ಲೇಖಕ ಮತ್ತು ವಿಜ್ಞಾನಿ ಡಾ. ಆನಂದ ರಂಗನಾಥನ್ ಅವರಿಂದ ನ್ಯಾಯಮೂರ್ತಿಗಳಿಗೆ ಪ್ರಶ್ನೆ

ನವ ದೆಹಲಿ – ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರದ ಕುರಿತು ಎನ್.ಸಿ.ಇ.ಆರ್.ಟಿ. ಪುಸ್ತಕದಲ್ಲಿ ಬರೆದ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಆ ಪುಸ್ತಕದ ಮೇಲೆ ನಿಷೇಧ ಹೇರಿದೆ. ಈ ಸಂದರ್ಭದಲ್ಲಿ ಪ್ರಖರ ರಾಷ್ಟ್ರವಾದಿ ಲೇಖಕ, ಹಿಂದುತ್ವನಿಷ್ಠ ಮತ್ತು ವಿಜ್ಞಾನಿ ಡಾ. ಆನಂದ ರಂಗನಾಥನ್ ಅವರು ತಮ್ಮ ‘ಎಕ್ಸ್’ ಖಾತೆಯ ಮೂಲಕ ವಿಡಿಯೋವೊಂದನ್ನು ಪ್ರಸಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು, ‘ನ್ಯಾಯ ಕುರುಡಾಗಿರಬಹುದು, ಆದರೆ ನ್ಯಾಯಾಧೀಶರಲ್ಲ. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ಪ್ರಚಂಡ ಭ್ರಷ್ಟಾಚಾರ ಅವರಿಗೆ ಕಾಣಿಸುತ್ತಿಲ್ಲವೇ?’ ಎಂದು ವಾಸ್ತವಿಕ ಪ್ರಶ್ನೆಯನ್ನು ಎತ್ತಿದ್ದಾರೆ.
ಡಾ. ಆನಂದ ರಂಗನಾಥನ್ ಅವರು ಮಂಡಿಸಿದ ಪ್ರಮುಖ ಅಂಶಗಳು!
೧. ನ್ಯಾಯಾಧೀಶರ ಮನೆಯಲ್ಲಿ ನಗದು ಹಣದ ಚೀಲಗಳು ಪತ್ತೆಯಾದ ನಂತರ ಅವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಕೇವಲ ಅವರನ್ನು ಬೇರೆ ನಗರಕ್ಕೆ ವರ್ಗಾವಣೆ ಮಾಡಲಾಗುತ್ತದೆ.
೨. ಭಾರತೀಯ ನ್ಯಾಯಾಲಯಗಳಲ್ಲಿ ೫ ಕೋಟಿ ೪೦ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಪ್ರಸ್ತುತ ವೇಗದಲ್ಲಿ ಈ ಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಲು ೩೨೩ ವರ್ಷಗಳು ಬೇಕಾಗಬಹುದು. ಇವುಗಳಲ್ಲಿ ೧ ಲಕ್ಷ ೮೨ ಸಾವಿರ ಪ್ರಕರಣಗಳು ೩೦ ವರ್ಷಗಳಷ್ಟು ಹಳೆಯದಾಗಿವೆ. ಇವುಗಳಲ್ಲಿ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳೇ ಹೆಚ್ಚಿವೆ. ಹಾಗೆಯೇ ಕಾರಾಗೃಹದಲ್ಲಿರುವ ಒಟ್ಟು ಕೈದಿಗಳಲ್ಲಿ ಶೇ. ೭೬ ರಷ್ಟು ಕೈದಿಗಳು ‘ವಿಚಾರಣಾಧೀನ’ (ಅಂಡರ್ ಟ್ರಯಲ್) ಕೈದಿಗಳಾಗಿದ್ದಾರೆ, ಇದರಿಂದಾಗಿ ಅವರು ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
೩. ಭಾರತದಲ್ಲಿ ಪ್ರತಿ ೧೦ ಲಕ್ಷ ಜನಸಂಖ್ಯೆಗೆ ಕೇವಲ ೨೦ ನ್ಯಾಯಾಧೀಶರಿದ್ದಾರೆ. ಉಚ್ಚ ನ್ಯಾಯಾಲಯಗಳಲ್ಲಿ ಶೇ. ೩೨ ರಷ್ಟು ಮತ್ತು ಒಟ್ಟು ಶೇ. ೨೧ ರಷ್ಟು ನ್ಯಾಯಾಂಗ ಹುದ್ದೆಗಳು ಖಾಲಿ ಇವೆ.
೪. ‘ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಿಸುತ್ತಾರೆ’, ಈ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಆಲೋಚಿಸುವ ಮತ್ತು ಅದರಲ್ಲಿ ಸುಧಾರಣೆ ತರುವ ಅಗತ್ಯವಿದೆ. ಉಚ್ಚ ನ್ಯಾಯಾಲಯದ ಸುಮಾರು ಶೇ. ೫೦ ರಷ್ಟು ನ್ಯಾಯಾಧೀಶರು ಮತ್ತು ಸರ್ವೋಚ್ಚ ನ್ಯಾಯಾಲಯದ ಶೇ. ೩೩ ರಷ್ಟು ನ್ಯಾಯಾಧೀಶರು ಹಿರಿಯ ನ್ಯಾಯಾಂಗ ಸದಸ್ಯರ ಸಂಬಂಧಿಕರಾಗಿದ್ದಾರೆ.
೫. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೇ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ ಎಂದು ಹೇಳಿದ್ದಾರೆ. ಆದರೂ ಕಲಂ ೨೩೫ ಮತ್ತು ೧೯೯೭ ರ ಘೋಷಣೆಯ ಪ್ರಕಾರ, ನ್ಯಾಯಾಂಗ ವ್ಯವಸ್ಥೆಯ ಅನುಮತಿಯಿಲ್ಲದೆ ಯಾರೂ ನ್ಯಾಯಾಂಗ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತಿಲ್ಲ. ೨೦೧೭ ರಿಂದ ೨೦೨೧ ರ ಅವಧಿಯಲ್ಲಿ ನ್ಯಾಯಾಂಗ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ೧ ಸಾವಿರ ೬೩೧ ದೂರುಗಳು ಬಂದಿದ್ದವು. ಆ ದೂರುಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಅಥವಾ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಯಿತು.
೬. ಭಾರತದ ಕೇವಲ ಶೇ. ೧೨ ರಷ್ಟು ನ್ಯಾಯಾಧೀಶರು ಮಾತ್ರ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
೭. ೧೯೯೩ ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರ ಮೇಲೆ ಆರ್ಥಿಕ ಅಕ್ರಮ ಮತ್ತು ಸಾರ್ವಜನಿಕ ನಿಧಿಯನ್ನು ದುರ್ಬಳಕೆ ಮಾಡಿದ ಆರೋಪವಿತ್ತು. ಸಂಸದೀಯ ತನಿಖಾ ಸಮಿತಿಯು ಅವರನ್ನು ದೋಷಿ ಎಂದು ಘೋಷಿಸಿತ್ತು; ಆದರೆ ಬಹುಮತದ ಕೊರತೆಯಿಂದಾಗಿ ವಜಾ ಪ್ರಕ್ರಿಯೆಯ (ಇಂಪೀಚ್‌ಮೆಂಟ್/ಮಹಾಭಿಯೋಗ) ಪ್ರಸ್ತಾವನೆಯು ಅಂತಿಮವಾಗಿ ಲೋಕಸಭೆಯಲ್ಲಿ ವಿಫಲವಾಯಿತು.
ಭ್ರಷ್ಟಾಚಾರ ಎಸಗಿದ ನ್ಯಾಯಮೂರ್ತಿಗಳ ಪಟ್ಟಿಯನ್ನೇ ಓದಿದ ರಂಗನಾಥನ್!ಡಾ. ರಂಗನಾಥನ್ ಅವರು ವಿಡಿಯೋದಲ್ಲಿ ಕಳೆದ ಕೆಲವು ದಶಕಗಳ ನ್ಯಾಯಮೂರ್ತಿಗಳು ಎಸಗಿದ ಭ್ರಷ್ಟಾಚಾರದ ಪಟ್ಟಿಯನ್ನು ಓದಿದರು. ಅದು ಈ ಕೆಳಗಿನಂತಿದೆ ೧. ವರ್ಷ ೨೦೦೩: ದೆಹಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶಮಿತ ಮುಖರ್ಜಿ ೨. ವರ್ಷ ೨೦೧೧: ಕೋಲ್ಕತ್ತಾ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೌಮಿತ್ರ ಸೇನ್ ೩. ವರ್ಷ ೨೦೧೧: ಸಿಕ್ಕಿಂ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಪಿ.ಡಿ. ದಿನಕರನ್ ೪. ವರ್ಷ ೨೦೧೪: ನ್ಯಾಯಾಧೀಶ ಪಿ.ಪಿ. ಇನಾಮದಾರ ೫. ವರ್ಷ ೨೦೧೫: ನ್ಯಾಯಾಧೀಶ ಎ.ಡಿ. ಆಚಾರ್ಯ ೬. ವರ್ಷ ೨೦೧೬: ನ್ಯಾಯಾಧೀಶ ರಚನಾ ತಿವಾರಿ ಲಖನ ಪಾಲ್ ೭. ವರ್ಷ ೨೦೨೫: ನ್ಯಾಯಾಧೀಶ ಯಶವಂತ್ ವರ್ಮಾ ಈ ಎಲ್ಲಾ ನ್ಯಾಯಮೂರ್ತಿಗಳ ಮೇಲೆ ಭ್ರಷ್ಟಾಚಾರ ಮತ್ತು ಅನುಕೂಲಕರ ತೀರ್ಪು ನೀಡಲು ‘ಆರ್ಥಿಕ’ ಹೊಂದಾಣಿಕೆ ಮಾಡಿಕೊಂಡ ಆರೋಪಗಳಿವೆ. ಅವರ ಮೇಲೆ ಕ್ರಮಗಳೂ ಜರುಗಿವೆ. ಈಗಾಗಲೇ ಹಲವು ನ್ಯಾಯಮೂರ್ತಿಗಳು ನ್ಯಾಯಾಂಗ ವ್ಯವಸ್ಥೆಯ ಭ್ರಷ್ಟಾಚಾರದ ಮೇಲೆ ಬೆಳಕು ಚೆಲ್ಲಿದ್ದಾರೆ! – ಡಾ. ರಂಗನಾಥನ್ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಅನೇಕ ನ್ಯಾಯಮೂರ್ತಿಗಳು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ ಎಂದು ಹೇಳಿದ್ದಾರೆ. ಮಾಜಿ ಮುಖ್ಯ ನ್ಯಾಯಮೂರ್ತಿ ವೆಂಕಟರಮಣ ಅವರು ಉಚ್ಚ ನ್ಯಾಯಾಲಯದ ಶೇ. ೯೦ ರಷ್ಟು ನ್ಯಾಯಾಧೀಶರು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಎಸ್.ಪಿ. ಭರೂಚಾ, ನ್ಯಾಯಮೂರ್ತಿ ಮೈಕೆಲ್ ಸಲ್ಡಾನ್ಹಾ, ನ್ಯಾಯಮೂರ್ತಿ ಜೆ. ಚಲಮೇಶ್ವರ್, ನ್ಯಾಯಮೂರ್ತಿ ಬಿ.ಆರ್. ಕೃಷ್ಣ ಅಯ್ಯರ್, ನ್ಯಾಯಮೂರ್ತಿ ಗಂಗೂಲಿ, ನ್ಯಾಯಮೂರ್ತಿ ಉಮಾ ಪಾಲ್ ಮೊದಲಾದವರು ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರದ ಪ್ರಮಾಣ ಮತ್ತು ಅದರಿಂದ ನ್ಯಾಯಾಂಗ ವ್ಯವಸ್ಥೆಯು ಶಿಥಿಲಗೊಂಡಿರುವ ಬಗ್ಗೆ ಕಾಲಕಾಲಕ್ಕೆ ತಿಳಿಸಿದ್ದಾರೆ. ಮಾಜಿ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು, ‘ಇಲ್ಲಿಯವರೆಗೆ ೩ ಜನ ಮುಖ್ಯ ನ್ಯಾಯಮೂರ್ತಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣಗಳನ್ನು ಮುಂದೂಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯು ತನ್ನೊಳಗಿನ ಭ್ರಷ್ಟ ನ್ಯಾಯಾಧೀಶರನ್ನು ರಕ್ಷಿಸಿದೆ’ ಎಂದು ಹೇಳಿಕೆ ನೀಡಿದ್ದರು. ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರು, ‘ಸರ್ವೋಚ್ಚ ನ್ಯಾಯಾಲಯದ ಒಬ್ಬನೇ ಒಬ್ಬ ನ್ಯಾಯಮೂರ್ತಿಯೂ ಭ್ರಷ್ಟರಲ್ಲ’ ಎಂಬ ಹೇಳಿಕೆಯು ಸುಳ್ಳು ಎಂದು ಹೇಳಿದ್ದರು. ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ ಗೋಗೋಯ್ ಅವರು ಭ್ರಷ್ಟಾಚಾರದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಸಹಭಾಗಿಯಾಗಿದೆ ಎಂದು ಹೇಳಿದ್ದಾರೆ. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ