ಬಲವಂತದ ಮತಾಂತರ; ನಿಕಾಹ್ !

ಮಿರ್ಜಾಪುರ (ಉತ್ತರ ಪ್ರದೇಶ) – ಇಲ್ಲಿನ ಮಹಮ್ಮದಪುರ, ಚುನಾರ್ ಪ್ರದೇಶದ ನಿವಾಸಿಗಳಾದ ಸುಹೇಲ್ ಖಾನ್, ಕರಾಮತ್ ಖಾನ್ ಮತ್ತು ನಿಯಾಮತ್ ಖಾನ್ ಎಂಬುವವರು ಓರ್ವ ಹಿಂದೂ ಯುವತಿಯನ್ನು ಪುಸಲಾಯಿಸಿ ಅಪಹರಿಸಿದರು. ನಂತರ ಬಲವಂತವಾಗಿ ಮತಾಂತರ ಮಾಡಿ ಸುಹೇಲ್ ಆಕೆಯೊಂದಿಗೆ ವಿವಾಹವಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ನಡೆಸುತ್ತಿದ್ದಾರೆ.
೧. ಗ್ರಾಮದ ಸುಹೇಲ್ ಖಾನ್ ಎಂಬಾತನು ಸಂತ್ರಸ್ತ ಯುವತಿಗೆ ಆಮಿಷವೊಡ್ಡಿ ಪ್ರೇಮದ ಬಲೆಯಲ್ಲಿ ಸಿಲುಕಿಸಿದ್ದನು. ನಂತರ ಆಕೆಯನ್ನು ಪುಸಲಾಯಿಸಿ ಅಪಹರಿಸಿದ್ದನು.
೨. ಫೆಬ್ರವರಿ ೧೩, ೨೦೨೬ ರ ರಾತ್ರಿ ಯುವತಿಯು ಮನೆಯಿಂದ ಚಿನ್ನ-ಬೆಳ್ಳಿ ಆಭರಣಗಳು ಮತ್ತು ಸುಮಾರು ೯೦,೦೦೦ ರೂಪಾಯಿಗಳ ದಾಖಲೆಗಳೊಂದಿಗೆ ಹೊರಟು ಹೋಗಿದ್ದಳು ಎಂದು ಆರೋಪಿಸಲಾಗಿದೆ.
೩. ಮಗಳ ಅಪಹರಣವಾಗಿರುವುದು ತಿಳಿಯುತ್ತಿದ್ದಂತೆಯೇ ಸಂತ್ರಸ್ತೆಯ ತಾಯಿ ಚುನಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಫೆಬ್ರವರಿ ೧೬, ೨೦೨೬ ರಂದು ವಾರಣಾಸಿಯ ರಾಮಾಪುರ ಪ್ರದೇಶದಿಂದ ಯುವತಿಯನ್ನು ರಕ್ಷಿಸಿದ್ದಾರೆ.
೪. ಬಿಡುಗಡೆಯಾದ ನಂತರ ಸಂತ್ರಸ್ತ ಯುವತಿಯು ಪೊಲೀಸರಿಗೆ ಮಾಹಿತಿ ನೀಡುತ್ತಾ, ಫೆಬ್ರವರಿ ೧೫ ರಂದು ನ ನನ್ನನ್ನು ವಾರಣಾಸಿಯ ಮಸೀದಿಯೊಂದಕ್ಕೆ ಕರೆದೊಯ್ದು ಮತಾಂತರ ಮಾಡಲಾಯಿತು ಮತ್ತು ನಂತರ ಸುಹೇಲ್ ಜೊತೆ ವಿವಾಹ ಮಾಡಿಸಲಾಯಿತು ಎಂದು ತಿಳಿಸಿದ್ದಾಳೆ.
೫. ಈ ಪ್ರಕರಣದ ಮುಖ್ಯ ಆರೋಪಿ ಸುಹೇಲ್ ಖಾನ್, ಯುವತಿಯನ್ನು ಪ್ರೇಮ ಜಾಲದಲ್ಲಿ ಸಿಲುಕಿಸಿ ನಿಕಾಹ್ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಪ್ರಖರ ಹಿಂದುತ್ವವಾದಿ ಮುಖ್ಯಮಂತ್ರಿಗಳಿರುವ ಉತ್ತರ ಪ್ರದೇಶದಲ್ಲಿಯೇ ಮತಾಂಧ ಮುಸಲ್ಮಾನರು ‘ಲವ್ ಜಿಹಾದ್’ ಮಾಡುವ ಧೈರ್ಯ ಮಾಡುತ್ತಾರೆಂದರೆ, ಇನ್ನುಳಿದ ರಾಜ್ಯಗಳಲ್ಲಿ ಈ ಮತಾಂಧರು ಎಷ್ಟು ಅಟ್ಟಹಾಸ ಮೆರೆಯುತ್ತಿರಬಹುದು ಎಂಬುದನ್ನು ವಿಚಾರ ಮಾಡಿ. ಹಿಂದೂಗಳೇ, ಇಂದೇ ಎಚ್ಚೆತ್ತುಕೊಳ್ಳಿ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!