
ನವದೆಹಲಿ – ವಿಶ್ವದ ಅತಿದೊಡ್ಡ ಯುರೇನಿಯಂ ಉತ್ಪಾದಕ ರಾಷ್ಟ್ರವಾದ ಕಜಕಸ್ತಾನವು ಭಾರತದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಭಾರತದ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಕಜಕಸ್ತಾನವು ಯುರೇನಿಯಂ ಇಂಧನವನ್ನು ಪೂರೈಸಲಿದೆ. ಕಜಕಸ್ತಾನದ ಸರಕಾರಿ ಸ್ವಾಮ್ಯದ ಯುರೇನಿಯಂ ಸಂಸ್ಥೆ ‘ಕಾಜಾಟೋಮ್‌ಪ್ರಾಮ್’ (Kazatomprom) ಭಾರತದ ಪರಮಾಣು ಶಕ್ತಿ ಇಲಾಖೆಯೊಂದಿಗೆ ಮಾತುಕತೆ ನಡೆಸಿದ ನಂತರ ಈ ಘೋಷಣೆ ಮಾಡಿದೆ.
೧. ಮೂಲತಃ ಕಳೆದ ೬-೭ ವರ್ಷಗಳಿಂದ ಎರಡೂ ದೇಶಗಳ ನಡುವೆ ಯುರೇನಿಯಂ ಸಂಬಂಧಿತ ವ್ಯಾಪಾರವು ಸ್ಥಗಿತಗೊಂಡಿತ್ತು. ಯುರೇನಿಯಂ ಪೂರೈಕೆ ಒಪ್ಪಂದದ ಕುರಿತು ಮಾತುಕತೆಗಳು ನಡೆಯುತ್ತಿದ್ದವು.
೨. ಜನವರಿ ೨೦೦೯ರಲ್ಲಿ ‘ಕಾಜಾಟೋಮ್‌ಪ್ರಾಮ್’ ಸಂಸ್ಥೆಯು ಭಾರತಕ್ಕೆ ೨,೧೦೦ ಟನ್ ಯುರೇನಿಯಂ ಪೂರೈಸಲು ‘ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ’ (NPCIL) ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಜುಲೈ ೨೦೧೫ರಲ್ಲಿ ಮುಂದಿನ ೪ ವರ್ಷಗಳಿಗಾಗಿ ೫,೦೦೦ ಟನ್ ಯುರೇನಿಯಂ ಪೂರೈಸುವ ಹೊಸ ಒಪ್ಪಂದವಾಗಿತ್ತು. ಆದರೆ ಕಳೆದ ೬-೭ ವರ್ಷಗಳಿಂದ ಈ ಒಪ್ಪಂದವು ಸ್ಥಗಿತಗೊಂಡಿತ್ತು.
ಭಾರತವು ಯುರೇನಿಯಂ ಅನ್ನು ಎಲ್ಲಿಂದ ಪಡೆಯುತ್ತದೆ?
ಪ್ರಸ್ತುತ ಭಾರತವು ಮುಖ್ಯವಾಗಿ ರಷ್ಯಾ, ಉಜ್ಬೇಕಿಸ್ತಾನ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಇತರ ದೇಶಗಳಿಂದ ಯುರೇನಿಯಂ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!