ಯಾರು ವಂದೇ ಮಾತರಂ ಎನ್ನುವುದಿಲ್ಲವೋ, ಅವರು ಮಹಾತ್ಮ ಗಾಂಧಿಯವರು ನೀಡಿದ ಪಾಕಿಸ್ತಾನಕ್ಕೆ ಹೊರಟು ಹೋಗಲಿ! – ಬಸನಗೌಡ ಪಾಟೀಲ್ ಯತ್ನಾಳ್

ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತ

ವಿಜಯಪುರ – ಯಾರು ವಂದೇ ಮಾತರಂ ಹೇಳುವುದಿಲ್ಲವೋ ಅಥವಾ ಮಾತೃಭೂಮಿಗೆ ವಂದಿಸುವುದಿಲ್ಲವೋ, ಅವರು ಮಹಾತ್ಮ ಗಾಂಧಿಯವರು ನೀಡಿದ ಪಾಕಿಸ್ತಾನಕ್ಕೆ ಹೊರಟು ಹೋಗಲಿ. ಈ ದೇಶದಲ್ಲಿ ಇರಬೇಕಾದರೆ ವಂದೇ ಮಾತರಂ ಹೇಳಲೇಬೇಕು. ನಮಗೆ ಅಂಬೇಡ್ಕರ್ ಅವರೇ ಸಾಕು. ನಮಗೆ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ, ಅವರು ಪಾಕಿಸ್ತಾನದ ರಾಷ್ಟ್ರಪಿತ. ನಾವು ಅವರನ್ನು ನಮ್ಮ ರಾಷ್ಟ್ರಪಿತ ಎಂದು ಒಪ್ಪುವುದಿಲ್ಲ. ನಾವು ನೆಹರೂ ಅವರನ್ನು ಕೂಡ ನಮ್ಮ ಮೊದಲ ಪ್ರಧಾನಿ ಎಂದು ಒಪ್ಪುವುದಿಲ್ಲ. ನಮ್ಮ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆಗಿದ್ದರು ಎಂದು ಭಾಜಪದಿಂದ ಅಮಾನತ್ತಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಅವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಈ ಹೇಳಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಲು ಆರಂಭಿಸಿದೆ.

ಕಾಂಗ್ರೆಸ್ ನಾಯಕ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಈ ಹೇಳಿಕೆಯನ್ನು ವಿರೋಧಿಸಿದ್ದಾರೆ. ಇದು ಗಾಂಧೀಜಿಯವರ ಕೊಡುಗೆಗೆ ಮಾಡಿದ ಅವಮಾನವಾಗಿದೆ. ಗಾಂಧೀಜಿಯವರು ಇಡೀ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದರು (ಈ ಹೇಳಿಕೆಯು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿಗಳಿಗೆ ಮಾಡಿದ ಅವಮಾನವಲ್ಲವೇ? – ಸಂಪಾದಕರು). ಪಾಕಿಸ್ತಾನದ ವಿಭಜನೆಯು ಬ್ರಿಟಿಷರ ನೀತಿಯ ಫಲಿತಾಂಶವಾಗಿತ್ತು (ಬ್ರಿಟಿಷರ ನೀತಿಯಲ್ಲ, ಬದಲಿಗೆ ಮಹಾತ್ಮ ಗಾಂಧಿಯವರ ಹಠ ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರ ‘ಮುಸ್ಲಿಂ ಲೀಗ್’ ಪಿತೂರಿಯ ಫಲಿತಾಂಶವಾಗಿತ್ತು ಎಂಬ ಸತ್ಯವನ್ನು ಮರೆಮಾಚಬೇಡಿ! – ಸಂಪಾದಕರು). ಇಂತಹ ಶಾಸಕರ ಮೇಲೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಕೂಡ ಈ ಹೇಳಿಕೆಯನ್ನು ವಿಭಜಕ ರಾಜಕಾರಣ ಎಂದು ಕರೆದು ತಿರಸ್ಕರಿಸಿದ್ದಾರೆ. (ಬಂಗಾಳದಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಭಾರತದ ಪುನರ್ ವಿಭಜನೆ ಮಾಡಿ ‘ಪೂರ್ವ ಬಾಂಗ್ಲಾದೇಶ’ ನಿರ್ಮಿಸುವ ಪಿತೂರಿ ತೃಣಮೂಲ ಕಾಂಗ್ರೆಸ್ ನೇತೃತ್ವದಲ್ಲೇ ನಡೆಯುತ್ತಿದೆ ಎಂದೆನಿಸುತ್ತದೆ, ಅದರ ಬಗ್ಗೆ ಏನು ಹೇಳುತ್ತೀರಿ? – ಸಂಪಾದಕರು).

ಇನ್ನೊಂದೆಡೆ ಭಾಜಪ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು, ‘ಶಾಸಕ ಯತ್ನಾಳ್ ಅವರ ಹೇಳಿಕೆಯು ವೈಯಕ್ತಿಕವಾದದ್ದು. ಪಕ್ಷಕ್ಕೂ ಆ ಹೇಳಿಕೆಗೂ ಸಂಬಂಧವಿಲ್ಲ ಮತ್ತು ನಾವು ಗಾಂಧಿ ಹಾಗೂ ಅಂಬೇಡ್ಕರ್ ಇಬ್ಬರನ್ನೂ ಗೌರವಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.