ಮೈಸೂರಿನ ನಂಜುಂಡೇಶ್ವರ ದಾಸೋಹ ಭವನದ ಪ್ರವೇಶದ್ವಾರದ ಬಳಿ ಸಮಾಜಘಾತುಕನಿಂದ ಮಾಂಸಾಹಾರ ಸೇವನೆ


ಮೈಸೂರು – ನಂಜನಗೂಡಿನ ಪವಿತ್ರ ಕ್ಷೇತ್ರವಾದ ನಂಜುಂಡೇಶ್ವರ ದೇವಾಲಯದ ದಾಸೋಹ ಭವನದ (ಅನ್ನದಾನ ಛತ್ರ) ಪ್ರವೇಶ ದ್ವಾರದಲ್ಲೇ ಮಾಂಸಾಹಾರ ಸೇವಿಸಿದ ಘಟನೆ ಬೆಳಕಿಗೆ ಬಂದಿದೆ. ಹೂವು ಮಾರುವ ವ್ಯಾಪಾರಿ ಪ್ರದೀಪ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರದೀಪ ದಾಸೋಹ ಭವನದ ಬಾಗಿಲಲ್ಲಿ ಕುಳಿತು ಮಾಂಸಾಹಾರ ಸೇವಿಸುತ್ತಿರುವ ಛಾಯಾಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಆಗಿತ್ತು. ಮಾಂಸಾಹಾರ ಸೇವಿಸುತ್ತಿದ್ದ ಪ್ರದೀಪನನ್ನು ಕಂಡು ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಪ್ರಶ್ನಿಸಿದ್ದಾರೆ. ಆ ನಂತರ ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಸಮಾಜಘಾತುಕ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು!