
ಚೆನ್ನೈ (ತಮಿಳುನಾಡು) – ಭಾರತೀಯ ನೌಕಾಪಡೆಯ ಸಮುದ್ರ ಶಕ್ತಿಯನ್ನು ಹೆಚ್ಚಿಸಲು ನೌಕಾಪಡೆಯು ಜಲಂತರ್ಗಾಮಿ ವಿರೋಧಿ ಯುದ್ಧನೌಕೆಯಾದ ‘ಐ.ಎನ್.ಎಸ್. ಅಂಜದೀಪ’ ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದೆ. ಆಳವಿಲ್ಲದ ನೀರಿನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ೮ ಜಲಂತರ್ಗಾಮಿ ವಿರೋಧಿ ಯುದ್ಧನೌಕೆಗಳ ಸರಣಿಯಲ್ಲಿನ ಈ ಮೂರನೇ ಯುದ್ಧನೌಕೆಯು ಫೆಬ್ರವರಿ ೨೭ ರಂದು ನೌಕಾಪಡೆಗೆ ಸೇರ್ಪಡೆಯಾಯಿತು. ಶೇ. ೮೦% ಕ್ಕೂ ಹೆಚ್ಚು ಸ್ವದೇಶಿ ಸಾಮಗ್ರಿಗಳಿಂದ ನಿರ್ಮಿಸಲಾದ ಈ ಯುದ್ಧನೌಕೆಯು ೭೭ ಮೀಟರ್ ಉದ್ದವಿದೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ ಕುಮಾರ್ ತ್ರಿಪಾಠಿ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೋಲಕಾತಾದ ‘ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್’ ಎಂಬ ಸ್ವದೇಶಿ ಸಂಸ್ಥೆಯು ಈ ಯುದ್ಧನೌಕೆಯನ್ನು ಸಿದ್ಧಪಡಿಸಿದೆ.
‘ಅಂಜದೀಪ’ನ ವೈಶಿಷ್ಟ್ಯಗಳು !
೧. ಮುಖ್ಯ ಕಾರ್ಯ : ಈ ಯುದ್ಧನೌಕೆಯನ್ನು ‘ಡಾಲ್ಫಿನ್ ಹಂಟರ್’ ಆಗಿ ಕೆಲಸ ಮಾಡಲು ನಿರ್ಮಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ, ಅಂದರೆ ಆಳವಿಲ್ಲದ ನೀರಿನಲ್ಲಿ ಅಡಗಿರುವ ಶತ್ರುಗಳ ಜಲಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚುವುದು, ಅವುಗಳನ್ನು ಬೆನ್ನಟ್ಟುವುದು ಮತ್ತು ನಾಶಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
೨. ‘ಅಂಜದೀಪ’ ಎಂದು ಹೆಸರಿಡಲು ಕಾರಣವೇನು? : ಕರ್ನಾಟಕದ ಕಾರವಾರ ಕರಾವಳಿಯಲ್ಲಿರುವ ‘ಅಂಜದೀಪ’ ದ್ವೀಪದ ನೆನಪಿಗಾಗಿ ಈ ಯುದ್ಧನೌಕೆಗೆ ‘ಅಂಜದೀಪ’ ಎಂದು ಹೆಸರಿಸಲಾಗಿದೆ.
೩. ಲಾಭ: ಈ ಯುದ್ಧನೌಕೆಯು ದೇಶದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸಲಿದೆ ಮತ್ತು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ‘ಅಂಜದೀಪ’, ನೌಕಾಪಡೆಯ ಹಳೆ ಯುದ್ಧನೌಕೆಯ ಹೊಸ ರೂಪವಾಗಿದೆ, ಈ ನೌಕೆಯು ೨೦೦೩ ರಲ್ಲಿ ನಿವೃತ್ತಿಯಾಗಿತ್ತು.
ಈ ಯುದ್ಧನೌಕೆಯು ತುರ್ತು ಸಂದರ್ಭದಲ್ಲಿ ಗಂಟೆಗೆ ೨೫ ನಾಟ್ಸ್ ವೇಗವನ್ನು (ಗಂಟೆಗೆ ೪೬.೩ ಕಿಮೀ ವೇಗ) ತಲುಪಬಲ್ಲದು. ಇದನ್ನು ವಿಶೇಷವಾಗಿ ಸಮುದ್ರ ಯುದ್ಧದ ಪರಿಸರದಲ್ಲಿನ ಸವಾಲುಗಳನ್ನು ಎದುರಿಸಲು ನಿರ್ಮಿಸಲಾಗಿದೆ. ಈ ಯುದ್ಧನೌಕೆಯು ನೌಕಾಪಡೆಯ ಇದುವರೆಗಿನ ಅತಿದೊಡ್ಡ ‘ವಾಟರ್ ಜೆಟ್-ಪ್ರೊಪೆಲ್ಡ್ ಯುದ್ಧನೌಕೆ’ಯಾಗಿದೆ. ಇದರಿಂದ ಸಮುದ್ರದ ಆಳದಲ್ಲಿರುವ ಶತ್ರುಗಳ ಭೀತಿಯನ್ನು ಪತ್ತೆಹಚ್ಚಿ ನಾಶಪಡಿಸುವ ನೌಕಾಪಡೆಯ ಸಾಮರ್ಥ್ಯ ಹೆಚ್ಚಾಗಲಿದೆ. ನೌಕಾಪಡೆಯ ಕರಾವಳಿ ಕಣ್ಗಾವಲು ಮತ್ತು ಸಮುದ್ರದಲ್ಲಿ ಮೈನಿಂಗ್ ಮಾಡುವ ಸಾಮರ್ಥ್ಯವೂ ಈ ಯುದ್ಧನೌಕೆಯಿಂದ ವೃದ್ಧಿಯಾಗಲಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !