
ಚಾಮರಾಜನಗರ (ಕರ್ನಾಟಕ) – ಇಂದು ಇಡೀ ಜಗತ್ತು ಯುದ್ಧದ ಕರಿಛಾಯೆಯಲ್ಲಿ ಬದುಕುತ್ತಿದೆ. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರು ಜಾಗತಿಕ ಶಾಂತಿಗಾಗಿ ಅತ್ಯಂತ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಜಗತ್ತಿನಲ್ಲಿ ಶಾಂತಿ ಮತ್ತು ಸೌಖ್ಯವನ್ನು ಸ್ಥಾಪಿಸಬೇಕಾದರೆ, ಅದು ಕೇವಲ ಆಧ್ಯಾತ್ಮಿಕ ಮಾರ್ಗದಿಂದ ಮಾತ್ರ ಸಾಧ್ಯ. ರಾಗ, ದ್ವೇಷ ಮತ್ತು ವೈಮನಸ್ಯದಿಂದ ಎಂದಿಗೂ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಸ್ವಾಮೀಜಿಯವರು ಹೇಳಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ಉದ್ಗಾರಗಳನ್ನು ತೆಗೆದರು.
ಅಣುಬಾಂಬ್‌ಗಿಂತಲೂ ‘ಆತ್ಮಬಲ’ ದೊಡ್ಡದು !
ಭಾರತ ದೇಶವು ಅಣುಬಾಂಬ್‌ಗಳ ಬಲದ ಮೇಲೆ ನಿಂತಿಲ್ಲ, ಬದಲಾಗಿ ಇಲ್ಲಿನ ಜನರ ಅಪಾರವಾದ ಆತ್ಮಬಲದ (ಆತ್ಮಸ್ಥೈರ್ಯದ) ಮೇಲೆ ನಿಂತಿದೆ. ಇದೇ ಕಾರಣಕ್ಕಾಗಿ ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಇಂದಿಗೂ ಶಾಂತಿ ನೆಲೆಸಿದೆ. ಆತ್ಮಬಲದ ಮೂಲಕವೇ ಭಾರತವು ಇಂದು ಜಗತ್ತನ್ನು ಗೆದ್ದಿದೆ ಎಂದು ಮಹಾಸ್ವಾಮೀಜಿಯವರು ತಿಳಿಸಿದರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram