ವಿವಿಧ ಸ್ತರಗಳ ಸಂಕಟಗಳಿಂದಾಗಿ ಜಗತ್ತಿನಾದ್ಯಂತ ಅಸ್ಥಿರತೆ ನಿರ್ಮಾಣವಾಗಲಿದೆ !

ಪುಣೆ – ಗ್ರಹಗಳ ಪ್ರತಿಕೂಲ ಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಯುದ್ಧವು ಭುಗಿಲೆದ್ದಿದೆ. ಈ ಸಂಕಟವು ಮುಂದಿನ ೬ ತಿಂಗಳವರೆಗೆ ತಪ್ಪುವ ಲಕ್ಷಣಗಳಿಲ್ಲ. ವಿಶೇಷವಾಗಿ ಮಾರ್ಚ್ ೧೯ ರವರೆಗೆ ಯುದ್ಧದ ತೀವ್ರತೆಯು ಹೆಚ್ಚಾಗಲಿದ್ದು, ‘ಸೆಪ್ಟೆಂಬರ್ ವರೆಗೆ ಜಾಗತಿಕ ಪರಿಸ್ಥಿತಿಯು ಅತ್ಯಂತ ಅಸ್ಥಿರವಾಗಿರಲಿದೆ’ ಎಂದು ಭವಿಷ್ಯವಾಣಿ ನುಡಿಯುವ ಖ್ಯಾತ ಸಿದ್ಧೇಶ್ವರ ಮಾರಟಕರ್ ಅವರು ಸ್ಪಷ್ಟ ಸಂಕೇತಗಳನ್ನು ನೀಡಿದ್ದಾರೆ. ಮಾರಟಕರ್ ಅವರು ನೀಡಿದ ವಿಶ್ಲೇಷಣೆಯ ಪ್ರಕಾರ, ಮಾರ್ಚ್ ತಿಂಗಳಿನಲ್ಲಿ ಸಂಭವಿಸಿದ ಗ್ರಹಣಗಳ ಪರಿಣಾಮವು ಮುಂದಿನ ೬ ತಿಂಗಳವರೆಗೆ ಇರಲಿದೆ.
⚠️ Possibility of war within the next 6 months? – Jyotishacharya Siddheshwar Martkar warns
Due to multiple crises unfolding across the world, global instability may intensify in the coming months.
For years, Sanatan Prabhat has been urging society to stay prepared for possible… pic.twitter.com/vcX9Bc3ps0
— Sanatan Prabhat (@SanatanPrabhat) March 8, 2026
ಮಾರಟಕರ್ ಅವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿಸಿದ ಭವಿಷ್ಯದ ಕೆಲ ಘಟನೆಗಳು:
೧. ಅಮೆರಿಕಾ, ಇರಾನ್, ಇಸ್ರೇಲ್, ಯುರೋಪ್ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಯುದ್ಧದ ಕಿಡಿ ಹೊತ್ತಿಕೊಂಡಿದೆ. ಇರಾನ್ ಗೆ ಚೀನಾದ ಬೆಂಬಲ ಮತ್ತು ಇನ್ನೊಂದೆಡೆ ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಸಂಘರ್ಷದಿಂದಾಗಿ ಈ ಯುದ್ಧವು ಜಾಗತಿಕ ಸ್ವರೂಪವನ್ನು ಪಡೆಯುವ ಸಾಧ್ಯತೆಯಿದೆ.
೨. ಜಗತ್ತಿನ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಮತ್ತು ರಾಷ್ಟ್ರಪ್ರಮುಖರ ಮೇಲೆ ಪ್ರಾಣಾಂತಿಕ ದಾಳಿಗಳು ನಡೆಯಲಿದೆ. ಖ್ಯಾತ ನಾಯಕರು ಅಧಿಕಾರ ತ್ಯಾಗ ಮಾಡುವುದು ಹಾಗೂ ಅವರ ಅಪಘಾತದಿಂದ ಮೃತ್ಯುವಿನ ಯೋಗಗಳು ಕೂಡಿ ಬರುತ್ತಿವೆ.
೩. ಕೇವಲ ಯುದ್ಧ ಮಾತ್ರವಲ್ಲದೆ, ನೈಸರ್ಗಿಕ ಮತ್ತು ಆರ್ಥಿಕ ಸ್ತರಗಳಲ್ಲಿಯೂ ಭೀಕರ ಸಂಕಟಗಳು ಎದುರಾಗಲಿವೆ.
೪. ಕಚ್ಚಾ ತೈಲದ ಬೆಲೆ ಏರಿಕೆಯಾಗುವುದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ. ಇದರಿಂದ ಅನೇಕ ದೇಶಗಳಲ್ಲಿ ಅರಾಜಕತೆ ಉಂಟಾಗಿ ಜನರು ಬೀದಿಗಿಳಿಯಲಿದ್ದಾರೆ.
೫. ಜಾಗತಿಕ ವ್ಯಾಪಾರವು ಅಸ್ತ-ವ್ಯಸ್ತಗೊಳ್ಳುವುದರಿಂದ ಶೇರು ಮಾರುಕಟ್ಟೆಯು ಕುಸಿಯಲಿದೆ; ಆದರೆ ಈ ಅವಧಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಭಾರಿ ಏರಿಕೆಯಾಗಲಿದೆ.
೬. ಭಾರತದ ಪಶ್ಚಿಮ ಕರಾವಳಿಯಲ್ಲಿ ಮಹಾಭಯಂಕರ ಚಂಡಮಾರುತಗಳು ಹಾಗೂ ಉತ್ತರ ಭಾರತದಲ್ಲಿ ಭೂಕಂಪದ ಸಂಭವವಿದೆ. ಅನಿಲ ಸೋರಿಕೆ, ರಾಸಾಯನಿಕ ಕಾರ್ಖಾನೆಗಳಲ್ಲಿ ಸ್ಫೋಟ ಮತ್ತು ವಿಮಾನ ಅಪಘಾತಗಳಿಂದ ಜೀವಹಾನಿಯಾಗಬಹುದು.
೭. ಭಾರತದ ಜಾತಕದಲ್ಲಿನ ಗ್ರಹಸ್ಥಿತಿಯ ಪ್ರಕಾರ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಈ ಅವಧಿಯಲ್ಲಿ ನೆರೆಯ ದೇಶಗಳಲ್ಲಿ ಹಿಂಸಾಚಾರ, ಬೆಂಕಿ ಹಚ್ಚುವುದು, ಸ್ಫೋಟದಂತಹ ಘಟನೆಗಳು ನಡೆಯಬಹುದು. ಕರೆನ್ಸಿ ಏರಿಳಿತಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
೮. ದೇಶದ ಹಿರಿಯ ಅಥವಾ ಪ್ರಮುಖ ರಾಜಕೀಯ ವ್ಯಕ್ತಿಗಳ ಅಪಘಾತ, ಮೃತ್ಯುವಿನ ಘಟನೆಗಳು ಈ ಅವಧಿಯಲ್ಲಿ ಸಂಭವಿಸಬಹುದು. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ರಾಜೀನಾಮೆ ಮತ್ತು ನಿವೃತ್ತಿಯ ಘಟನೆಗಳು ನಡೆಯಬಹುದು. ಗ್ರಹಣದಿಂದಾಗಿ ಧಾರ್ಮಿಕ-ಜಾತಿ ಸಂಘರ್ಷಗಳು ಸಾಧ್ಯವಿದ್ದು, ಹಿರಿಯ ನಾಯಕರ ಮೇಲೆ ದಾಳಿಗಳು ನಡೆಯಬಹುದು.
ಸಂಪಾದಕೀಯ ನಿಲುವುಮುಂಬರಲಿರುವ ಮಹಾವಿನಾಶಕಾರಿ ಆಪತ್ಕಾಲದಲ್ಲಿ ‘ಜನತೆಯು ಪೂರ್ವಸಿದ್ಧತೆ ಹೇಗೆ ಮಾಡಿಕೊಳ್ಳಬೇಕು’ ಎಂಬ ಬಗ್ಗೆ ‘ಸನಾತನ ಪ್ರಭಾತ’ ಕಳೆದ ಅನೇಕ ವರ್ಷಗಳಿಂದ ಲೇಖನ ಮಾಲೆಗಳನ್ನು ಪ್ರಕಟಿಸುತ್ತಿದೆ. ಆದ್ದರಿಂದ ಜನತೆಯು ತಮ್ಮ ಮತ್ತು ತಮ್ಮ ಕುಟುಂಬದ ರಕ್ಷಣೆಗಾಗಿ ಈಗಲಾದರೂ ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸುವುದು ಅವಶ್ಯಕವಾಗಿದೆ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ