ಹೋಟೆಲ್ ಉದ್ಯಮಿಗಳಲ್ಲಿ ಹರಡಿದ್ದ ವದಂತಿಗಳಿಗೆ ಪೂರ್ಣವಿರಾಮ!
(ಎಲ್.ಪಿ.ಜಿ. ಎಂದರೆ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್, ಅಂದರೆ ದ್ರವೀಕೃತ ಪೆಟ್ರೋಲಿಯಂ ಅನಿಲ)

ನವದೆಹಲಿ – ಇರಾನ್-ಇಸ್ರೇಲ್ ನಡುವೆ ಯುದ್ಧ ಆರಂಭವಾಗಿ ಈಗ ಒಂದು ವಾರ ಕಳೆದಿದೆ. ‘ಯುದ್ಧದ ನೇರ ಪರಿಣಾಮಗಳು ಭಾರತದಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ. ವಾಣಿಜ್ಯ ಎಲ್.ಪಿ.ಜಿ. ಸಿಲಿಂಡರ್‌ಗಳ ಪೂರೈಕೆಯನ್ನು ತಾತ್ಕಾಲಿಕವಾಗಿಯಾದರೂ ನಿಲ್ಲಿಸಲಾಗಿದೆ’ ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿ ಹರಡಿತ್ತು. ಮಹಾರಾಷ್ಟ್ರದ ಹೋಟೆಲ್ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಸರಕಾರವು, ಈ ರೀತಿ ಗ್ಯಾಸ್ ಪೂರೈಕೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ಸ್ಪಷ್ಟನೆಯನ್ನು ನೀಡಿದೆ.
ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ ದರ ಏರಿಕೆ!
ಪೂರೈಕೆ ನಿಂತಿಲ್ಲದಿದ್ದರೂ, ಭಾರತದಲ್ಲಿ 19.2 ಕೆಜಿ ತೂಕದ ‘ಕಮರ್ಷಿಯಲ್’ (ವಾಣಿಜ್ಯ) ಸಿಲಿಂಡರ್ ಬೆಲೆಯು ಬರೋಬ್ಬರಿ 115 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಪ್ರಸ್ತುತ ಅದು 1,883 ರೂಪಾಯಿಗಳಿಗಿಂತಲೂ ಅಧಿಕವಾಗಿದೆ. ದೆಹಲಿಯಲ್ಲಿ ‘ಇಂಡಿಯನ್ ಆಯಿಲ್’ ಸಂಸ್ಥೆಯು ಗೃಹಬಳಕೆಯ ಎಲ್.ಪಿ.ಜಿ. ಸಿಲಿಂಡರ್ ಬೆಲೆಯನ್ನು ಶೇ. 7 ರಷ್ಟು ಹೆಚ್ಚಿಸಿದ್ದು, ಅದು 913 ರೂಪಾಯಿಗಳಿಗೆ ತಲುಪಿದೆ.
ಅಂಕಿಅಂಶಗಳ ರೂಪದಲ್ಲಿ ತಿಳಿಯಿರಿ ಯುದ್ಧದಿಂದ ಎಲ್.ಪಿ.ಜಿ. ಪೂರೈಕೆಯ ಮೇಲೆ ಎಷ್ಟು ಪರಿಣಾಮ ಬೀರಬಹುದು!1. ವಿಶ್ವದಲ್ಲಿ ಚೀನಾದ ನಂತರ ಅತಿ ಹೆಚ್ಚು ಎಲ್.ಪಿ.ಜಿ. ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 2. ‘ರಾಯಿಟರ್ಸ್’ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯ ಪ್ರಕಾರ, ಭಾರತಕ್ಕೆ ಬೇಕಾಗುವ ಒಟ್ಟು ಎಲ್.ಪಿ.ಜಿ.ಯಲ್ಲಿ ಕನಿಷ್ಠ ಶೇ. 65 ರಷ್ಟು ಅನಿಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ. 3. ಈ ಶೇ. 65 ರಷ್ಟು ಆಮದಿನಲ್ಲಿ ಸುಮಾರು ಶೇ. 91 ರಷ್ಟು ಅನಿಲವು ಗಲ್ಫ್ ರಾಷ್ಟ್ರಗಳಿಂದಲೇ ಬರುತ್ತದೆ. ಇದರಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ (ಶೇ. 40), ಕತಾರ್ (ಶೇ. 21), ಸೌದಿ ಅರೇಬಿಯಾ (ಶೇ. 15), ಮತ್ತು ಕುವೈತ್ (ಶೇ. 15) ಸೇರಿವೆ. 4. ಭಾರತದ ಒಟ್ಟು ಎಲ್.ಪಿ.ಜಿ. ಆಮದಿನ ಶೇ. 85 ರಷ್ಟು ಪಾಲು ‘ಹಾರ್ಮುಜ್ ಜಲಸಂಧಿ’ಯ (Strait of Hormuz) ಮೂಲಕವೇ ಬರುತ್ತದೆ. ಹಾಗಾಗಿ, ಈ ಮಾರ್ಗದ ಮೇಲೆ ನಿರ್ಬಂಧ ಹೇರಿದರೆ ದೇಶದ ಮೇಲೆ ದೊಡ್ಡ ಮಟ್ಟದ ಸಂಕಷ್ಟ ಎದುರಾಗಬಹುದು. ಆದರೆ ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!