ವಿಶ್ವಸಂಸ್ಥೆಯಲ್ಲಿ ಜಮ್ಮು-ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತದಿಂದ ಮತ್ತೆ ತಪರಾಕಿ !

ನ್ಯೂಯಾರ್ಕ್ (ಅಮೆರಿಕಾ) – “ಪಾಕಿಸ್ತಾನಕ್ಕೆ ಬಹುಶಃ ಈ ವಿಷಯವನ್ನು ಎದುರಿಸುವುದು ಕಷ್ಟವಾಗಬಹುದು; ಆದರೆ ನಾನು ಅವರಿಗೆ ಹೇಳಬಯಸುವುದೇನೆಂದರೆ, ಕೇವಲ ಜಮ್ಮು-ಕಾಶ್ಮೀರದ ಅಭಿವೃದ್ಧಿ ಬಜೆಟ್ ಅವರ ಇಡೀ ದೇಶದ ‘ಬೇಲೌಟ್ ಪ್ಯಾಕೇಜ್’ (ತುರ್ತು ಆರ್ಥಿಕ ನೆರವು) ಗಿಂತ ದುಪ್ಪಟ್ಟಿಗೂ ಅಧಿಕವಾಗಿದೆ. ಪಾಕಿಸ್ತಾನವು ಸಹಾಯಕ್ಕಾಗಿ कटोರೆ (ಭಿಕ್ಷಾ ಪಾತ್ರೆ) ಹಿಡಿದು ಅಂತರಾಷ್ಟ್ರೀಯ ಹಣಕಾಸು ನಿಧಿಯ (IMF) ಮುಂದೆ ನಿಂತಿದೆ. ಅಲ್ಲದೆ ಪಾಕಿಸ್ತಾನವು ಒಂದು ರೀತಿಯ ‘ಲಾ ಲಾ ಲ್ಯಾಂಡ್’ ಅಂದರೆ ಅಸ್ತಿತ್ವದಲ್ಲಿಲ್ಲದ ಕಾಲ್ಪನಿಕ ಜಗತ್ತಿನಲ್ಲಿ ಬದುಕುತ್ತಿದೆ. ವಾಸ್ತವದಲ್ಲಿ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದು ಅದಕ್ಕೆ ತಿಳಿದಿಲ್ಲವೆಂದು ತೋರುತ್ತದೆ,” ಎಂದು ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 55 ನೇ ಅಧಿವೇಶನದಲ್ಲಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿತು. ಈ ಅಧಿವೇಶನದಲ್ಲಿ ಪಾಕಿಸ್ತಾನವು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿತ್ತು. ಆ ಸಮಯದಲ್ಲಿ ಭಾರತದ ಪ್ರತಿನಿಧಿ ಅನುಪಮಾ ಸಿಂಗ್ ಅವರು ಪಾಕಿಸ್ತಾನಕ್ಕೆ ಮೇಲಿನ ಮಾತುಗಳಲ್ಲಿ ತಿರುಗೇಟು ನೀಡಿದರು.
India reminds the world 🌍 that Jammu & Kashmir’s budget is nearly double the foreign aid Pakistan receives 💰
At the United Nations, India firmly rejected Pakistan’s repeated attempts to raise J&K 🇮🇳
Diplomatic rebuttals are important – but history shows some regimes ignore… pic.twitter.com/enP0sSplIW
— Sanatan Prabhat (@SanatanPrabhat) February 26, 2026
ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯ ವಿರುದ್ಧವೂ ಭಾರತದ ಟೀಕೆ
ಅನುಪಮಾ ಸಿಂಗ್ ಅವರು ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ OIC (ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್) ವಿರುದ್ಧವೂ ವಾಗ್ದಾಳಿ ನಡೆಸಿದರು.
ಅನುಪಮಾ ಸಿಂಗ್ ಅವರು,
1. ಪಾಕಿಸ್ತಾನ ದೇಶವು OIC ಜಾರಿಗೊಳಿಸಿದ ತಪ್ಪು ನೀತಿಗಳ ಗುಲಾಮನಾಗಿದೆ. ಈ ಸಂಘಟನೆಯು ಪಾಕಿಸ್ತಾನದ ರಾಜಕೀಯ ಹಿತಾಸಕ್ತಿಗಳಿಗಾಗಿ ತಪ್ಪುಗಳನ್ನು ಮಾಡುವ ಸಂಘಟನೆಯಾಗಿದೆ. ಪಾಕಿಸ್ತಾನವು OIC ಸಂಘಟನೆಯ ಕೈಗೊಂಬೆಯಾಗಿದೆ. ರಾಜಕೀಯ ಲಾಭಕ್ಕಾಗಿ ಈ ಸಂಘಟನೆಯನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ಈ ಸಂಘಟನೆಯೂ ಪಾಕಿಸ್ತಾನ ಸರಕಾರವನ್ನು ಬಳಸಿಕೊಳ್ಳುತ್ತಿದೆ.
2. ಪಾಕಿಸ್ತಾನ ದೇಶ ಮತ್ತು ಅದರ ಪ್ರತಿನಿಧಿಗಳು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ, ಅವರ ಮಾತುಗಳಿಗೆ ಯಾವುದೇ ಆಧಾರವಿರುವುದಿಲ್ಲ. ಪಾಕಿಸ್ತಾನ ಎಷ್ಟೇ ಅಪಪ್ರಚಾರ ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ.
3. 1947 ರಲ್ಲಿ ಜಮ್ಮು-ಕಾಶ್ಮೀರವು ಭಾರತದೊಂದಿಗೆ ವಿಲೀನಗೊಂಡಿದ್ದು ಅಸಮರ್ಪಕ ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ ಪಾಕಿಸ್ತಾನವೇ ನಮ್ಮ ದೇಶದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮವಾಗಿ ನಿಯಂತ್ರಣ ಸಾಧಿಸಿದ್ದು, ಈಗ ನಮ್ಮನ್ನೇ ದೂರುತ್ತಿದೆ.
4. ಜಮ್ಮು-ಕಾಶ್ಮೀರದಲ್ಲಿ ನಡೆದ ಮತದಾನದಲ್ಲಿ ಜನರು ಪಾಕಿಸ್ತಾನದ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ತಿರಸ್ಕರಿಸಿದ್ದಾರೆ. ಜಮ್ಮು-ಕಾಶ್ಮೀರದ ಜನರಿಗೆ ಅಭಿವೃದ್ಧಿ ಬೇಕು. ಆದ್ದರಿಂದ ಅಲ್ಲಿನ ಜನರು ಪ್ರಜಾಪ್ರಭುತ್ವದ ಹಾದಿಯನ್ನು ಸ್ವೀಕರಿಸುತ್ತಿದ್ದಾರೆ. ವಿಶ್ವದ ಅತಿದೊಡ್ಡ ರೈಲ್ವೆ ಸೇತುವೆ ಚೆನಾಬ್ ನದಿಯ ಮೇಲಿದೆ. ಒಂದು ವೇಳೆ ಪಾಕಿಸ್ತಾನಕ್ಕೆ ಅದು ಕಾಣಿಸುತ್ತಿಲ್ಲ ಎಂದರೆ, ಅದು ನಿಜವಾಗಿಯೂ ಭ್ರಮೆಯ ಜಗತ್ತಿನಲ್ಲಿ ಬದುಕುತ್ತಿದೆ ಎಂದರ್ಥ.
ಸಂಪಾದಕೀಯ ನಿಲುವುಭಾರತವು ಪಾಕಿಸ್ತಾನಕ್ಕೆ ಈ ರೀತಿಯಾಗಿ ಎಷ್ಟೇ ಚಾಟಿ ಬೀಸಿದರೂ, ದಪ್ಪ ಚರ್ಮದ ನಿರ್ಲಜ್ಜ ಪಾಕಿಸ್ತಾನದ ಮೇಲೆ ಯಾವುದೇ ಪರಿಣಾಮ ಬೀರದು. ಅದಕ್ಕೆ ಕೇವಲ ಶಸ್ತ್ರಾಸ್ತ್ರಗಳ ಭಾಷೆ ಮಾತ್ರ ಅರ್ಥವಾಗುತ್ತದೆ ಮತ್ತು ಅದೇ ಭಾಷೆಯಲ್ಲೇ ಅದಕ್ಕೆ ಉತ್ತರ ನೀಡಬೇಕು ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !