|

ಬಾಗಲಕೋಟೆ – ಇತ್ತೀಚೆಗೆ ಶಿವಜಯಂತಿಯ ಅಂಗವಾಗಿ ನಡೆದ ಹಿಂದೂಗಳ ಶೋಭಾಯಾತ್ರೆಯ ಮೇಲೆ ಇಲ್ಲಿನ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ ಘಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ, ಮಾರ್ಚ್ 1 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಕೇಸರಿ ಶಕ್ತಿ ಪ್ರದರ್ಶನ’ ಎಂಬ ಭವ್ಯ ಶೋಭಾಯಾತ್ರೆಯನ್ನು ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ತೀವ್ರ ಕಟ್ಟೆಚ್ಚರದ ನಡುವೆ ನಡೆಸಲಾಯಿತು. ಪಂಕಾ ಮಸೀದಿ ಮತ್ತು ಅದರ ಎದುರಿಗಿರುವ ಮುಸ್ಲಿಂ ಸಮುದಾಯದ ಮಾಲೀಕತ್ವದ ಅಂಗಡಿಗಳು ಕಾಣದಂತೆ ಪೊಲೀಸರು ದೊಡ್ಡ ಪರದೆಗಳಿಂದ ಅವುಗಳನ್ನು ಮುಚ್ಚಿದ್ದರು. ನಗರದಾದ್ಯಂತ ಕೇಸರಿ ಕಮಾನುಗಳು, ಫಲಕಗಳು ಮತ್ತು ಧ್ವಜಗಳು ರಾರಾಜಿಸುತ್ತಿದ್ದವು.
ಈ ಮೆರವಣಿಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಹಿಂದುತ್ವವಾದಿ ಕಾರ್ಯಕರ್ತರು ಭಾಗವಹಿಸಿದ್ದರು. ಪಂಕಾ ಮಸೀದಿಯ ಮುಂಭಾಗದಿಂದಲೇ ಈ ಭವ್ಯ ಮೆರವಣಿಗೆ ಸಾಗಿತು. ಪೊಲೀಸರು ಪಂಕಾ ಮಸೀದಿಯ ಬಳಿ ಬಿಗಿ ಬಂದೋಬಸ್ತ್ ನಿಯೋಜಿಸಿದ್ದರು. ಈ ಯಾತ್ರೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ್, ಮಾಜಿ ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶೋಭಾಯಾತ್ರೆಯಲ್ಲಿ ಎಲ್ಲಾ ಸಮುದಾಯಗಳ ಮಹಾಪುರುಷರ ಸ್ತಬ್ಧಚಿತ್ರಗಳು, ಮಕ್ಕಳ ವೇಷಭೂಷಣಗಳು, ಡೊಳ್ಳು ಕುಣಿತ, ಹಲಗೆ, ಕರಡಿ ಮಜಲು ಮತ್ತು ಸ್ವದೇಶಿ ವಾದ್ಯಗಳ ಘೋಷದೊಂದಿಗೆ ಮೆರವಣಿಗೆ ನಡೆಯಿತು. ನಗರದ ವೆಂಕಟೇಶ್ವರ ದೇವಸ್ಥಾನದಿಂದ ಆರಂಭವಾದ ಈ ಯಾತ್ರೆಯು ಕಿಲ್ಲಾ ಕೊತ್ತಲೇಶ್ವರ ದೇವಸ್ಥಾನ, ಟಾಂಗಾ ಸ್ಟ್ಯಾಂಡ್, ಎಂ.ಜಿ. ರೋಡ್, ಬಸವೇಶ್ವರ ಸರ್ಕಲ್ ಮಾರ್ಗವಾಗಿ ಸಾಗಿ ಬಸವೇಶ್ವರ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು.
ಸಂಪಾದಕೀಯ ನಿಲುವುಕಾಂಗ್ರೆಸ್ ಸರಕಾರದ ಕರ್ನಾಟಕ ಪೊಲೀಸರು ಹಿಂದೂಗಳ ಶೋಭಾಯಾತ್ರೆಯನ್ನು ನಿಷೇಧಿಸಿಲ್ಲ ಎಂಬುದೇ ಒಂದು ಸಮಾಧಾನದ ವಿಷಯ! ಆದರೆ ಈ ರೀತಿಯ ಮೇಲ್ನೋಟದ ಕ್ರಮಗಳನ್ನು ಕೈಗೊಳ್ಳುವುದು ಕೇವಲ ಸಮಯ ವ್ಯರ್ಥ ಮಾಡುವ ಕೆಲಸವಾಗಿದೆ. ಮೂಲತಃ ‘ಕಿತಾಲ್-ಫಿ-ಸಬಿಲಿಲ್ಲಾಹ್’ ಅಂದರೆ ಇಸ್ಲಾಂನ ರಕ್ಷಣೆಗಾಗಿ ಸಶಸ್ತ್ರ ಸಂಘರ್ಷ ಮಾಡುವುದು ಅವಶ್ಯಕ ಎಂದು ಕಾಫಿರ ವಿರೋಧಿ ಬೋಧನೆಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೆ ಹಿಂದೂಗಳ ಮೇಲೆ ಯಾವುದೋ ಒಂದು ರೀತಿಯಲ್ಲಿ ದಾಳಿಗಳು ನಡೆಯುತ್ತಲೇ ಇರುತ್ತವೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!