ಅಹಲ್ಯಾನಗರದ ಮಢಿ ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ನಿಷೇಧ ! Madhi Yatra Muslims Traders Banned

  • ಕೆಲವು ಮುಸಲ್ಮಾನ ವ್ಯಾಪಾರಿಗಳು ಮಾಂಸಾಹಾರ ಸೇವಿಸಿ ದೇವಸ್ಥಾನದ ಆವರಣಕ್ಕೆ ಬರುತ್ತಿದ್ದಾರೆಂದು ಸ್ಥಳೀಯರ ದೂರು

  • ಕ್ಷೇತ್ರ ಮಢಿಯ ಪವಿತ್ರತೆಯನ್ನು ಕಾಪಾಡಲು ಒಂದಾದ ಗ್ರಾಮಸ್ಥರು

ಅಹಿಲ್ಯಾನಗರ – ಕಳೆದ ವರ್ಷದಂತೆ ಈ ವರ್ಷವೂ ಜಾತ್ರೆಯಲ್ಲಿ ಮುಸಲ್ಮಾನ ವ್ಯಾಪಾರಿಗಳು ಮಳಿಗೆಗಳನ್ನು ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ. ಮಢಿ (ತಾ. ಪಾಥರ್ಡಿ) ಇಲ್ಲಿನ ಗ್ರಾಮ ಪಂಚಾಯತಿಯು ಈ ಬಗ್ಗೆ ಠರಾವು ಅಂಗೀಕರಿಸಿದೆ. ಮಢಿ ಗ್ರಾಮದ ಸರಪಂಚ ಸಂಜಯ ಮರಕಡ ಅವರು ಈ ನಿಲುವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ವರ್ಷ ಈ ನಿರ್ಧಾರದ ಬಗ್ಗೆ ದೊಡ್ಡ ವಿವಾದ ಉಂಟಾಗಿತ್ತು ಮತ್ತು ಈ ಪ್ರಕರಣವು ನ್ಯಾಯಾಲಯಕ್ಕೂ ಹೋಗಿತ್ತು. ಇನ್ನು ಅಂತಿಮ ತೀರ್ಪು ಬಾರದೇ ಇದ್ದರೂ, ‘ಈ ವರ್ಷವೂ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ’ ಎಂಬ ನಿಲುವನ್ನು ಮಾಜಿ ಸರಪಂಚ ಹಾಗೂ ಆಡಳಿತಾಧಿಕಾರಿ ಸಂಜಯ ಮರಕಡ ಪುನರುಚ್ಚರಿಸಿದ್ದಾರೆ.

ಕಳೆದ ವರ್ಷ ಮುಸಲ್ಮಾನ ವ್ಯಾಪಾರಿಗಳನ್ನು ವಿರೋಧಿಸುವ ಠರಾವು ೩೨೭ ಮತಗಳಿಂದ ಅಂಗೀಕಾರವಾಗಿತ್ತು. ಜಾತ್ರೆ-ಉತ್ಸವಗಳ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾಣಿಗಳ ಹತ್ಯೆ ಮಾಡಲಾಗುತ್ತಿತ್ತು. ಈ ಹತ್ಯೆಯು ಈಗ ಕಡಿಮೆಯಾಗಿದ್ದರೂ, ಸ್ವಲ್ಪ ಮಟ್ಟಿಗೆ ನಡೆಯುತ್ತಿದೆ ಮತ್ತು ಇದು ಮುಸಲ್ಮಾನ ಸಮಾಜದವರಿಂದಲೇ ನಡೆಯುತ್ತಿರುವುದರಿಂದ, ಮುಸಲ್ಮಾನ ಸಮಾಜಕ್ಕೆ ವ್ಯಾಪಾರ ಮಾಡಲು ಅವಕಾಶ ನೀಡದಿರುವ ನಿರ್ಧಾರವು ಸರಿಯಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ವಧರ್ಮ ಸಮಭಾವದ ನಿಲುವು ತಳೆಯುವುದಾದರೆ, ನಮಗೂ ಮಸೀದಿಗೆ ಹೋಗಿ ಕೀರ್ತನೆ ಮಾಡಲು ಅನುಮತಿ ನೀಡಲಿ! – ಸಂಜಯ ಮರಕಡ, ಸರಪಂಚ

ಗ್ರಾಮ ಪಂಚಾಯತಿಯ ಸರಪಂಚ ಸಂಜಯ ಮರಕಡ ಮಾತನಾಡಿ, ಜಾತ್ರೆಯ ಸಮಯದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅನುಮತಿ ನೀಡದಿರುವ ನಿರ್ಧಾರವನ್ನು ಗ್ರಾಮ ಪಂಚಾಯತಿಯು ಉದ್ದೇಶಪೂರ್ವಕವಾಗಿಯೇ ತೆಗೆದುಕೊಂಡಿದೆ. ಕಾನಿಫನಾಥ ಮಂದಿರವು ನಮಗೆ ಪವಿತ್ರವಾದ ಸ್ಥಳವಾಗಿದೆ. ‘ಕೆಲವು ಮುಸಲ್ಮಾನ ವ್ಯಾಪಾರಿಗಳು ಮಾಂಸಾಹಾರ ಸೇವಿಸಿ ದೇವಸ್ಥಾನದ ಆವರಣಕ್ಕೆ ಬರುತ್ತಾರೆ’ ಎಂದು ಸ್ಥಳೀಯರಿಂದ ಸತತವಾಗಿ ದೂರುಗಳು ಬರುತ್ತಿದ್ದವು. ದೇವಸ್ಥಾನದ ಆವರಣದಲ್ಲಿ ಇಂತಹ ವರ್ತನೆ ಸರಿಯಲ್ಲ ಎಂಬ ಭಾವನೆ ಗ್ರಾಮಸ್ಥರಲ್ಲಿದೆ. ಒಂದು ವೇಳೆ ಸರ್ವಧರ್ಮ ಸಮಭಾವದ ನಿಲುವು ತಳೆಯಬೇಕೆಂದಿದ್ದರೆ, ನಮಗೂ ಮಸೀದಿಗೆ ಹೋಗಿ ಕೀರ್ತನೆ ಮಾಡಲು ಅನುಮತಿ ನೀಡಬೇಕಾಗುತ್ತದೆ ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಸ್ಥಳೀಯ ಧಾರ್ಮಿಕ ಪರಂಪರೆ ಮತ್ತು ಗ್ರಾಮಸ್ಥರ ಭಾವನೆಗಳನ್ನು ಗೌರವಿಸಲು ಈ ಠರಾವು ಮಾಡಲಾಗಿದೆ ಎಂದು ಮರಕಡ ತಿಳಿಸಿದರು.

ಸಂಪಾದಕೀಯ ನಿಲುವು

  • ಹಿಂದೂಗಳ ಜಾತ್ರೆಗಳು ಆಧ್ಯಾತ್ಮಿಕ ಚೈತನ್ಯವನ್ನು ಪಡೆಯಲು ಇರುತ್ತವೆ. ಹಾಗಿರುವಾಗ ಅಲ್ಲಿ ಕೇವಲ ವ್ಯಾಪಾರಕ್ಕಾಗಿ ಬರುವ ಮತ್ತು ಹಿಂದೂ ದೇವತೆಗಳ ಮೇಲೆ ಶ್ರದ್ಧೆ ಇಲ್ಲದವರಿಗೆ ಅಲ್ಲಿ ಏಕೆ ಅವಕಾಶ ನೀಡಬೇಕು?
  • ಹಿಂದೂಗಳ ಶ್ರದ್ಧೆಯನ್ನು ತುಳಿಯುವ ಸಮಾಜಕ್ಕೆ ಹಿಂದೂಗಳ ಹಣದ ಮೇಲೆ ಅಧಿಕಾರವಿಲ್ಲ. ಇತರ ದೇವಸ್ಥಾನ ಸಮಿತಿಗಳು ಮತ್ತು ಗ್ರಾಮ ಪಂಚಾಯತಿಗಳು ಸಹ ಮಢಿಯ ಈ ಮಾದರಿಯನ್ನು ಎದುರಿಟ್ಟುಕೊಂಡು ತಮ್ಮ ತೀರ್ಥಕ್ಷೇತ್ರಗಳ ಪವಿತ್ರತೆಯನ್ನು ಕಾಪಾಡಲು ಟೊಂಕ ಕಟ್ಟಿ ನಿಲ್ಲುವುದು ಅವಶ್ಯಕವಾಗಿದೆ !