ನವಿ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇನ್ನೂ ೬ ನಗರಗಳಿಗೆ ವಿಮಾನ ಹಾರಾಟ ಆರಂಭ!

ನವಿ ಮುಂಬಯಿ – ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾರ್ಚ್ ೨೯ ರಿಂದ ಇಂಡಿಗೊ ಸಂಸ್ಥೆಯು ೬ ಪ್ರಮುಖ ನಗರಗಳಿಗೆ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ನವಿ ಮುಂಬಯಿ ವಿಮಾನ ನಿಲ್ದಾಣವು ಈಗ ದೇಶದ ‘ಟಿಯರ್-೨’ ಮತ್ತು ‘ಟಿಯರ್-೩’ ನಗರಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಲಿದೆ. ಕರ್ಣಾವತಿ, ರಾಜಕೋಟ, ದೀವ್, ಕೊಲ್ಲಾಪುರ, ಬೆಳಗಾವಿ ಮತ್ತು ಗೋವಾ ನಗರಗಳಿಗೆ ನೇರ ವಿಮಾನ ಸೇವೆ ಆರಂಭವಾಗಲಿವೆ.(ಟಿಯರ್-೨ ನಗರಗಳಲ್ಲಿ ಮಹಾನಗರಗಳಿಗೆ ಹೋಲಿಸಿದರೆ (ಟಿಯರ್-೧ ನಗರಗಳಿಗೆ ಹೋಲಿಸಿದರೆ) ಕಡಿಮೆ ವೆಚ್ಚದಲ್ಲಿ ವಾಸಿಸಬಹುದು, ಆದರೆ ಈ ನಗರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ, ಇನ್ನು ‘ಟಿಯರ್-೩’ ನಗರಗಳು ಅಭಿವೃದ್ಧಿ ಹೊಂದುತ್ತಿರುವ ಮತ್ತು ೧೦ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಾಗಿವೆ.)

ಫೆಬ್ರವರಿ ೧ ರಿಂದ ನವಿ ಮುಂಬಯಿ ಇಂದ ೨೪ ಗಂಟೆಗಳ ಕಾಲ ವಿಮಾನ ಹಾರಾಟ ಆರಂಭವಾಗಿದ್ದು, ವಿಮಾನಗಳ ಸಂಖ್ಯೆಯಲ್ಲೂ ಹೆಚ್ಚಳ ಮಾಡಲಾಗುತ್ತಿದೆ. ಪ್ರಯಾಣಿಕರ ಸಾರಿಗೆಯ ಜೊತೆಗೆ ಸರಕು ಸಾಗಣೆ (ಕಾರ್ಗೋ) ವಿಮಾನ ಸೇವೆಯೂ ಆರಂಭವಾಗಲಿದೆ.