
ತಿರುವನಂತಪುರಂ (ಕೇರಳ) – ‘ದ ಕೇರಳ ಸ್ಟೋರಿ ೨’ ಚಲನಚಿತ್ರದ ವಿರುದ್ಧ ಕೇರಳ ಉಚ್ಚ ನ್ಯಾಯಾಲಯದಲ್ಲಿ ಮೂರು ಅರ್ಜಿಗಳನ್ನು ದಾಖಲಿಸಲಾಗಿದ್ದು, ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಈ ಅರ್ಜಿಗಳ ಕುರಿತು ಫೆಬ್ರವರಿ ೨೪ ರಂದು ನಡೆದ ವಿಚಾರಣೆಯಲ್ಲಿ, ಉಚ್ಚ ನ್ಯಾಯಾಲಯವು ಚಲನಚಿತ್ರಕ್ಕೆ ನೀಡಿರುವ ಪ್ರಮಾಣಪತ್ರದ ಬಗ್ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸೆನ್ಸಾರ್ ಮೋರ್ಡ್) ಪ್ರಶ್ನೆಗಳನ್ನು ಕೇಳಿದೆ. ‘ಚಲನಚಿತ್ರದಿಂದ ಧಾರ್ಮಿಕ ಉದ್ವಿಗ್ನತೆ ಹೆಚ್ಚಾಗಬಹುದು. ಕೇರಳದಂತಹ ಜಾತ್ಯತೀತ ರಾಜ್ಯವನ್ನು ಧಾರ್ಮಿಕ ದೃಷ್ಟಿಕೋನದಿಂದ ಚಿತ್ರಿಸಲಾಗುತ್ತಿದ್ದರೆ ಮಂಡಳಿಯ ಪಾತ್ರವು ಅತ್ಯಂತ ಮಹತ್ವದ್ದಾಗುತ್ತದೆ’, ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಹೇಳಿದ್ದು:
೧. ಕೇರಳವು ಅತ್ಯಂತ ಜಾತ್ಯತೀತ ರಾಜ್ಯವಾಗಿದೆ, ಇಲ್ಲಿ ಸಂಪೂರ್ಣ ಸಾಮರಸ್ಯವಿದೆ; ಆದರೆ ಯಾವುದೋ ಒಂದು ಘಟನೆಯು ಇಡೀ ರಾಜ್ಯದಲ್ಲಿ ನಡೆದಂತೆ ತೋರಿಸಿದಾಗ, ಅದರ ಬಗ್ಗೆ ಆಲೋಚಿಸಲಾಗಿದೆಯೇ? ಅದರಿಂದ ತಪ್ಪು ಸಂದೇಶ ರವಾನೆಯಾಗಬಹುದು ಮತ್ತು ಭಾವನೆಗಳು ಭುಗಿಲೇಳಬಹುದು. ಇಂತಹ ಸಂದರ್ಭದಲ್ಲಿ ಸೆನ್ಸಾರ್ ಮಂಡಳಿಯ ಪಾತ್ರ ಮುಖ್ಯವಾಗಿರುತ್ತದೆ. ಚಲನಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ ಎಂದು ಪ್ರತಿಪಾದಿಸಲಾಗುತ್ತಿರುವುದರಿಂದ, ತಪ್ಪು ಚಿತ್ರಣ ಮತ್ತು ಧಾರ್ಮಿಕ ಉದ್ವಿಗ್ನತೆ ಸೃಷ್ಟಿಯಾಗುವ ಬಗ್ಗೆ ಅರ್ಜಿದಾರರು ವ್ಯಕ್ತಪಡಿಸಿರುವ ಕಳವಳಗಳು ಸರಿಯಾಗಿವೆ ಎಂದು ತೋರುತ್ತದೆ.
೨. ಚಲನಚಿತ್ರದ ಹೆಸರಿನಲ್ಲಿ ‘ಕೇರಳ’ ಎಂಬ ಉಲ್ಲೇಖವಿರುವುದರಿಂದ ರಾಜ್ಯದ ಜನರ ಆತಂಕಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.. ಸಾಮಾನ್ಯವಾಗಿ ನ್ಯಾಯಾಲಯವು ಯಾವುದೇ ಚಲನಚಿತ್ರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ; ಏಕೆಂದರೆ ಅದು ಒಂದು ಕಲೆಯಾಗಿರುತ್ತದೆ. ಆದರೆ ನೀವು ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ ಎಂದು ಹೇಳುತ್ತೀರಿ ಮತ್ತು ಅದಕ್ಕೆ ‘ಕೇರಳ’ ಎಂದು ಹೆಸರಿಡುತ್ತೀರಿ, ಇದರಿಂದ ಧಾರ್ಮಿಕ ಉದ್ವಿಗ್ನತೆ ಉಂಟಾಗಬಹುದು.
೩. ಸೃಜನಶೀಲ ಸ್ವಾತಂತ್ರ್ಯವಿರುತ್ತದೆ; ಆದರೆ ಪ್ರಮಾಣೀಕರಣ ಮಂಡಳಿಯು ವಿಧಿಸಿರುವ ಕೆಲವು ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ನಿಮಗೆ ಇದರ ಅರಿವಿದೆಯೇ ಎಂಬುದು ಪ್ರಶ್ನೆಯಾಗಿದೆ. ಇದು ಕೇವಲ ಕಲ್ಪನೆಯಲ್ಲದೆ, ನೈಜ ಘಟನೆಗಳಿಂದ ಪ್ರೇರಿತವಾಗಿದೆ ಎಂದು ನೀವು ಹೇಳುತ್ತಿರುವುದು ಇಲ್ಲಿ ಮಹತ್ವದ್ದಾಗಿದೆ.
ನ್ಯಾಯಾಲಯದ ನಿರ್ಧಾರದವರೆಗೆ ಟೀಸರ್ (ಕಿರು ಜಾಹೀರಾತು) ತೆಗೆದುಹಾಕಲು ನಿರ್ಮಾಪಕರ ಸಮ್ಮತಿ
ಚಿತ್ರದ ನಿರ್ಮಾಪಕರ ಪರವಾಗಿ ವಾದಿಸಿದ ವಕೀಲ ಎಸ್. ಶ್ರೀಕುಮಾರ ಅವರು ನ್ಯಾಯಾಲಯದ ನಿರ್ಧಾರದವರೆಗೆ ಬಿಡುಗಡೆ ಮಾಡಲಾದ ಟೀಸರ್ ಅನ್ನು ತೆಗೆದುಹಾಕಲು ಒಪ್ಪಿಗೆ ಸೂಚಿಸಿದರು. ಅಲ್ಲದೆ, ನ್ಯಾಯಮೂರ್ತಿ ಕುರಿಯನ್ ಅವರು ನಿರ್ಧಾರ ನೀಡುವ ಮೊದಲು ಚಿತ್ರವನ್ನು ವೀಕ್ಷಿಸಲು ವಿಶೇಷ ಪ್ರದರ್ಶನವನ್ನು ಏರ್ಪಡಿಸಬಹುದು ಎಂದೂ ವಕೀಲರು ತಿಳಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ