು. ಇದು ಆಕಸ್ಮಿಕವಲ್ಲ, ಪೂರ್ವಯೋಜಿತ ಸಂಚಿನಂತೆ ಕಾಣುತ್ತಿದೆ. ಈ ಪ್ರಕರಣದಲ್ಲಿ ಆ ಮಹಿಳೆ ನಾಪತ್ತೆಯಾಗಿದ್ದಾಳೆ. ಆ ಮಹಿಳೆ ಸೇರಿದಂತೆ ಸಂಬಂಧಪಟ್ಟ ಎಲ್ಲರ ಮೇಲೆ ಕಠಿಣ ಕ್ರಮವಾಗಬೇಕು.”

ಜಾತಿ ರಾಜಕಾರಣ ಮಾಡುವವರು ಈಗ ಏಕೆ ಮೌನವಾಗಿದ್ದಾರೆ?

“ದೇಶದಲ್ಲಿ ಎಲ್ಲಾದರೂ ಗೋರಕ್ಷಕರು ಏನಾದರೂ ಮಾಡಿದರೆ, ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಜಾತ್ಯತೀತ ನಾಯಕರು ಬೀದಿಗಿಳಿಯುತ್ತಾರೆ; ಆದರೆ ಇಂದು ತರುಣ್ ಹತ್ಯೆಯ ಬಗ್ಗೆ ಅವರು ಏಕೆ ಮೌನವಾಗಿದ್ದಾರೆ? ತರುಣ್ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರು. ಇಂದು ಪರಿಶಿಷ್ಟ ಜಾತಿಯ ನಾಯಕರು ಎಂದು ಕರೆಸಿಕೊಳ್ಳುವವರು ಏಕೆ ಸುಮ್ಮನಿದ್ದಾರೆ?” ಎಂದು ಪ್ರಶ್ನಿಸಿದರು.

ದಂಗೆಕೋರರಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರೇ ಮುಂದೆ ಏಕೆ?

“ಇಲ್ಲಿಯವರೆಗೆ 30 ಆರೋಪಿಗಳ ಪೈಕಿ ಕೇವಲ 7 ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಇಡೀ ದೆಹಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುವುದು ಮತ್ತು ಮಶಾಲ್ ಮೆರವಣಿಗೆ ನಡೆಸಲಾಗುವುದು. ಅಗತ್ಯ ಬಿದ್ದರೆ ದೇಶಾದ್ಯಂತ ಆಂದೋಲನ ನಡೆಸಲಾಗುವುದು. ಜಿಹಾದಿಗಳು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ದಂಗೆಯ ಸಮಯದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರನ್ನು ಮುಂದೆ ಬಿಡುತ್ತಾರೆ ಎಂಬುದು ದೇಶಾದ್ಯಂತ ಕಂಡುಬಂದಿದೆ. ಈಗ ಅವರ ಈ ತಂತ್ರವನ್ನೂ ನಿಯಂತ್ರಿಸುವ ಸಮಯ ಬಂದಿದೆ.”

ಸಮಾಜವು ತನ್ನದೇ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ!

“ಸರ್ಕಾರದಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ಅದನ್ನು ಸ್ಪಷ್ಟವಾಗಿ ಹೇಳಲಿ. ಆಯಾ ಭಾಗದ ಸಮಾಜಕ್ಕೆ ಪ್ರತಿಯೊಬ್ಬರ ಗುರುತಿರುತ್ತದೆ. ತದನಂತರ ಸಮಾಜವು ತನ್ನದೇ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ. ಉಗ್ರಗಾಮಿ ವಿಚಾರಧಾರೆ ಹೊಂದಿರುವ ಮದರಸಾಗಳನ್ನು ತಕ್ಷಣವೇ ನಿಷೇಧಿಸಬೇಕು. ‘ಜಮಿಯತ್ ಉಲೇಮಾ-ಎ-ಹಿಂದ್’ ನಂತಹ ಸಂಸ್ಥೆಗಳು ಭಯೋತ್ಪಾದಕರ ಪರವಾಗಿ ನಿಲ್ಲುತ್ತವೆ ಮತ್ತು ಅವರಿಗೆ ರಕ್ಷಣೆ ನೀಡುತ್ತವೆ. ಅದರ ಚಟುವಟಿಕೆಗಳ ಬಗ್ಗೆಯೂ ತನಿಖೆಯಾಗಬೇಕು” ಎಂದು ಸುರೇಂದ್ರ ಜೈನ್ ಒತ್ತಾಯಿಸಿದರು.

ಸಂಪಾದಕೀಯ ನಿಲುವು

ವಿಶ್ವ ಹಿಂದೂ ಪರಿಷತ್ತಿನ ಈ ಹೇಳಿಕೆಯು ಕೇವಲ ಒಂದು ಪ್ರತಿಕ್ರಿಯೆ ಅಥವಾ ಪ್ರಚೋದನೆಯಲ್ಲ; ಬದಲಿಗೆ ಕಳೆದ 78 ವರ್ಷಗಳಿಂದ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯಗಳ ನೋವಿನ ಹೊರಹಾಕುವಿಕೆಯಾಗಿದೆ. ದೇಶವು ಜಾತ್ಯತೀತವಾಗಿದ್ದರೂ ಸಹ, ದಾಳಿಯ ಘಟನೆಗಳು ಸಂಭವಿಸಿದಾಗ ‘ಕ್ರಮ ಕೈಗೊಳ್ಳಬೇಕೋ ಬೇಡವೋ’ ಎನ್ನುವುದನ್ನು ದಾಳಿಕೋರರು ಮತ್ತು ಸಂತ್ರಸ್ತರ ಧರ್ಮವನ್ನು ನೋಡಿ ಪೊಲೀಸರು ಮತ್ತು ಸರ್ಕಾರ ನಿರ್ಧರಿಸುತ್ತಾರೆ. ಜಾತ್ಯತೀತತೆಯ ಹೆಸರಿನಲ್ಲಿ ಈ ದೇಶದ ಹಿಂದೂಗಳನ್ನು ಮುಗಿಸಲು ಸಂಚು ರೂಪಿಸಲಾಗಿದೆ. ಇಂದು ಹಿಂದೂಗಳು ಜಾಗೃತರಾಗದಿದ್ದರೆ, ಮುಂದಿನ ಕೆಲವು ದಶಕಗಳಲ್ಲಿ ಈ ಈಗಾಗಲೇ ತುಂಡರಿಸಲ್ಪಟ್ಟ ‘ಹಿಂದೂದೇಶ’ದ ಇನ್ನೂ ಅನೇಕ ಚೂರುಗಳಾಗುವುದು ಖಚಿತ!