
ಪುತ್ತೂರು– ‘ದ ಕೇರಳ ಸ್ಟೋರಿ ೨’ ಚಲನಚಿತ್ರವು ಮುಸಲ್ಮಾನರಿಂದ ನಡೆಸಲ್ಪಡುತ್ತಿರುವ ‘ಲವ್ ಜಿಹಾದ್’ ಎಂಬ ಸಂಚಿನ ನೈಜ ಸ್ವರೂಪವನ್ನು ಜನರ ಮುಂದೆ ತಂದಿದೆ. ದೇಶಾದ್ಯಂತ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳೆದ ೮ ದಿನಗಳಲ್ಲಿ ಈ ಚಿತ್ರವು ೨೫ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಗಳಿಸಿದೆ. ಚಿತ್ರದ ವಿರುದ್ಧ ಕೆಲವು ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದ್ದರೂ, ಹಿಂದುತ್ವವಾದಿ ಸಂಘಟನೆಗಳಿಂದ ಅನೇಕ ಕಡೆಗಳಲ್ಲಿ ಚಲನಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಭಾಗದ ಹಿಂದುತ್ವವಾದಿ ಸಂಘಟನೆಯಾದ ‘ಪುತ್ತಿಲ ಪರಿವಾರ’ವು ಚಿತ್ರದ ಉಚಿತ ಪ್ರದರ್ಶನವನ್ನು ಆಯೋಜಿಸಿತ್ತು. ‘ಚಿತ್ರದ ಪ್ರದರ್ಶನ ಮಾಡಬಾರದು’ ಎಂದು ಸಂಘಟನೆಯ ಮಹಿಳಾ ಹಿಂದುತ್ವವಾದಿಗಳಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬರುತ್ತಿವೆ.
Threats from abroad against women activists of ‘Puttila Parivar’ for screening ‘The #KeralaStory2‘ in Puttur, Karnataka.
If ‘Love Jihad’ is a lie, why silence those who speak about it through threats?
Where have the self-proclaimed champions of ‘freedom of speech’ vanished?… pic.twitter.com/XqkOxi8t14
— Sanatan Prabhat (@SanatanPrabhat) March 7, 2026
೧. ಪುತ್ತೂರಿನ ‘ಜಿಎಲ್ ಒನ್ ಮಾಲ್’ನಲ್ಲಿ ‘ಸೀತಾ ಪರಿವಾರ’ ಸಂಘಟನೆಯ ವತಿಯಿಂದ ೧೬ ರಿಂದ ೨೨ ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಉಚಿತ ಚಿತ್ರ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಮಾರ್ಚ್ ೫ ರ ಸಂಜೆ ಚಿತ್ರದ ೩ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಇದಕ್ಕೆ ಭಾಜಪ ಮತ್ತು ಹಿಂದೂ ಸಂಘಟನೆಗಳ ನಾಯಕರು ಬೆಂಬಲ ನೀಡಿದ್ದರು.
೨. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಸಂದೇಶಗಳು ವ್ಯಾಪಕವಾಗಿ ಹರಿದಾಡುತ್ತಿವೆ. ‘ಮುಸಲ್ಮಾನರು ಜಿಎಲ್ ಒನ್ ಮಾಲ್ ಗೆ ಹೋಗಬಾರದು’, ‘ಮಾಲ್ ಅನ್ನು ಬಹಿಷ್ಕರಿಸಬೇಕು’ ಮತ್ತು ‘ಇನ್ನು ಮುಂದೆ ಜಿಎಲ್ ಮಾಲ್ ಗೆ ಹೋಗುವ ಮುಸಲ್ಮಾನ ಯುವತಿಯರು ಎಚ್ಚರಿಕೆಯಿಂದ ಇರಬೇಕು’ ಎಂಬ ರೀತಿಯ ಸಂದೇಶಗಳು ಪ್ರಸಾರವಾಗಿವೆ.
ಬೆದರಿಕೆಗಳಿಗೆ ಹೆದರುವುದಿಲ್ಲ ! – ಅರುಣ ಕುಮಾರ ಪುತ್ತಿಲ

ಈ ಬಗ್ಗೆ ‘ಪುತ್ತಿಲ ಪರಿವಾರ’ದ ಅರುಣ ಕುಮಾರ ಪುತ್ತಿಲ ಅವರು ಮಾತನಾಡಿ, ಲವ್ ಜಿಹಾದ್ ಮತ್ತು ಮತಾಂತರದ ವಿಷಯಗಳನ್ನಾಧರಿಸಿದ ಚಲನಚಿತ್ರದ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಟಿಕೆಟ್ ಕಾಯ್ದಿರಿಸುವಿಕೆಗಾಗಿ ನಾಮಫಲಕಗಳನ್ನು ಸಿದ್ಧಪಡಿಸಲಾಗಿತ್ತು, ಮತ್ತು ಅದರಲ್ಲಿ ಪುತ್ತಿಲ ಪರಿವಾರದ ಮಹಿಳಾ ಕಾರ್ಯಕರ್ತೆಯರ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿತ್ತು. ಈ ದೂರವಾಣಿ ಸಂಖ್ಯೆಗಳಿಗೆ ವಿದೇಶದಿಂದ ಕರೆಗಳನ್ನು ಮಾಡಲಾಗುತ್ತಿದ್ದು, ಅಶ್ಲೀಲ ಭಾಷೆಯಲ್ಲಿ ನಿಂದಿಸಿ ಬೆದರಿಕೆ ಹಾಕಲಾಗಿದೆ. ‘ಪೊಲೀಸರು ಈ ಕಡೆ ಗಮನಹರಿಸಬೇಕು. ನಾವು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ನಮ್ಮ ಜನಜಾಗೃತಿ ಕೆಲಸವು ಮುಂದೆಯೂ ಮುಂದುವರಿಯಲಿದೆ’ ಎಂದು ಪುತ್ತಿಲ ಅವರು ಹೇಳಿದರು.
ನಮ್ಮ ಧರ್ಮದ ಹೆಣ್ಣುಮಕ್ಕಳ ರಕ್ಷಣೆಗಾಗಿ ಇಂತಹ ಸಾವಿರ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇವೆ, ಯಾರ ವಿರೋಧಗಳಿಗೂ ಹೆದರವುದಿಲ್ಲ.
ಲವ್ ಜಿಹಾದ್ ವಿರುದ್ಧ ಹೋರಾಟ ನಿರಂತರ 🚩#KeralaStory2 #KeralaStory pic.twitter.com/WJKqKfWpF2
— ArunKumar Puthila (@ArunPuthila) March 6, 2026
ಸಂಪಾದಕೀಯ ನಿಲುವು‘ತಪ್ಪು ಮಾಡದವರಿಗೆ ಭಯವೇಕೆ !’ ಎಂಬ ಗಾದೆಯಂತೆ, ಒಂದು ವೇಳೆ ಲವ್ ಜಿಹಾದ್ ಎಂಬುದು ಸುಳ್ಳಾಗಿದ್ದರೆ, ಅದರ ಬಗ್ಗೆ ಜಾಗೃತಿ ಮೂಡಿಸುವವರಿಗೆ ಬೆದರಿಕೆಗಳು ಬರುತ್ತಿರಲಿಲ್ಲ. ಬೆದರಿಕೆಗಳು ಬರುತ್ತಿರುವುದೇ ‘ಲವ್ ಜಿಹಾದ್’ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಮಾಮೂಲಿ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಪುರೋ(ಅಧೋ)ಗಾಮಿ ಗುಂಪು ಈಗ ಯಾವ ಬಿಲದಲ್ಲಿ ಹೋಗಿ ಅಡಗಿದೆ ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!