ಮುಸ್ಲಿಂ ಗುಂಪಿನಿಂದ ಪೊಲೀಸ್ ಠಾಣೆಗೆ ನುಗ್ಗಿ ಪೀಠೋಪಕರಣಗಳ ಧ್ವಂಸ!

ಹಿಂದೂ ಯುವಕರಿಂದ ಮೌಲ್ವಿ ಮೇಲೆ ಹಲ್ಲೆಯೆಂದು ಸುಳ್ಳು ಆರೋಪ

ಬೀದರ್ – ಜಿಲ್ಲೆಯ ಐತಿಹಾಸಿಕ ನಗರಿ ಬಸವಕಲ್ಯಾಣದಲ್ಲಿ ಮುಸ್ಲಿಂ ಮೌಲ್ವಿಯ ಮೇಲೆ ಹಿಂದೂ ಯುವಕರು ಹಲ್ಲೆ ಮಾಡಿದ್ದಾರೆ ಎಂಬ ಕಲ್ಪಿತ ಆರೋಪ ಹೊರಿಸಿ, ಸಾವಿರಾರು ಮುಸ್ಲಿಮರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. “ಮೌಲ್ವಿ (ಇಸ್ಲಾಂ ಧರ್ಮಗುರು) ಮೇಲೆ ಹಲ್ಲೆ ಮಾಡಿದ ಹಿಂದೂಗಳನ್ನು ತಕ್ಷಣ ನಮಗೆ ಒಪ್ಪಿಸಿ” ಎಂದು ಒತ್ತಾಯಿಸಿ ಗುಂಪು ಠಾಣೆಯ ಮುಂದೆ ಭಾರಿ ಗದ್ದಲ ಸೃಷ್ಟಿಸಿತು. ಸಾವಿರಾರು ಮುಸ್ಲಿಮರು ಹಠಾತ್ತನೆ ಠಾಣೆಯ ಮೇಲೆ ದಾಳಿ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಈ ಸಂಘರ್ಷದ ವೇಳೆ ಗುಂಪು ಠಾಣೆಯಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿತು. ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಈ ಘಟನೆಯ ಗಂಭೀರತೆಯನ್ನು ಅರಿತ ಉತ್ತರ ವಲಯದ ಪೊಲೀಸ್ ಐಜಿಪಿ ಮತ್ತು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ಬಸವಕಲ್ಯಾಣಕ್ಕೆ ಧಾವಿಸಿದರು. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಪೊಲೀಸ್ ಠಾಣೆಗೆ ನುಗ್ಗಿ ಸರ್ಕಾರಿ ಆಸ್ತಿಪಾಸ್ತಿ ಹಾನಿ ಮಾಡಿದ ಆರೋಪದ ಮೇಲೆ ಪೊಲೀಸರು ಒಟ್ಟು ೪೯ ಮುಸ್ಲಿಂ ಯುವಕರ ವಿರುದ್ಧ ವಿವಿಧ ಕಲಂ ಅಡಿ ಮೊಕದ್ದಮೆ ದಾಖಲಿಸಿದ್ದಾರೆ.

ಸಂಪಾದಕೀಯ ನಿಲುವು

ಪೊಲೀಸ್ ಠಾಣೆಗೆ ನುಗ್ಗಿ ವಿಧ್ವಂಸಕ ಕೃತ್ಯ ಎಸಗುವ ಮುಸ್ಲಿಮರ ಗುಂಪುಗಾರಿಕೆ! ಇದು ಅವರಿಗೆ ಪೊಲೀಸರ ಬಗ್ಗೆ ಕಿಂಚಿತ್ತೂ ಭಯವಿಲ್ಲ ಎಂಬುದರ ಸಂಕೇತವಾಗಿದೆ!