ದೆಹಲಿಯ ಹೆಸರನ್ನು ‘ಇಂದ್ರಪ್ರಸ್ಥ’ ಎಂದು ಬದಲಾಯಿಸಲು ಭಾಜಪ ಸಂಸದರ ಆಗ್ರಹ Delhi Name Change Indraprastha

ನವ ದೆಹಲಿ – ಕೇರಳ ರಾಜ್ಯದ ಹೆಸರನ್ನು ‘ಕೇರಳಮ್’ ಎಂದು ಬದಲಾಯಿಸುವ ಪ್ರಸ್ತಾವನೆಗೆ ಕೇಂದ್ರ ಸರಕಾರವು ಸಮ್ಮತಿ ನೀಡಿದ ನಂತರ, ಈಗ ಇಲ್ಲಿನ ಭಾಜಪ ಸಂಸದ ಪ್ರವೀಣ್ ಖಂಡೇಲವಾಲ ಅವರು ನೇರವಾಗಿ ದೆಹಲಿಯ ಹೆಸರನ್ನೇ ಬದಲಾಯಿಸಿ ‘ಇಂದ್ರಪ್ರಸ್ಥ’ ಎಂದು ನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿಂದೆ ಭಾರತದಲ್ಲಿ ಕಲಕತ್ತಾ ನಗರದ ಹೆಸರನ್ನು ಕೋಲಕಾತಾ, ಅಲಹಾಬಾದ್ ಅನ್ನು ಪ್ರಯಾಗರಾಜ, ಮದ್ರಾಸ್ ಅನ್ನು ಚೆನ್ನೈ ಮತ್ತು ಬಾಂಬೆಯನ್ನು ಮುಂಬಯಿ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹೆಸರನ್ನು ಸಹ ಬದಲಾಯಿಸಲಾಗುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.
ಸಂಸದ ಖಂಡೇಲವಾಲ ಅವರು ಕೇಂದ್ರ ಗೃಹ ಸಚಿವ ಅಮಿತ ಶಾಹ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಅವರು ರಾಜಧಾನಿ ದೆಹಲಿಯ ಹೆಸರನ್ನು ‘ಇಂದ್ರಪ್ರಸ್ಥ’ ಎಂದು ಬದಲಾಯಿಸಬೇಕೆಂದು ವಿನಂತಿಸಿದ್ದಾರೆ. ‘ದೆಹಲಿ ಎನ್ನುವ ಹೆಸರು ಮಧ್ಯಕಾಲೀನ ಮತ್ತು ವಸಾಹತುಶಾಹಿ ಕಾಲಘಟ್ಟಕ್ಕೆ ಸೇರಿದ್ದಾಗಿದೆ, ಆದರೆ ಇಂದ್ರಪ್ರಸ್ಥ ಎಂಬ ಹೆಸರಿನಿಂದ ನಮ್ಮ ಪ್ರಾಚೀನ ಸಂಸ್ಕೃತಿಯ ದರ್ಶನವಾಗುತ್ತದೆ’ಎಂದು ಖಂಡೇಲವಾಲ ಹೇಳಿದ್ದಾರೆ.

ದೆಹಲಿಯ ಇತಿಹಾಸ

ದೆಹಲಿಯು ಯಾವಾಗಲೂ ದೇಶದ ರಾಜಧಾನಿ ನಗರವಾಗಿಯೇ ಉಳಿದುಬಂದಿದೆ. ಆದ್ದರಿಂದ ಈ ನಗರದ ಮೇಲೆ ನಿರಂತರವಾಗಿ ವಿವಿಧ ರಾಜ-ಮಹಾರಾಜರು ದಾಳಿಗಳನ್ನು ಮಾಡಿದ್ದಾರೆ. ಈ ದಾಳಿಗಳಲ್ಲಿ ನಗರವು ಹಲವು ಬಾರಿ ಧ್ವಂಸಗೊಂಡಿದೆ. ಈ ಹಿಂದೆ ದೆಹಲಿ ನಗರವನ್ನು ದಿಲ್ಲಿಕಾ, ದಹಲಿ, ತುಘಲಕಾಬಾದ, ಶಾಹಜಹಾನಾಬಾದ ಮತ್ತು ನವಿ ದೆಹಲಿ ಎಂಬ ಹೆಸರುಗಳಿಂದ ಗುರುತಿಸಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಈ ನಗರವನ್ನು ‘ದಿಲ್ಲಿ’ ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ