ಜಿಜಾಮಾತೆಯ ಆದರ್ಶದಂತೆ ರಾಷ್ಟ್ರಭಕ್ತ ಮಕ್ಕಳನ್ನು ಬೆಳೆಸಬೇಕು : ಸೌ. ಭವ್ಯ ಗೌಡ

ಬೆಂಗಳೂರಿನ ಉಲ್ಲಾಳದಲ್ಲಿ ಮಹಿಳಾ ದಿನ ಆಚರಣೆ; ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡರಿಗೆ ಸನ್ಮಾನ

ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ ಇವರಿಗೆ ಸತ್ಕಾರ

ಬೆಂಗಳೂರು – ದಿನಾಂಕ 08 ಮಾರ್ಚ್ 2026 ರಂದು ಬೆಂಗಳೂರಿನ ಉಲ್ಲಾಳ ಬಡಾವಣೆಯಲ್ಲಿ ಉಪ್ಕಾರ್ ವೆಲ್ಫೇರ್ ಅಸೋಸಿಯೇಷನ್ ಬೆಂಗಳೂರು ಇವರು ಊರ್ವ ಸಭಾಂಗಣ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳೆಯರು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು. ಈ ಸಂಧರ್ಭದಲ್ಲಿ ರಾಣಾರಾಗಿಣಿ ಶಾಖೆಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಸೌ. ಭವ್ಯ ಗೌಡ, ದರ್ಪನ ವೆಲ್ನೇಸ್ ನ ಸಂಸ್ಥಾಪಕರಾದ ಸೌ. ನಂದಿನಿ ಶಿವಕುಮಾರ್ ಸೇರಿದಂತೆ 100ಕ್ಕೂ ಅಧಿಕ ಮಹಿಳೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತ ಮಹಿಳೆಯರು

ಕಾರ್ಯಕ್ರಮದಲ್ಲಿ ಮಾತನಾಡಿದ ರಣರಾಗಿಣಿ ಶಾಖೆಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಸೌ. ಭವ್ಯ ಗೌಡ ಅವರು, “ಜಿಜಾಮಾತೆಯ ಆದರ್ಶವನ್ನು ಮನದಲ್ಲಿಟ್ಟುಕೊಂಡು ತಾಯಂದಿರು ತಮ್ಮ ಮಕ್ಕಳನ್ನು ರಾಷ್ಟ್ರಭಕ್ತರಾಗುವಂತೆ ಬೆಳೆಸಬೇಕು. ನಮ್ಮ ಮಕ್ಕಳು ಛತ್ರಪತಿ ಶಿವಾಜಿ ಮಹಾರಾಜರಂತಹ ಧೈರ್ಯಶಾಲಿಗಳಾಗಬೇಕು ಹಾಗೂ ಸ್ವಾಮಿ ವಿವೇಕಾನಂದರಂತಹ ಸಂಸ್ಕಾರಯುತ ಯುವಕರಾಗಬೇಕು. ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹಿಳೆಯರ ಪಾತ್ರದ ಮಹತ್ವವನ್ನು ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಯಿತು. ಶಕ್ತಿಯ ಪ್ರತೀಕವಾಗಿರುವ ಮಹಿಳೆಯಿಂದ ಹಿಡಿದು ಗೃಹಿಣಿ, ತಾಯಿ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಹೇಗೆ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿಸಲಾಯಿತು. ಜೊತೆಗೆ ಭಾರತದ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನೂ ಪರಿಚಯಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜ ಸೇವೆ, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಗಣ್ಯ ಮಹಿಳೆಯರು ಉಪಸ್ಥಿತರಿದ್ದರು. ಮಹಿಳೆಯರು ಒಟ್ಟಾಗಿ ಸೇರಿ ಈ ಕಾರ್ಯಕ್ರಮವನ್ನು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಿದರು.