ಕ್ಷುಲ್ಲಕ ಕಾರಣಕ್ಕೆ ಕೊಲೆ

ಬಾಗಪತ (ಉತ್ತರಪ್ರದೇಶ) – ಇಲ್ಲಿನ ಬಡೌತ್ ತಹಸಿಲ್ ವ್ಯಾಪ್ತಿಯಲ್ಲಿ ಹಳೆಯ ಕ್ಷುಲ್ಲಕ ವಿವಾದದ ಹಿನ್ನೆಲೆಯಲ್ಲಿ ಹೋಳಿ ಹಬ್ಬದಂದು ೧೭ ವರ್ಷದ ಅಮೃತ ಶರ್ಮಾ ಎಂಬ ಯುವಕನನ್ನು ಮುಸಲ್ಮಾನರು ಹತ್ಯೆ ಮಾಡಿದ್ದಾರೆ. ಈ ಘಟನೆಯು ಬಡಾವದ ಮತ್ತು ತಿತರೌದಾ ಗ್ರಾಮಗಳಿಗೆ ಸಂಬಂಧಿಸಿದ್ದಾಗಿದೆ.
೧. ಮೃತ ಅಮೃತ ಶರ್ಮಾ ಅವರ ತಂದೆ ರಾಜಕಿಶೋರ ಶರ್ಮಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, ತಮ್ಮ ಮಗ ಅಮೃತ ತನ್ನ ಅಣ್ಣ ಸಾಗರ ಮತ್ತು ಇಬ್ಬರು ಸ್ನೇಹಿತರೊಂದಿಗೆ ಹೋಳಿ ಆಚರಿಸಲು ತಿತರೌದಾ ಗ್ರಾಮಕ್ಕೆ ಹೋಗಿದ್ದನು ಎಂದು ತಿಳಿಸಿದ್ದಾರೆ. ಅಮೃತನನ್ನು ಅವನ ಸ್ನೇಹಿತ ಸಮೀರ ಎಂಬಾತ ದೂರವಾಣಿ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡಿದ್ದನು.
೨. ಕುಟುಂಬದವರು ನೀಡಿದ ಮಾಹಿತಿಯ ಪ್ರಕಾರ, ಅಮೃತ, ಆತನ ಅಣ್ಣ ಮತ್ತು ಸ್ನೇಹಿತರು ತಿತರೌದಾ ತಲುಪಿದಾಗ ಅಲ್ಲಿ ಸಮೀರ ಕಂಡುಬರಲಿಲ್ಲ. ಈ ಸಮಯದಲ್ಲಿ ಅಮೃತ ತನ್ನ ಸ್ನೇಹಿತರೊಂದಿಗೆ ಸಾಜಿದ ಎಂಬುವವನ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಲು ಹೋಗಿದ್ದನು. ಅಲ್ಲಿ ಚಿಂಕು ಜಾಟವ್ ಮತ್ತು ಆತನೊಂದಿಗಿದ್ದ ಕೆಲವು ಯುವಕರೊಂದಿಗೆ ಗಲಾಟೆಯಾಯಿತು. ವಾಗ್ವಾದವು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಮತ್ತು ಆರೋಪಿಗಳು ಅಮೃತನ ಮೇಲೆ ಚಾಕು-ಚೂರಿಗಳಿಂದ ಹಲವು ಬಾರಿ ಇರಿದರು.
೩. ಗಂಭೀರವಾಗಿ ಗಾಯಗೊಂಡ ಅಮೃತನನ್ನು ಆತನ ಅಣ್ಣ ಮತ್ತು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು; ಆದರೆ ಮಾರ್ಗಮಧ್ಯೆಯೇ ಆತ ಮೃತಪಟ್ಟನು. ಕುಟುಂಬದವರ ಪ್ರಕಾರ, ಅಮೃತನನ್ನು ಮೊದಲೇ ಸಂಚು ರೂಪಿಸಿ ಕರೆಸಿಕೊಳ್ಳಲಾಗಿತ್ತು ಮತ್ತು ಅಲ್ಲಿ ಹೊಂಚು ಹಾಕಿ ಕುಳಿತಿದ್ದ ವ್ಯಕ್ತಿಗಳು ಆತನ ಮೇಲೆ ದಾಳಿ ಮಾಡಿದ್ದಾರೆ.
೪. ಈ ಪ್ರಕರಣದ ಬಗ್ಗೆ ಪೊಲೀಸರು ಮುಂದಿನಂತೆ ಮಾಹಿತಿ ನೀಡಿದ್ದಾರೆ – ರಾಜಕಿಶೋರ ಶರ್ಮಾ ಅವರ ದೂರಿನ ಮೇರೆಗೆ ಚಿಂಕು ಜಾಟವ್, ಸುಹೇಲ್, ಅನಸ್, ಶೌಕೀನ್, ಸಾಜಿದ್ ಮತ್ತು ಒಬ್ಬ ಅಜ್ಞಾತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ, ಆದರೆ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಕೊಲೆಗೆ ಬಳಸಿದ ಚಾಕು ಮತ್ತು ದೊಣ್ಣೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, ಹಳೆಯ ದ್ವೇಷ ಮತ್ತು ಕ್ರಿಕೆಟ್ ಪಂದ್ಯದ ವೇಳೆ ನಡೆದ ಗಲಾಟೆಯಿಂದಾಗಿ ಈ ಘಟನೆ ನಡೆದಿದೆ.
ಸಾಹಿಲ್ ನ ಸಹೋದರನಿಗೆ ಚೆಂಡು ತಗುಲಿದ್ದರಿಂದ ಶುರುವಾಗಿದ್ದ ದ್ವೇಷ !
ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಸುಹೈಲ್, ಕೆಲವು ದಿನಗಳ ಹಿಂದೆ ಬಡಾವದ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು ಎಂದು ಹೇಳಿದ್ದಾನೆ. ಆ ಪಂದ್ಯದಲ್ಲಿ ಅಮೃತ ಹೊಡೆದ ಚೆಂಡು ಸಾಹಿಲ್ ನ ತಮ್ಮ ರಿಹಾನ್ ಗೆ ತಗುಲಿತ್ತು. ಇದೇ ಕಾರಣಕ್ಕೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದು ನಂತರ ದ್ವೇಷ ಆರಂಭವಾಗಿತ್ತು.
ದೂರು ನೀಡಿದ ಎಲ್ಲರ ಹೆಸರುಗಳನ್ನು ಎಫ್ ಐ ಆರ್ ನಲ್ಲಿ ಸೇರಿಸಿಲ್ಲ! – ಸಂತ್ರಸ್ತ ಕುಟುಂಬದ ಆರೋಪ
ಸಂತ್ರಸ್ತ ಕುಟುಂಬದವರು ನೀಡಿರುವ ದೂರಿನ ಪ್ರಕಾರ ಎಲ್ಲಾ ಹೆಸರುಗಳನ್ನು ಪ್ರಕರಣದಲ್ಲಿ ಸೇರಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ. ಕುಟುಂಬ ಮತ್ತು ಕೆಲವು ಹಿಂದೂ ಸಂಘಟನೆಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ಹಬ್ಬಗಳ ಮೇಲೆ ಮತಾಂಧರ ಕರಿನೆರಳು ಯಾವಾಗಲೂ ಇರುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ! ಹಿಂದೂಗಳಿಗೆ ಸರ್ವಧರ್ಮ ಸಮಭಾವದ ಬೋಧನೆ ಮಾಡುವವರು ಈಗ ಯಾವ ಬಿಲದಲ್ಲಿ ಹೋಗಿ ಅಡಗಿದ್ದಾರೆ ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!