ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್‌ನಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಪಠಾಣ್‌ಕೋಟ್ (ಪಂಜಾಬ್) – “ಆಪರೇಷನ್ ಸಿಂದೂರ್ ಮುಂದುವರಿಯುತ್ತಿದೆ. ನಾವು ಪಾಕಿಸ್ತಾನಕ್ಕೆ ಈ ಕಾರ್ಯಾಚರಣೆಯ ಒಂದು ಸಣ್ಣ ಮಾದರಿಯನ್ನು ಮಾತ್ರ ತೋರಿಸಿದ್ದೆವು. ಕೇವಲ 4 ದಿನಗಳಲ್ಲಿಯೇ ಅವರು ಮಂಡಿಯೂರು ವಂತೆ ಮಾಡಲಾಗಿತ್ತು. ‘ಆಪರೇಷನ್ ಸಿಂದೂರ್ 2’ ನ ಸಿದ್ಧತೆಗಳು ಸಾಕಷ್ಟು ವ್ಯಾಪಕವಾಗಿವೆ. ಈ ಕಾರ್ಯಾಚರಣೆ ಯಾವ ರೀತಿ ನಡೆಯಲಿದೆ ಎಂಬುದನ್ನು ನಾನು ಈಗ ಹೇಳಲು ಸಾಧ್ಯವಿಲ್ಲ; ಏಕೆಂದರೆ ಅದು ನಾವು ಶತ್ರುಗಳಿಗೆ ಎಷ್ಟು ಹಾನಿ ಮಾಡಬೇಕೆಂದು ಬಯಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಅದು ಭೂಮಿಯ ಮೇಲಿರಲಿ, ಸಮುದ್ರದಲ್ಲಿರಲಿ ಅಥವಾ ಆಕಾಶದಲ್ಲಿರಲಿ, ನಾವು ಅದನ್ನು ಎದುರಿಸಲು ಸದಾ ಸಿದ್ಧರಿದ್ದೇವೆ,” ಎಂದು ಸೇನೆಯ ವೆಸ್ಟರ್ನ್ ಕಮಾಂಡ್‌ನ ಲೆಫ್ಟಿನೆಂಟ್ ಜನರಲ್ ರಾಜೇಶ್ ಪುಷ್ಕರ್ ಅವರು ಮಾಹಿತಿ ನೀಡಿದರು.
“ನಾವು ಮೊದಲಿಗಿಂತಲೂ ಉತ್ತಮವಾಗಿ ಸಜ್ಜಾಗಿದ್ದೇವೆ!” – ಲೆಫ್ಟಿನೆಂಟ್ ಜನರಲ್ ಮನೋಜ ಕುಮಾರ್ ಕಟಿಯಾರ್

ವೆಸ್ಟರ್ನ್ ಕಮಾಂಡ್‌ನ ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಮನೋಜ ಕುಮಾರ್ ಕಟಿಯಾರ್ ಅವರು ಮಾತನಾಡಿ, “ಸೇನೆಯು ಭವಿಷ್ಯದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸನ್ನದ್ಧವಾಗಿದೆ ಮತ್ತು ಪರಮಾಣು ಅಸ್ತ್ರಗಳ ಬೆದರಿಕೆಗಳಿಗೆ ಹೆದರುವುದಿಲ್ಲ. ಭವಿಷ್ಯದ ಯಾವುದೇ ಸಂಘರ್ಷದ ಫಲಿತಾಂಶವು ಭೂಮಿಯ ಮೇಲೆ ನಿರ್ಣಾಯಕವಾಗಿರುತ್ತದೆ,” ಎಂದರು. ‘ಆಪರೇಷನ್ ಸಿಂದೂರ್’’ ಸಮಯದಲ್ಲಿ ಪಾಕಿಸ್ತಾನವು ಒಂದು ಕಡೆ ಪರಮಾಣು ಬೆದರಿಕೆ ಹಾಕುತ್ತಿದ್ದರೆ, ಮತ್ತೊಂದು ಕಡೆ ಕದನ ವಿರಾಮಕ್ಕಾಗಿ ಹಪಹಪಿಸುತ್ತಿತ್ತು. ಪಾಕಿಸ್ತಾನವು, “ಒಂದು ವೇಳೆ ನಾವು ನಾಶವಾದರೆ, ಅರ್ಧ ಜಗತ್ತನ್ನು ನಮ್ಮೊಂದಿಗೆ ಕೊಂಡೊಯ್ಯುತ್ತೇವೆ” ಎಂದು ಹೇಳಿತ್ತು. ಆದರೆ ನಾವು ಅವರ ಬೆದರಿಕೆಗಳನ್ನು ನಿರ್ಲಕ್ಷಿಸಿದ್ದೆವು.
ಈ ಬಾರಿ ನಾವು ಮೊದಲಿಗಿಂತಲೂ ಉತ್ತಮವಾಗಿ ಸಜ್ಜಾಗಿದ್ದೇವೆ ಮತ್ತು ಭವಿಷ್ಯಕ್ಕಾಗಿ ನಮ್ಮ ಬಳಿ ಸ್ಪಷ್ಟ ಯೋಜನೆಯಿದೆ. ನಮ್ಮ ನಾಯಕತ್ವವು ದೇಶ ಮತ್ತು ಜನರ ಹಿತಕ್ಕಾಗಿ ಬದ್ಧವಾಗಿದೆ, ಆದರೆ ಅವರ ನಾಯಕತ್ವವು ಕೇವಲ ಅಧಿಕಾರದಲ್ಲಿರಲು ಮತ್ತು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸ್ವಾರ್ಥದಿಂದ ಪ್ರೇರಿತವಾಗಿದೆ. ಇದೇ ಕಾರಣಕ್ಕಾಗಿ ಅವರು ಭಾರತದೊಂದಿಗೆ ಯುದ್ಧದಂತಹ ಪರಿಸ್ಥಿತಿಯನ್ನು ಎಳೆದಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಭಾರತದೊಂದಿಗೆ ಮುಖಾಮುಖಿ ಹೋರಾಡುವ ಧೈರ್ಯವಾಗಲಿ ಅಥವಾ ಶಕ್ತಿಯಾಗಲಿ ಇಲ್ಲ; ಆದ್ದರಿಂದಲೇ ಅವರು ಪ್ರಚ್ಛನ್ನ ಯುದ್ಧದ (Proxy War) ಮೊರೆ ಹೋಗುತ್ತಿದ್ದಾರೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !