ಗಾಜಿಯಾಬಾದ್ (ಉತ್ತರ ಪ್ರದೇಶ)ನಲ್ಲಿ ಸಲೀಂ ವಾಸ್ತಿಕ್ ಮೇಲೆ ಪ್ರಾಣಾಂತಿಕ ದಾಳಿ ನಡೆಸಿದ್ದ ಜೀಶನ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು

ಗಾಜಿಯಾಬಾದ್ (ಉತ್ತರ ಪ್ರದೇಶ) – ಇಲ್ಲಿನ ‘ಎಕ್ಸ್ ಮುಸ್ಲಿಂ’ (ಹಿಂದೆ ಮುಸ್ಲಿಂ ಆಗಿದ್ದವರು) ಸಲೀಂ ವಾಸ್ತಿಕ್ ಅವರ ಮೇಲೆ ಪ್ರಾಣಾಂತಿಕ ದಾಳಿ ನಡೆಸಿದ್ದ ಜೀಶನ್, ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಲೋನಿ ಎಂಬಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆತನನ್ನು ಹೊಡೆದುರುಳಿಸಲಾಯಿತು. ಆತನ ಮೇಲೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈ ಎನ್‌ಕೌಂಟರ್ ಸಮಯದಲ್ಲಿ ಲೋನಿ ಪೊಲೀಸ್ ಠಾಣೆಯ ಮುಖ್ಯಸ್ಥ ಮುಕೇಶ್ ಕುಮಾರ್ ಅವರ ಬುಲೆಟ್‌ಪ್ರೂಫ್ ಜಾಕೆಟ್‌ಗೆ ಗುಂಡು ತಗುಲಿದೆ. ಹಾಗೆಯೇ ಪೊಲೀಸ್ ಕಾನ್ಸ್ಟೇಬಲ್‌ಗಳಾದ ವಿಪಿನ್ ಕುಮಾರ್ ಮತ್ತು ಸಚಿನ್ ಕುಮಾರ್ ಗಾಯಗೊಂಡಿದ್ದು, ಅವರಿಬ್ಬರ ಕೈಗೆ ಗುಂಡು ತಗುಲಿದೆ. ಪೊಲೀಸರು ಆತನಿಂದ ವಿದೇಶಿ ಪಿಸ್ತೂಲು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.