‘ಗಾಂಧಿ ಕುಟುಂಬವು ನೆರವು ಕೇಳಿದರೆ 1 ಸಾವಿರ ಕೋಟಿ ರೂಪಾಯಿಗಳನ್ನೂ ಸಂಗ್ರಹಿಸುತ್ತೇವೆ!’ – CM Revanth Reddy

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇವರಿಂದ ಜಿಲ್ಲಾ ಕಾಂಗ್ರೆಸ್ ಕಮೀಟಿ ಸಭೆಯಲ್ಲಿನ ಹೇಳಿಕೆ

ಭಾಗ್ಯನಗರ (ತೆಲಂಗಾಣ) – ಗಾಂಧಿ ಕುಟುಂಬಕ್ಕೆ ಅಗತ್ಯವಿದ್ದರೆ ಆರ್ಥಿಕ ಸಹಾಯ ಮಾಡಲು ಸಿದ್ಧರಾಗಿರಿ. ಗಾಂಧಿ ಕುಟುಂಬದವರು ಸಹಾಯ ಕೇಳಿದರೆ ನಾನು 1 ಸಾವಿರ ಕೋಟಿ ರೂಪಾಯಿಗಳನ್ನೂ ಸಂಗ್ರಹಿಸಬಲ್ಲೆ ಎಂದು ತೆಲಂಗಾಣದ ಕಾಂಗ್ರೆಸ್ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇಲ್ಲಿನ ಹರಿತಾ ವ್ಯಾಲಿ ರೆಸಾರ್ಟ್‌ನಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ ಭಾಜಪ ಮತ್ತು ಭಾರತ್ ರಾಷ್ಟ್ರ ಸಮಿತಿ (BRS) ಪಕ್ಷಗಳು ತೆಲಂಗಾಣ ರಾಜ್ಯ ಕಾಂಗ್ರೆಸ್ ಸಮಿತಿಯನ್ನು ಗಾಂಧಿ ಕುಟುಂಬದ ‘ಎಟಿಎಂ’ (ಆಟೋ ಮೇಟೆಡ್ ಟೆಲರ್ ಮಷೀನ್ ಸ್ವಯಂಚಾಲಿತ ನಗದು ವಿತರಣಾ ಯಂತ್ರ) ಎಂದು ಕರೆದಿವೆ.

ಮುಖ್ಯಮಂತ್ರಿಗಳಿಗೆ ನಾಚಿಕೆಯಾಗಬೇಕು! – ಭಾಜಪ

“ರಾಜ್ಯದ ಬೊಕ್ಕಸದ ಮೇಲೆ ಒತ್ತಡವಿರುವಾಗ, ಕಲ್ಯಾಣ ಯೋಜನೆಗಳು ಬಾಕಿ ಇರುವಾಗ ಮತ್ತು ನೌಕರರ ಸಂಬಳ ವಿಳಂಬವಾಗುತ್ತಿರುವಾಗ, ಮುಖ್ಯಮಂತ್ರಿಗಳು ಒಂದು ಕುಟುಂಬಕ್ಕಾಗಿ ಹಣ ಸಂಗ್ರಹಿಸುವ ಬಗ್ಗೆ ಹೇಗೆ ಮಾತನಾಡುತ್ತಾರೆ? ಮುಖ್ಯಮಂತ್ರಿಗಳಿಗೆ ಈ ವಿಷಯದಲ್ಲಿ ನಾಚಿಕೆಯಾಗಬೇಕು,” ಎಂದು ಭಾಜಪದ ರಾಜ್ಯ ಮುಖ್ಯ ವಕ್ತಾರ ಎನ್.ವಿ. ಸುಭಾಷ್ ಕಿಡಿಕಾರಿದ್ದಾರೆ.

ಉಪಮುಖ್ಯಮಂತ್ರಿಗಳ ಸ್ಪಷ್ಟನೆ

ಈ ಕುರಿತು ಸ್ಪಷ್ಟನೆ ನೀಡಿದ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, “ಮುಖ್ಯಮಂತ್ರಿಗಳ ಉದ್ದೇಶವು ಸಾಮೂಹಿಕ ಶಕ್ತಿಯ ಬಗ್ಗೆ ಇತ್ತೇ ಹೊರತು, ಯಾವುದೇ ಕಾನೂನುಬಾಹಿರ ವಸೂಲಾತಿಯ ಬಗ್ಗೆ ಇರಲಿಲ್ಲ” ಎಂದು ಹೇಳಿದ್ದಾರೆ. (ಈ ಸ್ಪಷ್ಟನೆಯನ್ನು ಚಿಕ್ಕ ಮಗು ವಾದರು ನಂಬಲು ಸಾಧ್ಯವೇ? – ಸಂಪಾದಕರು)

ಸಂಪಾದಕೀಯ ನಿಲುವು

  • ಕೆಲವೇ ವಾರಗಳ ಹಿಂದೆ ಕಾಂಗ್ರೆಸ್‌ನಿಂದ ಉಚ್ಚಾಟಿತರಾದ ಪಂಜಾಬ್‌ನ ನವಜೋತ್ ಕೌರ್ ಅವರು, ‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿ ನೀಡಬೇಕಾಗುತ್ತದೆ’ ಎಂದು ಆರೋಪಿಸಿದ್ದರು. ರೆಡ್ಡಿ ಅವರ ಇಂದಿನ ಹೇಳಿಕೆಯನ್ನು ನೋಡಿದರೆ, ‘ಈಗ ಆ ಮೊತ್ತ 1 ಸಾವಿರ ಕೋಟಿ ರೂಪಾಯಿಗಳಿಗೆ ಏರಿದೆಯೇ?’ ಎಂಬ ಪ್ರಶ್ನೆ ಯಾರಿಗಾದರೂ ಮೂಡಿದರೆ ಅದು ತಪ್ಪಾಗಲಾರದು!
  • ಭಾರತದಲ್ಲಿ ಎಲ್ಲಾ ಪಕ್ಷಗಳ ಸರಕಾರಗಳು ಈ ರೀತಿ ಹಣ ಸಂಗ್ರಹಿಸಿ ಪಕ್ಷಕ್ಕೆ ನೀಡಬೇಕಾಗುತ್ತದೆ. ಯಾರು ಹೆಚ್ಚು ಹಣ ಸಂಗ್ರಹಿಸುತ್ತಾರೋ ಅವರಿಗೆ ಪದವಿ ನೀಡಲಾಗುತ್ತದೆ, ಇಲ್ಲದಿದ್ದರೆ ಅವರನ್ನು ಹೊರಹಾಕಲಾಗುತ್ತದೆ. ಇಂತಹ ರಾಜಕಾರಣದಿಂದ ದೇಶ ಎಂದಾದರೂ ಸಮಗ್ರ ಪ್ರಗತಿ ಹೊಂದಲು ಸಾಧ್ಯವೇ? ಭ್ರಷ್ಟಾಚಾರ ಮುಕ್ತವಾಗಲು ಸಾಧ್ಯವೇ?