ಫೊಟೊ ಕ್ಯಾಪ್ಷನ್ – ಇರಾನ್ ಬೆಂಬಲಿಗರ ವಿರುದ್ಧ ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರು ‘ಎಕ್ಸ್’ (X) ನಲ್ಲಿ ಹಂಚಿಕೊಂಡಿರುವ ಭಾವಚಿತ್ರದಲ್ಲಿ ಹೀಗೆ ಬರೆಯಲಾಗಿದೆ..

ನವದೆಹಲಿ – ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿದ ಆಕ್ರಮಣದಲ್ಲಿ ಇರಾನ್‌ನ ಸರ್ವೋಚ್ಚ ಶಿಯಾ ಧರ್ಮಗುರು ಆಯತೊಲ್ಲಾ ಖಮೇನಿ ಅವರು ಮೃತಪಟ್ಟ ನಂತರ, ಭಾರತದ ಮುಸ್ಲಿಮರು ಖಮೇನಿ ಬಗ್ಗೆ ಶೋಕ ವ್ಯಕ್ತಪಡಿಸುವುದರ ಜೊತೆಗೆ ಇರಾನ್ ಅನ್ನು ಬೆಂಬಲಿಸುತ್ತಿದ್ದಾರೆ. ಹಲವೆಡೆ ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿವೆ. ಹಾಗೆಯೇ, ಖಮೇನಿ ಅವರ ನಿಧನಕ್ಕೆ ಭಾರತವು ಅಧಿಕೃತವಾಗಿ ದುಃಖ ವ್ಯಕ್ತಪಡಿಸಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಒಂದು ಭಾವಚಿತ್ರವು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆ ಚಿತ್ರದಲ್ಲಿರುವ ವ್ಯಕ್ತಿಯೊಬ್ಬರ ಟಿ-ಶರ್ಟ್ ಮೇಲೆ, ‘ನೀವು ಯಾವ ದೇಶದಲ್ಲಿ ವಾಸಿಸುತ್ತೀರೋ ಆ ದೇಶವನ್ನು ಬೆಂಬಲಿಸಿ, ಇಲ್ಲದಿದ್ದರೆ ನೀವು ಯಾವ ದೇಶವನ್ನು ಬೆಂಬಲಿಸುತ್ತೀರೋ ಅಲ್ಲಿಗೆ ಹೋಗಿ ವಾಸಿಸಿ’ ಎಂದು ಬರೆಯಲಾಗಿದೆ.
🏏 Yuzvendra Chahal’s bold stand
His X post – “Support the country you live in, or go live in the one you support!” – has gone viral with widespread acclaim 🇮🇳🔥
While many athletes & celebs stay silent on anti-national elements, Chahal’s clear message serves as a "slap in the… pic.twitter.com/ub7hrkykTc
— Sanatan Prabhat (@SanatanPrabhat) March 3, 2026
ಸಂಪಾದಕೀಯ ನಿಲುವುಭಾರತೀಯ ಕ್ರೀಡಾಪಟುಗಳು, ನಟರು ಮತ್ತು ಪ್ರಭಾವಿ ವ್ಯಕ್ತಿಗಳು ಸಾಮಾನ್ಯವಾಗಿ ಭಾರತದ ಪರವಾಗಿ ಬಹಿರಂಗವಾಗಿ ಬೆಂಬಲ ನೀಡುವ ಅಥವಾ ದೇಶವಿರೋಧಿಗಳನ್ನು ವಿರೋಧಿಸುವ ಹೇಳಿಕೆಗಳನ್ನು ನೀಡುವುದಿಲ್ಲ. ಅಂತಹ ಸಂದರ್ಭದಲ್ಲಿ ಚಹಲ್ ಅವರು ನೇರವಾಗಿ ಇಂತಹ ಹೇಳಿಕೆಯನ್ನು ಬೆಂಬಲಿಸಿರುವುದು ಇತರರಿಗೆ ಒಂದು ಕಪಾಳಮೋಕ್ಷವೇ ಸರಿ! |
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!