ರಾಯ್ ಬರೇಲಿ (ಉತ್ತರ ಪ್ರದೇಶ): ಹಿಂದೂ ಧರ್ಮ ಸ್ವೀಕರಿಸಿ ಪ್ರಿಯಕರ ವಿಕಾಸ್ ಜೊತೆ ವಿವಾಹವಾದ ನಾಝಿಯಾ !

ಎರಡೂ ಕಡೆಯ ಕುಟುಂಬಸ್ಥರ ಉಪಸ್ಥಿತಿ

​ರಾಯ್ ಬರೇಲಿ (ಉತ್ತರ ಪ್ರದೇಶ) – ಇಲ್ಲಿ ಇತ್ತೀಚೆಗೆ ನಾಝಿಯಾ ಎಂಬ ಹೆಸರಿನ ೧೯ ವರ್ಷದ ಮುಸ್ಲಿಂ ಯುವತಿಯು ಹಿಂದೂ ಧರ್ಮವನ್ನು ಸ್ವೀಕರಿಸಿ ಸ್ವತಃ ತನ್ನ ಹೆಸರನ್ನು ‘ಮೀನಾಕ್ಷಿ’ ಎಂದು ಬದಲಾಯಿಸಿಕೊಂಡಳು. ಆ ನಂತರ ವಿಕಾಸ್ ಎಂಬ ೨೦ ವರ್ಷದ ಹಿಂದೂ ಪ್ರಿಯಕರನ ಜೊತೆ ವಿವಾಹವಾದಳು. ಈ ವಿವಾಹವು ಸಿವಿಲ್ ನ್ಯಾಯಾಲಯದ ಆವರಣದಲ್ಲಿರುವ ಶಿವನ ದೇವಾಲಯದಲ್ಲಿ ಸಾಂಪ್ರದಾಯಿಕ ಹಿಂದೂ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಈ ಸಮಾರಂಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದರು. ಅಲ್ಲದೆ ವಿಶ್ವ ಹಿಂದೂ ಪರಿಷತ್ತಿನ ಕೆಲವು ಪದಾಧಿಕಾರಿಗಳೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

​ಈ ಕುರಿತಾದ ಒಂದು ವರದಿಯ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ರಾಯ್ ಬರೇಲಿಯ ಧೌರಹರಾ ಗ್ರಾಮದ ನಿವಾಸಿ ವಿಕಾಸ್ ಮತ್ತು ನಗರ ಕೊತ್ವಾಲಿ ವ್ಯಾಪ್ತಿಯ ಶೇಖವಾಡಾ ಪ್ರದೇಶದ ನಾಝಿಯಾ ಎಂಬುವವರ ಪರಿಚಯವಾಗಿತ್ತು. ಈ ಪರಿಚಯವು ಮುಂದೆ ಪ್ರೇಮಕ್ಕೆ ಪರಿವರ್ತನೆಯಾಗಿ ಇಬ್ಬರೂ ಜೊತೆಯಾಗಿ ಜೀವನ ನಡೆಸಲು ತೀರ್ಮಾನಿಸಿದರು.

ಸಂಪಾದಕೀಯ ನಿಲುವು

ಜಾತ್ಯತೀತವಾದಿಗಳು ಅನ್ಯ ಇಂತಹ ಘಟನೆಯಲ್ಲಿ ಮಾಡುವಂತೆ, ಈ ಘಟನೆಯನ್ನು ಬಂಡವಾಳ ಮಾಡಿಕೊಂಡು ‘ಇದು ಜಾತ್ಯತೀತತೆಗೆ ಆದರ್ಶ’ ಎಂಬ ರೀತಿಯಲ್ಲಿ ಪ್ರಚಾರ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ!