ಅಶ್ಲೀಲತೆ ಹರಡುತ್ತಿದ್ದ ೫ ‘ಓಟಿಟಿ ಪ್ಲಾಟ್‌ಫಾರ್ಮ್’ಗಳ ಮೇಲೆ ನಿಷೇಧ OTT Apps Banned

(‘ಓಟಿಟಿ ಪ್ಲಾಟ್‌ಫಾರ್ಮ್’ ಎಂದರೆ ‘ಓವರ್ ದಿ ಟಾಪ್ ಪ್ಲಾಟ್‌ಫಾರ್ಮ್’. ಚಲನಚಿತ್ರ, ಧಾರಾವಾಹಿ ಮುಂತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಆನ್‌ಲೈನ್ ಮಾಧ್ಯಮಗಳು)

ನವ ದೆಹಲಿ – ಕೇಂದ್ರ ಸರಕಾರವು ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡುತ್ತಿದ್ದ ೫ ‘ಓಟಿಟಿ ಪ್ಲಾಟ್‌ಫಾರ್ಮ್’ಗಳ ಮೇಲೆ ಫೆಬ್ರವರಿ ೨೪ ರಂದು ಕ್ರಮ ಕೈಗೊಂಡು ನಿಷೇಧ ಹೇರಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಠಿಣ ನಿಲುವು ತಳೆದು ‘ಮೂಡ್ ಎಕ್ಸ್ ವಿಐಪಿ’, ‘ಕೋಯಲ್ ಪ್ಲೇಪ್ರೊ’, ‘ಡಿಜಿ ಮೂವಿಪ್ಲೆಕ್ಸ್’, ‘ಫೀಲ್’ ಮತ್ತು ‘ಜುಗ್ನು’ ಎಂಬ ಮಾಧ್ಯಮಗಳನ್ನು ಬಂದ್ ಮಾಡಿದೆ. ಇವುಗಳನ್ನು ಇನ್ನು ಮುಂದೆ ಭಾರತದಲ್ಲಿ ವೀಕ್ಷಿಸಲು ಸಾಧ್ಯವಿಲ್ಲ.

೧.ಈ ‘ಪ್ಲಾಟ್‌ಫಾರ್ಮ್‌’ಗಳು ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸುತ್ತಿದ್ದವು. ಸರಕಾರಿ ಅಧಿಕಾರಿಗಳ ಮಾಹಿತಿಯ ಪ್ರಕಾರ, ಇವುಗಳ ಮೂಲಕ ಪ್ರಸಾರವಾಗುತ್ತಿದ್ದ ವಿಷಯಗಳು ಅತ್ಯಂತ ಆಕ್ಷೇಪಾರ್ಹವಾಗಿದ್ದವು.

೨. ಈ ಕ್ರಮವನ್ನು ‘ಮಾಹಿತಿ ತಂತ್ರಜ್ಞಾನ ಕಾಯ್ದೆ ೨೦೦೦’ರ ಕಲಂ ‘೬೯ ಎಎ’ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಆನ್‌ಲೈನ್ ವಿಷಯಗಳನ್ನು ತಡೆಯುವ ಪೂರ್ಣ ಅಧಿಕಾರ ಸರಕಾರಕ್ಕಿದೆ. ಈ ಹಿಂದೆಯೂ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ‘ಅಶ್ಲೀಲತೆಯನ್ನು ಹರಡುವ ಮಾಧ್ಯಮಗಳಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ’, ಎಂದು ಸರಕಾರವು ಸ್ಪಷ್ಟಪಡಿಸಿದೆ.

೩. ಇದಕ್ಕೂ ಮೊದಲು ಜುಲೈ ೨೦೨೫ ರಲ್ಲಿ ‘ಅಲ್ಟ್’ ಮತ್ತು ‘ಉಲ್ಲು’ ನಂತಹ ೨೫ ‘ಪ್ಲಾಟ್‌ಫಾರ್ಮ್’ಗಳ ಮೇಲೆ ನಿಷೇಧ ಹೇರಲಾಗಿತ್ತು. ೨೦೨೩ ರಲ್ಲಿಯೂ ೧೮ ‘ಪ್ಲಾಟ್‌ಫಾರ್ಮ್’ಗಳನ್ನು ಬಂದ್ ಮಾಡಲಾಗಿತ್ತು. ಈ ‘ಪ್ಲಾಟ್‌ಫಾರ್ಮ್’ಗಳ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕವೂ ನಗ್ನತೆ ಮತ್ತು ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿತ್ತು.