ಇಸ್ಲಾಂನಲ್ಲಿನ ನ್ಯೂನ್ಯತೆಗಳನ್ನು ಬಹಿರಂಗವಾಗಿ ಮಂಡಿಸುವ ಸಲೀಮ್ ವಾಸ್ತಿಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ

  • ಚಾಕುವಿನಿಂದ ಇರಿತ; ಹೊಟ್ಟೆ, ಎದೆ ಮತ್ತು ಕುತ್ತಿಗೆಯ ಮೇಲೆ ಗಾಯ

  • ಸ್ಥಿತಿ ಗಂಭೀರ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಗಾಜಿಯಾಬಾದ್ ಜಿಲ್ಲೆಯ ಲೋನಿಯಲ್ಲಿ ವಾಸಿಸುವ ಮತ್ತು ಇಸ್ಲಾಂ ಧರ್ಮದಲ್ಲಿನ ಲೋಪದೋಷಗಳನ್ನು ಬಹಿರಂಗವಾಗಿ ಮಂಡಿಸುವ ‘ಎಕ್ಸ್ ಮುಸ್ಲಿಂ’ (ಹಿಂದೆ ಮುಸಲ್ಮಾನರಾಗಿದ್ದವರು) ಸಲೀಮ್ ವಾಸ್ತಿಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸಲೀಮ್ ವಾಸ್ತಿಕ್ ಅವರು ಸತತವಾಗಿ ಇಸ್ಲಾಮಿ ವಿಮರ್ಶೆ ಮಾಡುತ್ತಿದ್ದರಿಂದ ಕೆಲವರು ಅಸಮಾಧಾನಗೊಂಡಿದ್ದರು. ರಮಜಾನ್ ಮಾಸದ ಶುಕ್ರವಾರದ ಬೆಳಗಿನ ನಮಾಜ್ ನಂತರ ವಾಸ್ತಿಕ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿದೆ. ಸಲೀಮ್ ಅವರಿಗೆ ಚಾಕುವಿನಿಂದ ಇರಿಯಲಾಗಿದ್ದು, ಅವರ ಕುತ್ತಿಗೆಗೆ ಆಳವಾದ ಗಾಯವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಲೀಮ್ ಅವರ ಸ್ಥಿತಿ ಸದ್ಯ ಗಂಭೀರವಾಗಿದೆ.

೧. ಕುತ್ತಿಗೆಗೆ ಆಗಿರುವ ಗಂಭೀರ ಗಾಯದಿಂದಾಗಿ ಅವರ ಸ್ಥಿತಿ ಚಿಂತಾಜನಕವಾಗಿದೆ. ದಾಳಿಕೋರರ ಗುರುತನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಸಲೀಮ್ ಅವರ ಹೊಟ್ಟೆ, ಎದೆ ಮತ್ತು ಕುತ್ತಿಗೆಯ ಮೇಲೆ ಚಾಕುವಿನಿಂದ ಇರಿಯಲಾಗಿದೆ ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

೨. ‘ಸಲೀಮ್ ಅವರ ಧ್ವನಿಯನ್ನು ಅಡಗಿಸಲು ಈ ದಾಳಿ ನಡೆಸಲಾಗಿದೆ’ ಎಂದು ಸಲೀಮ್ ಅವರ ಸಹೋದ್ಯೋಗಿ ಎಹ್ಸಾನ್ ಮಾಹಿತಿ ನೀಡಿದ್ದಾರೆ, ಅಲ್ಲದೆ ಯಾರ ಹೆಸರನ್ನೂ ಹೇಳದೆ ಅವರು ಇಸ್ಲಾಮಿ ಮೂಲಭೂತವಾದಿಗಳ ಮೇಲೆ ಆರೋಪ ಹೊರಿಸಿದ್ದಾರೆ.

ಯಾರು ಈ ಸಲೀಮ್ ವಾಸ್ತಿಕ್?

ಮಾಧ್ಯಮಗಳ ವರದಿಗಳ ಪ್ರಕಾರ, ಸಲೀಮ್ ವಾಸ್ತಿಕ್ ಇಸ್ಲಾಂ ಧರ್ಮದ ಬಗ್ಗೆ ಸುಧಾರಣಾವಾದಿ ನಿಲುವನ್ನು ಮಂಡಿಸುತ್ತಾರೆ. ಅವರು ಸಮೂಹ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು, ಹಾಗೂ ಅನೇಕ ಸಾರ್ವಜನಿಕ ವಿಚಾರ ಸಂಕಿರ್ಣಗಳಲ್ಲಿ ಧಾರ್ಮಿಕ ಮೌಲ್ವಿಗಳಿಗೆ ಇಸ್ಲಾಂ ಬಗ್ಗೆ ಚರ್ಚಿಸಲು ಸವಾಲು ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಅವರ ವಿರುದ್ಧ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಪ್ರಕರಣದಲ್ಲಿ ಎರಡು ದೂರುಗಳು ದಾಖಲಾಗಿದ್ದವು.

ಸಂಪಾದಕೀಯ ನಿಲುವು

  • ಹಿಂದೂ ಧರ್ಮದ ವಿಮರ್ಶೆಯ ಹೆಸರಿನಲ್ಲಿ ಧರ್ಮದ ಮೇಲೆ ಕೀಳು ಮಟ್ಟದ ಟೀಕೆಗಳನ್ನು ಮಾಡಲಾಗುತ್ತದೆ. ಆದರೂ ಹಿಂದೂಗಳು ಅದನ್ನು ವೈಚಾರಿಕವಾಗಿ ಎದುರಿಸುತ್ತಾರೆ. ಹೀಗಿದ್ದರೂ ಕೂಡ ಇಂದು ಹಿಂದೂಗಳನ್ನು ‘ಅಸಹಿಷ್ಣುಗಳು’ ಎಂದು ಕರೆಯಲಾಗುತ್ತದೆ. ಇನ್ನೊಂದೆಡೆ, ಇಸ್ಲಾಂ ಧರ್ಮದ ನ್ಯೂನ್ಯತೆಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಒಬ್ಬ ಮುಸಲ್ಮಾನನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗುತ್ತದೆ. ಪ್ರಗತಿಪರರು ಎಂದು ಹೇಳಿಕೊಳ್ಳುವವರು ಈ ಬಗ್ಗೆ ಮುಸಲ್ಮಾನರಿಗೆ ಧರ್ಮದ ವಿಮರ್ಶೆಯನ್ನು ಸ್ವೀಕರಿಸಲು ಉಪದೇಶ ನೀಡುವರೇ?
  • ಸಾಮಾನ್ಯವಾಗಿ ನಮಾಜ್ ಪಠಣದ ನಂತರವೇ ಇಂತಹ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿರುವುದು ಕಂಡುಬರುತ್ತದೆ. ನಮಾಜ್ ಪಠಣಕ್ಕೆ ಬಂದವರಿಗೆ ಪ್ರಚೋದನೆ ನೀಡಿ ಇಂತಹ ದಾಳಿಗಳನ್ನು ನಡೆಸಲಾಗುತ್ತಿದೆಯೇ? ಈ ಬಗ್ಗೆ ತನಿಖೆ ನಡೆಸಿ ಯಾಕೆ ಕ್ರಮ ಕೈಗೊಳ್ಳಬಾರದು?