ಛಿಂದವಾಡಾದ ಮಂದಿರದಲ್ಲಿ ಹಸಿರು ಧ್ವಜ; ಮೂರ್ತಿಗಳ ಮೇಲೆ ಹಸಿರು ಬಟ್ಟೆ!

​ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ

​ಛಿಂದವಾಡಾ (ಮಧ್ಯಪ್ರದೇಶ) – ಜಿಲ್ಲೆಯ ಸೋನ್‌ಪುರ್ ಗ್ರಾಮದಲ್ಲಿ ಮಾರ್ಚ್ ೬ ರ ಬೆಳಗ್ಗೆ ದೇವಸ್ಥಾನವೊಂದರ ಮೇಲೆ ಹಸಿರು ಧ್ವಜ ಹಾರಿಸಿ, ದೇವತಾ ವಿಗ್ರಹ ಗಳ ಮೇಲೆ ಹಸಿರು ಬಣ್ಣದ ಬಟ್ಟೆಯನ್ನು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಗ್ರಾಮಸ್ಥರಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ, ಧ್ವಜ ಮತ್ತು ಬಟ್ಟೆಯನ್ನು ತೆರವುಗೊಳಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಒಂದು ವೇಳೆ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ್ದರೆ ಏನಾಗುತ್ತಿತ್ತು, ಇದನ್ನು ಪ್ರತ್ಯೇಕವಾಗಿ ಹೇಳಬೇಕೆ ?