ಖಂಡವಾ (ಮಧ್ಯಪ್ರದೇಶ): ಮುಸ್ಲಿಂ ಧರ್ಮಗುರುವಿನ ಬಗ್ಗೆ ಆಕ್ಷೇಪಾರ್ಹ ಬರಹ; ಮುಸ್ಲಿಂರಿಂದ ಪೊಲೀಸ್ ಠಾಣೆಗೆ ಮುತ್ತಿಗೆ !

ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದ ಬಳಿಕ ಪೊಲೀಸರಿಂದ ಲಘು ಲಾಠಿ ಪ್ರಹಾರ

ಖಂಡವಾ (ಮಧ್ಯಪ್ರದೇಶ) – ಸಾಮಾಜಿಕ ಮಾಧ್ಯಮದಲ್ಲಿ ಮುಸ್ಲಿಂ ಧರ್ಮಗುರುವೊಬ್ಬರ ಬಗ್ಗೆ ಆಕ್ಷೇಪಾರ್ಹ ಟಿಪ್ಪಣಿ ಮಾಡಲಾಗಿದೆ ಎಂಬ ಕಾರಣಕ್ಕೆ, ನೂರಾರು ಮುಸ್ಲಿಮರು ಪ್ರತಿಭಟನೆ ನಡೆಸಲು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಪೊಲೀಸರು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾಗ, ಓರ್ವ ಮುಸ್ಲಿಂನು ಪೊಲೀಸ್ ಠಾಣಾಧಿಕಾರಿಯ ಸಮವಸ್ತ್ರದ ಕಾಲರ್ ಹಿಡಿದು ವಾಗ್ವಾದ ನಡೆಸಿದನು. ಆನಂತರ ಪರಿಸ್ಥಿತಿ ಹದಗೆಟ್ಟಾಗ, ಪೊಲೀಸರು ಮುಸ್ಲಿಂರ ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು.

ಈ ಪ್ರಕರಣದಲ್ಲಿ ಯುವತಿಯೊಬ್ಬಳು ಮುಸ್ಲಿಂರ ಮೇಲೆ ಹಲ್ಲೆಯ ಆರೋಪ ಮಾಡಿದ್ದಾಳೆ. ಮುಖವೆಲ್ಲಾ ಬಾತುಕೊಂಡ ಸ್ಥಿತಿಯಲ್ಲಿ ಆ ಯುವತಿ ಪೊಲೀಸ್ ಠಾಣೆಗೆ ಬಂದಿದ್ದಳು. ಅವಳ ಆರೋಪದ ಪ್ರಕಾರ ಪ್ರತಿಭಟನಾ ನಿರತ ಗುಂಪಿನಲ್ಲಿದ್ದ ಕೆಲವು ಯುವಕರು ಆಕೆ ಮೇಲೆ ಹಲ್ಲೆ ಮಾಡಿದ್ದಾರೆ. ಮಹಿಳೆಯ ತಲೆಗೆ ಗಾಯವಾಗಿದ್ದು, ಮುಖದ ಮೇಲಿನ ಬಾವು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವು ಜನರನ್ನು ವಶಕ್ಕೆ ಪಡೆದಿದ್ದಾರೆ.

ಸಂಪಾದಕೀಯ ನಿಲುವು

ಸ್ವಂತ ಧಾರ್ಮಿಕ ಶ್ರದ್ಧೆಯನ್ನು ಯಾರಾದರೂ ಅವಮಾನ ಮಾಡಿದರೆ ಮುಸ್ಲಿಮರು ನೇರವಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ, ಆದರೆ ಹಿಂದೂಗಳು ಕಾನೂನುಬದ್ಧ ಮಾರ್ಗದಲ್ಲಿಯೂ ಸಹ ವಿರೋಧ ವ್ಯಕ್ತಪಡಿಸುವುದಿಲ್ಲ!