​ಮುಂಬಯಿ: ೨೨ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ !

​ದಹಿಸರ್ – ಇಲ್ಲಿನ ಜೆ.ಬಿ.ಎನ್.ಸಿ. ಇಂಟರ್ ನ್ಯಾಷನಲ್ ಶಾಲೆಗೆ ಬಾಂಬ್ ಸ್ಫೋಟದ ಬೆದರಿಕೆ ಹಾಕುವ ಇ-ಮೇಲ್ ಬಂದಿದೆ. ಪೊಲೀಸರು ಶಾಲೆಗೆ ತೆರಳಿ ಇಡೀ ಪ್ರದೇಶವನ್ನು ಸೀಲ್ ಮಾಡಿ ಬಂದೋಬಸ್ತ್ ಹೆಚ್ಚಿಸಿದ್ದಾರೆ. ಪರಿಸರದ ಕೂಲಂಕಷ ಪರಿಶೀಲನೆಯಲ್ಲಿ ಯಾವುದೇ ಸಂದೇಹಾಸ್ಪದ ವಸ್ತುಗಳು ಇರಬಾರದೆಂದು ಜಾಗರೂಕತೆ ವಹಿಸಲಾಗಿತ್ತು. ಮುಂಬಯಿ ಉಪನಗರದಲ್ಲಿನ ಸುಮಾರು ೨೨ಕ್ಕೂ ಹೆಚ್ಚು ಶಾಲೆಗಳಿಗೆ ಇದೇ ರೀತಿಯ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಹಾಗಾಗಿ ‘ಇದು ಕೇವಲ ಕಿಡಿಗೇಡಿತನವೇ ಅಥವಾ ಇದರ ಹಿಂದೆ ಯಾವುದಾದರೂ ದೊಡ್ಡ ಸಂಚು ಇದೆಯೇ?’ ಎಂಬ ಬಗ್ಗೆ ಪೊಲೀಸ್ ವ್ಯವಸ್ಥೆಯು ತನಿಖೆ ನಡೆಸುತ್ತಿದೆ. ನಗರದ ಶಾಲೆಗಳ ಸುತ್ತಮುತ್ತಲೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಪೊಲೀಸರು ಇದರ ಕೂಲಂಕಷ ತನಿಖೆ ನಡೆಸಬೇಕು. ಇದು ಕಿಡಿಗೇಡಿತನ ಎಂದು ಕಂಡುಬಂದಲ್ಲಿ, ಶೈಕ್ಷಣಿಕ ಹಾನಿ ಉಂಟುಮಾಡಿದ್ದಕ್ಕಾಗಿ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಅನಗತ್ಯ ಒತ್ತಡ ತಂದಿದ್ದಕ್ಕಾಗಿ ಕಠಿಣ ಶಿಕ್ಷೆ ವಿಧಿಸಬೇಕು!