ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ದಾಳಿಯಲ್ಲಿ ಒಬ್ಬ ವಿದ್ಯಾರ್ಥಿ ಸಾವು, ೯ ಮಂದಿಗೆ ಗಾಯ!

  • ಬಳ್ಳಾರಿಯಲ್ಲಿ ನಡೆದ ಘಟನೆ

  • ದಾಳಿ ಮಾಡಿದ ವಿದ್ಯಾರ್ಥಿ ಪರಾರಿ

ಮೃತ ಬಾಲಕ ಮತ್ತು ಆಕ್ರಂದನ ಮಾಡುತ್ತಿರುವ ಆತನ ಪೋಷಕರು

ಬಳ್ಳಾರಿ – ಇಲ್ಲಿನ ಗುರುಕುಲ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಅಮಾನವೀಯ ಹಲ್ಲೆಯಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದು, ೮ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ದಾಳಿ ನಡೆಸಿದ ವಿದ್ಯಾರ್ಥಿ ತಲೆಮರೆಸಿಕೊಂಡಿದ್ದಾನೆ. ಈ ಘಟನೆಯಿಂದ ಮೃತ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಆರೋಪಿಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

೧. ಕೆಲವು ದಿನಗಳ ಹಿಂದೆ ರಾತ್ರಿ ಊಟದ ನಂತರ ಎಲ್ಲರೂ ಮಲಗಿದ್ದಾಗ, ವಿದ್ಯಾರ್ಥಿಯೊಬ್ಬ ಮಂಚದ ಕಬ್ಬಿಣದ ರಾಡ್ ತೆಗೆದುಕೊಂಡು ೮ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ಇದರಲ್ಲಿ ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಬಾಲಕ ಕಳೆದ ೪ ವರ್ಷಗಳಿಂದ ಈ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದನು. ಆತ ಮೂಲತಃ ಆಂಧ್ರಪ್ರದೇಶದ ಆದೋನಿ ಗ್ರಾಮದವನಾಗಿದ್ದನು.

೨. ದಾಳಿ ಮಾಡಿದ ಹುಡುಗ ಇಷ್ಟೊಂದು ಜನರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದರೆ, ಇದರ ಹಿಂದೆ ಮಾದಕ ವಸ್ತು ಸೇವನೆಯೇ ಏಕೈಕ ಕಾರಣವಾಗಿರಬಹುದು ಎಂದು ಮೃತ ಬಾಲಕನ ತಂದೆ ಆರೋಪಿಸಿದ್ದಾರೆ.