ನವಿ ಮುಂಬಯಿನಲ್ಲಿ ಪೊಲೀಸರ ‘ನಿರ್ಭಯಾ ಪಥಕ’ದ ವಾಹನ ಕಳವು ಮಾಡಿದ ಕುಡುಕನ ಬಂಧನ ! – Nirbhaya Squad’ Mumbai Police Vehicle

ಪನ್ವೇಲ್ (ರಾಯಗಡ ಜಿಲ್ಲೆ) – ಮಹಿಳೆಯರ ಸುರಕ್ಷತೆಗಾಗಿ ಸದಾ ಸನ್ನದ್ಧವಾಗಿರುವ ನವಿ ಮುಂಬಯಿ ಪೊಲೀಸರ ‘ನಿರ್ಭಯಾ ಪಥಕ’ದ ವಾಹನವನ್ನು ಕುಡುಕ ಯುವಕನೊಬ್ಬ ಅಪಹರಿಸಿದ್ದನು. ವಾಹನ ಚಲಾಯಿಸುತ್ತಾ ಆತ ಖಾರ್‌ಘರ್‌ಗೆ ತಲುಪಿದನು. ಅಲ್ಲಿ ಸ್ಥಳೀಯರೊಂದಿಗೆ ಜಗಳವಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ನಾಗರಿಕರು ಆತನನ್ನು ಪ್ರಶ್ನಿಸಿದಾಗ, ವಾಹನದ ಕಡೆಗೆ ಬೆರಳು ತೋರಿಸಿ ತಾನು ಪೊಲೀಸ್ ಎಂದು ಬಿಂಬಿಸಿಕೊಂಡಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರನ್ನು ಕರೆಸಿ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಯುವಕ ಖಾರ್‌ಘರ್‌ನ ಸಹಾಯಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸ್ವಚ್ಛತೆ ಮತ್ತು ನೀರು ಪೂರೈಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಸಂಪಾದಕೀಯ ನಿಲುವು

ಮುಂಬಯಿನಲ್ಲಿ ಪೊಲೀಸರ ವಾಹನವೇ ಕಳುವಾಗುತ್ತಿದ್ದರೆ, ಇನ್ನು ಸಾಮಾನ್ಯ ಜನರ ವಾಹನಗಳ ಸುರಕ್ಷತೆಯ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸದಿರುವುದೇ ಲೇಸು!